ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 12 ತಿಂಗಳಲ್ಲಿ ತಲೆ ಎತ್ತಲಿದೆ ಬೃಹತ್ ಎಲೆಕ್ಟ್ರಿಕ್ ಸ್ಕೂಟರ್ ಫ್ಯಾಕ್ಟರಿ

|
Google Oneindia Kannada News

ಬೆಂಗಳೂರು, ಮಾರ್ಚ್ 08: ಬೆಂಗಳೂರಲ್ಲಿ ಮುಂದಿನ 12 ತಿಂಗಳುಗಳಲ್ಲಿ ಬೃಹತ್ ಇ-ಸ್ಕೂಟರ್ ಫ್ಯಾಕ್ಟರಿಯೊಂದು ತಲೆ ಎತ್ತಲಿದೆ. ಓಲಾ ಸಂಸ್ಥಾಪಕ ಭವಿಷ್ ಅಗರ್‌ವಾಲ್ ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಇ-ಸ್ಕೂಟರ್ ಫ್ಯಾಕ್ಟರಿಯನ್ನು ನಿರ್ಮಿಸಲು ಮುಂದಾಗಿದ್ದಾರೆ.

ಈಗಾಗಲೇ ಬೆಂಗಳೂರಿನ ಹಲವು ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲನೆಯನ್ನೂ ಕೂಡ ನಡೆದಿದ್ದಾರೆ. ಬೆಂಗಳೂರಿನ ಹೊರ ವಲಯದಲ್ಲಿ ಎರಡೂವರೆ ಗಂಟೆಗಳ ಕಾಲ ಸಂಚರಿಸಿದ್ದಾರೆ. ಓಲಾ ಎಲೆಕ್ಟ್ರಿಕ್ ಮೊಬಿಲಿಟಿಯು ವರ್ಷಕ್ಕೆ 10 ಮಿಲಿಯನ್ ವಾಹನಗಳನ್ನು ತಯಾರಿಸುವ ಗುರಿ ಹೊಂದಿದೆ.

2021ಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್2021ಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್

2022ರ ವೇಳೆಗೆ ವಿಶ್ವದ ಇ-ಸ್ಕೂಟರ್‌ಗಳ ಪೈಕಿ ಶೇ.15ರಷ್ಟು ಸ್ಕೂಟರ್‌ನನ್ನು ಬೆಂಗಳೂರಿನಲ್ಲಿಯೇ ಉತ್ಪಾದಿಸುವ ಗುರಿ ಹೊಂದಿದ್ದಾರೆ.

Ola Founder Plans World’s Largest E-Scooter Factory Near Bengaluru

ಇದೀಗ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಾಗೂ ಸೈಕಲ್‌ಗಳು ಜನಪ್ರಿಯಸಾರಿಗೆಯಾಗಿ ಉಳಿದಿವೆ. ಥಿಂಕ್-ಟ್ಯಾಂಕ್ ಸಿಇಇಯು ಸೆಂಟರ್ ಫಾರ್ ಎನರ್ಜಿ ಫಿನಾನ್ಸ್ ಪ್ರಕಾರ 10 ವರ್ಷಗಳಲ್ಲಿ $206 ಬಿಲಿಯನ್ ಇ ವಾಹನಗಳು ಮಾರುಕಟ್ಟೆಗೆ ಬರಲಿವೆ.

ಆದರೆ ಮಧ್ಯಮ ವರ್ಗದ ಜನರು ಇನ್ನೂ ಕೆಲವು ಅನುಮಾನಗಳನ್ನು ಹೊಂದಿದ್ದಾರೆ. ಟೆಸ್ಲಾ, ನಿಯೋ, ಎಕ್ಸ್‌ಪೆಂಗ್ ಇಂಕ್ ನಿಂದ ಸ್ಫೂರ್ತಿ ಪಡೆಯಲಾಗಿದೆ ಎಂದು ಸಂಸ್ಥಾಪಕ ಅಗರ್‌ವಾಲ್ ತಿಳಿಸಿದ್ದಾರೆ.

ಈ ಫ್ಯಾಕ್ಟರಿಯನ್ನು 500 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸುತ್ತಿದೆ. ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಭಾರತದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಇಡೀ ಸಾರಿಗೆ ವಲಯವು ಇಂಧನ ಆಧರಿತದಿಂದ ಎಲೆಕ್ಟ್ರಿಕ್ ಗೆ ಶಿಫ್ಟ್ ಆಗಲಿದೆ.

ಈ ಹಿನ್ನೆಲೆಯಲ್ಲಿ ಹೊಸ ಹೊಸ ಕಂಪನಿಗಳು ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗುತ್ತಿದೆ. ಓಲಾ ಕೂಡ ಇದೇ ಅವಕಾಶವನ್ನು ಬಳಸಿಕೊಳ್ಳುತ್ತಿದ್ದು, ಜಗತ್ತಿನ ದ್ವಿಚಕ್ರವಾಹನ ಉತ್ಪಾದನಾ ಘಟಕವನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿದೆ ಎಂದು ಹೇಳಬಹುದು.

Recommended Video

ಗಗನಕ್ಕೇರಿತು ಪೆಟ್ರೋಲ್- ಡಿಸೇಲ್ ರೇಟ್!! | Oneindia Kannada

ಓಲಾ ಉತ್ಪಾದಿಸಲಿರುವ ಎಲೆಕ್ಟ್ರಿಕ್ ಸ್ಕೂಟರ್ ಚಮತ್ಕಾರಿ ವಿನ್ಯಾಸ, ರಿಮೂವೇಬಲ್ ಬ್ಯಾಟರಿ, ಉತ್ತಮ ಪ್ರದರ್ಶನ ಮತ್ತು ವ್ಯಾಪ್ತಿ ಸೇರಿದಂತೆ ಇನ್ನಿತರೆ ವಿಶಿಷ್ಟ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಳ್ಳಲಿದೆ.

English summary
Bhavish Aggarwal surveys the empty 500-acre expanse encircled by neon-painted homes, tiny shrines and mango groves. The high-profile Ola founder hopes to erect the world's largest electric scooter plant on this vacant plot on Bangalore's outskirts within the next 12 weeks, cranking out about 2 million a year -- a landmark for one of India's largest startups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X