ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಗೆ ಬರಲಿದೆ Oxygen Concentrator; ಓಲಾದಲ್ಲಿ ಬುಕ್ ಮಾಡಿ

|
Google Oneindia Kannada News

ಬೆಂಗಳೂರು, ಮೇ 12; ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್‌ ಬೆಡ್‌ಗೆ ಭಾರೀ ಬೇಡಿಕೆ ಇದೆ. ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಸಹ ಆಕ್ಸಿಜನ್ ಅಗತ್ಯವಿರುತ್ತದೆ. ಇದರಿಂದಾಗಿ ಆಕ್ಸಿಜನ್ ಕಾನ್ಸ್‌ನ್‌ಟೇಟರ್‌ಗಳಿಗೆ ಬೇಡಿಕೆ ಹೆಚ್ಚಿದೆ.

ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ನೆರವಾಗಲಯ ಓಲಾ, Zerodha ಮತ್ತು GiveIndia ಸಹಯೋಗದೊಂದಿಗೆ ಹೊಸ ಯೋಜನೆಯನ್ನು ರೂಪಿಸಿದೆ. ಅಗತ್ಯ ಇರುವ ಸೋಂಕಿತರ ಮನೆ ಬಾಗಿಲಿಗೆ ಆಕ್ಸಿಜನ್ ಕಾನ್ಸ್‌ನ್‌ಟೇಟರ್‌ ಉಸಿತವಾಗಿ ತಲುಪಿಸಲಾಗುತ್ತದೆ.

ಬೆಂಗಳೂರು ತಲುಪಿದ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಬೆಂಗಳೂರು ತಲುಪಿದ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು

ಬುಧವಾರ ಬೆಂಗಳೂರು ನಗರದಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಈ ಸೇವೆಗೆ ಚಾಲನೆ ನೀಡಿದರು. ಸದ್ಯ ಬೆಂಗಳೂರಿನ ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ಈ ಸೇವೆ ಲಭ್ಯವಿದೆ. ನಗರದ ಇತರ ಭಾಗಗಳಿಗೆ ಮತ್ತು ರಾಜ್ಯಾದ್ಯಂತ ಶೀಘ್ರವೇ ಜಾರಿಯಾಗಲಿದೆ.

ಕುವೈತ್‌ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್ಕುವೈತ್‌ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್

 OLA To Supply Oxygen Concentrators To Doorstep

ಕೋವಿಡ್ ಸೋಂಕಿತರ ಆಕ್ಸಿಜನ್ ಸ್ಯಾಚುರೇಷನ್ ಮಟ್ಟ 94ಕ್ಕಿಂತ ಕಡಿಮೆ ಇರುವವರಿಗೆ ಈ ಸೇವೆ ಸಹಾಯಕವಾಗಲಿದೆ. ಓಲಾ ಅಪ್ಲಿಕೇಶನ್‌ ಮೂಲಕ ಜನರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಚೇತರಿಸಿಕೊಂಡ ನಂತರ ಅದನ್ನು ವಾಪಸ್ ನೀಡಬೇಕು.

ಉಚಿತವಾಗಿ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಮನೆಗೆ ತರಲಿದೆ ಓಲಾ ಉಚಿತವಾಗಿ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಮನೆಗೆ ತರಲಿದೆ ಓಲಾ

Recommended Video

ಚೀನಾವನ್ನು ಸದ್ಯದರಲ್ಲೇ ಸೈಡ್ ಹೊಡೆಯಲಿದೆ ಭಾರತ | Oneindia Kannada

ಮನೆಯ ಆರೈಕೆಯಲ್ಲಿರುವ ಸೋಂಕಿತರು ಆಕ್ಸಿಜನ್ ಮಟ್ಟ ಕುಸಿದಾಗ ಆಕ್ಸಿಜನ್ ಬೆಡ್‌ಗಾಗಿ ಹುಡುಕಾಟ ನಡೆಸುತ್ತಾರೆ. ಅಂತಹ ಸೋಂಕಿತರಿಗೆ ಇದು ಸಹಾಯಕವಾಗಲಿದೆ. ಓಲಾ ಉಚಿತವಾಗಿ ಸೋಂಕಿತರ ಮನೆ ಬಾಗಿಲಿಗೆ ಕಾನ್ಸ್‌ನ್‌ಟ್ರೇಟರ್ ತಲುಪಿಸಲಿದೆ.

English summary
To support people in home isolation Oxygen Concentrators are being provided to the patients at their doorstep in association with Ola, Zerodha and GiveIndia foundation. This initiative is launched in Malleshwaram and Koramangala, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X