ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿನ್ನ ಅಡ್ರೆಸ್ ಗೊತ್ತು, ಕತ್ತರಿಸಿ ಹಾಕ್ತೀನಿ: ಯುವತಿಗೆ ಓಲಾ ಚಾಲಕನ ಬೆದರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ನೀನು ಎಲ್ಲಿರುತ್ತೀಯಾ ಅಂತ ಗೊತ್ತು, ಕತ್ತರಿಸಿ ಹಾಕಿಬಿಡುತ್ತೇನೆ ಎಂದು ಓಲಾ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೋರ್ವರಿಗೆ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.

22 ವರ್ಷದ ಅರಿಜಿತಾ ಬ್ಯಾನರ್ಜಿ ಎಂಬ ಯುವತಿಯ ತಂದೆ ಸೋಮವಾರ ಬೆಳಿಗ್ಗೆ ಮಗಳಿಗಾಗಿ ಕ್ಯಾಬ್ ಒಂದನ್ನು ಬುಕ್ ಮಾಡಿದ್ದಾರೆ. ಕ್ಯಾಬ್ ಚಾಲಕ ಮೊಹಮ್ಮದ್ ಅಜರುದ್ದೀನ್ ಅರಿಜಿತಾಳನ್ನು ಹತ್ತಿಸಿಕೊಂಡು ನಾಗವಾರಕ್ಕೆ ಇಳಿಸಿ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.

ಇನ್ನುಮುಂದೆ ರಾತ್ರಿ 11ರಿಂದ ಬೆಳಗ್ಗೆಯವರೆಗೆ ಓಲಾ ಶೇರ್ ಸೇವೆ ಇರಲ್ಲ ಇನ್ನುಮುಂದೆ ರಾತ್ರಿ 11ರಿಂದ ಬೆಳಗ್ಗೆಯವರೆಗೆ ಓಲಾ ಶೇರ್ ಸೇವೆ ಇರಲ್ಲ

ನನ್ನ ತಂದೆ ಈಗಾಗಲೇ ಓಲಾ ಮನಿ ಮೂಲಕ ಕೊಡಬೇಕಾದ ಹಣ ಕೊಟ್ಟಿದ್ದಾರೆ ಎಂದು ಹೇಳಿದಾಗ, ಇಲ್ಲ 130 ರೂಪಾಯಿಗಳನ್ನು ಕೊಡಲೇ ಬೇಕೆಂದು ಹಠ ಹಿಡಿದಿದ್ದಾನೆ, ಅರಿಜಿತಾಳು ತಂದೆಗೆ ಕರೆ ಮಾಡಿ ಚಾಲಕನಿಗೆ ಫೋನ್ ಕೊಟ್ಟಾಗ, ಅವರ ಬಳಿಯೂ ಕೆಟ್ಟದಾಗಿ ಮಾತನಾಡಿದ ಡ್ರೈವರ್ ನಿನ್ನ ಮಗಳನ್ನು ಎಲ್ಲಿಯಾದರೂ ಬಿಟ್ಟುಬಿಡುತ್ತೇನೆ ಎಂದು ಬೆದರಿಸಿದ್ದಾನೆ.

Ola driver threatend a lady passenger in Bengaluru

ನಂತರ ಅರಿಜಿತಾ ಅವರ ಫೋನ್‌ ಅನ್ನು ವಾಪಸ್ ಮಾಡಲು ನಿರಾಕರಿಸಿದ್ದಾನೆ, ಆಗ ಅರಿಜಿತಾ 500 ಹಣ ಕೊಟ್ಟು ಫೋನ್ ವಾಪಸ್ ಪಡೆದಿದ್ದಾಳೆ, ಈ ಮಧ್ಯೆ ಸಹಾಯಕ್ಕಾಗಿ ಬೇರೆಯವರನ್ನು ಕೇಳಿದಾಗ ಯಾರೂ ಮುಂದೆ ಬರೆದೇ ಇರುವುದು ಸಹ ಅರಿಜಿತಾಳಿಗೆ ತೀವ್ರ ಆತಂಕ ಉಂಟುಮಾಡಿದೆ.

ಓಲಾ ನಿಷೇಧ ಹಿಂಪಡೆಯುವ ಹಿಂದಿದ್ದ ಕಾರಣಗಳು, ಷರತ್ತುಗಳೇನು? ಓಲಾ ನಿಷೇಧ ಹಿಂಪಡೆಯುವ ಹಿಂದಿದ್ದ ಕಾರಣಗಳು, ಷರತ್ತುಗಳೇನು?

ಫೋನ್ ಪಡೆದ ಅರಿಜಿತಾ 'ನೀನು ಇನ್ನೆಂದು ಕಾರು ಓಡಿಸದಂತೆ ಮಾಡುತ್ತೇನೆಂದು ಹೇಳಿದ್ದಕ್ಕೆ' ಸಿಟ್ಟಿನಿಂದ ಪ್ರತಿಕ್ರಿಯಿಸಿದ ಡ್ರೈವರ್, 'ನಿನ್ನ ಅಡ್ರೆಸ್ ನನಗೆ ಗೊತ್ತು, ಕತ್ತರಿಸಿ ತುಂಡು ಮಾಡಿಬಿಡುತ್ತೇನೆ' ಎಂದು ಬೆದರಿಸಿದ್ದಾನೆ.

ಘಟನೆ ಬಗ್ಗೆ ಅರಿಜಿತಾ ಬಾಣಸವಾಡಿಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು, ಚಾಲಕನಿಗಾಗಿ ಹುಡುಕಾಟ ನಡೆದಿದೆ. ಚಾಲಕನ ಬೆದರಿಕೆಯಿಂದಾಗಿ ಅರಿಜಿತಾ ತಾನು ಈಗ ವಾಸವಿರುವ ಮನೆ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.

ಓಲಾ ಕ್ಯಾಬ್ ಸಂಚಾರ ನಿಷೇಧ ಹಿಂಪಡೆದ ಕರ್ನಾಟಕ ಸರ್ಕಾರ ಓಲಾ ಕ್ಯಾಬ್ ಸಂಚಾರ ನಿಷೇಧ ಹಿಂಪಡೆದ ಕರ್ನಾಟಕ ಸರ್ಕಾರ

ಘಟನೆ ನಡೆದ ದಿನವೇ ಅರಿಜಿತಾ ಅವರ ತಂದೆ ಒಲಾ ಸೆಕ್ಯೂರಿಟಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಓಲಾ, ಚಾಲಕನನ್ನು ತರಬೇತಿಗೆ ಕಳುಹಿಸಿ ಆತ ಉತ್ತೀರ್ಣನಾಗುವವರೆಗೂ ಮತ್ತೆ ಕಾರು ಚಾಲನೆ ಮಾಡಲು ಅವಕಾಶ ನೀಡುವುದಿಲ್ಲವೆಂದು ಹೇಳಿದೆ.

ಎಫ್‌ಐಆರ್ ದಾಖಲಾದ ನಂತರ ಮತ್ತೆ ಕರೆ ಮಾಡಿದ ಓಲಾ ಸಿಬ್ಬಂದಿ ಬೆದರಿಕೆ ಹಾಕಿದ ಚಾಲಕನನ್ನು ಕೆಲಸದಿಂದ ತೆಗೆದುಹಾಕಿದ್ದು, ಪ್ರಕರಣದ ತನಿಖೆ ನಡೆಸಲು ಪೊಲೀಸರಿಗೆ ಅವಶ್ಯಕ ಸಹಕಾರ ನೀಡುತ್ತಿರುವುದಾಗಿ ಹೇಳಿದೆ.

English summary
A Ola driver threatened a lady passenger in Bengaluru. He demanded for extra money when she refuse to give he threatened that he will chop her in pieces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X