ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಂದ ಮಹಿಳೆಯರಿಗಾಗಿ 'ಓಲಾ'ಲಾ 'ಓಲಾ'ಲಾ!

By Super
|
Google Oneindia Kannada News

ಬೆಂಗಳೂರು, ಜ. 16: ಚಲಿಸುತ್ತಿರುವ ವಾಹನದಲ್ಲಿ ಮುಖ್ಯವಾಗಿ ಬಾಡಿಗೆ ವಾಹನದಲ್ಲಿ ಅತ್ಯಾಚಾರಗಳು ನಡೆದ ಪ್ರಕರಣ ದೇಶದಲ್ಲಿ ಅತಿ ಹೆಚ್ಚು ವರದಿಯಾಗಿವೆ. ಅನಂತರದಲ್ಲಿ ಏನೇ ಕ್ರಮ ಕೈಗೊಂಡಿದ್ದರೂ ಅನಾಹುತ ಆಗಿಬಿಟ್ಟಿರುತ್ತದೆ. ಓರ್ವ ಮಹಿಳೆಗೆ ಜೀವನಪೂರ್ತಿ ಮರೆಯಲಾಗದಂತಹ ಗಾಯವಾಗಿಬಿಟ್ಟಿರುತ್ತದೆ.

ಈ ಸಮಸ್ಯೆಗೆ ಪರಿಹಾರವಾಗಿ ಬೆಂಗಳೂರಿನಲ್ಲಿ ಈಗಾಗಲೇ 'ಏಂಜೆಲ್ ಸಿಟಿ ಕ್ಯಾಬ್' ಸಂಸ್ಥೆಯು ಈಗಾಗಲೇ ಮಹಿಳಾ ಚಾಲಕರಿಂದ ಚಲಾಯಿಸಲ್ಪಡುವ ಟ್ಯಾಕ್ಸಿ ಕ್ಯಾಬ್ ಒದಗಿಸುತ್ತಿದೆ. ಈಗ 'ಓಲಾ' ಕ್ಯಾಬ್ ಕಂಪನಿ ಕೂಡ ಮಹಿಳಾ ಚಾಲಕರನ್ನು ನೀಡುವ ಸೌಲಭ್ಯ ಜಾರಿಗೆ ತಂದಿದೆ. ಇದೊಂದು ಮೊಬೈಲ್ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಕಂಪನಿ. ಮಹಿಳಾ ಪ್ರಯಾಣಿಕರು ಮಾತ್ರ ಈ ಸೇವೆ ಪಡೆಯಬಹುದು. [ಬೆಂಗಳೂರು ಕ್ಯಾಬ್ ನಲ್ಲಿ ಮಹಿಳೆ ಸುರಕ್ಷಿತವೇ?]

cab

ಈ ಸೇವೆಗಾಗಿ ಓಲಾ ಕ್ಯಾಬ್ ಸಂಸ್ಥೆಯು 'ಓಲಾ ಪಿಂಕ್' ಹೆಸರಿನಲ್ಲಿ ಆಪ್ ಬಿಡುಗಡೆ ಮಾಡಿದ್ದು, ಬೀಟಾ ಮಾದರಿಯಲ್ಲಿ ಲಭ್ಯವಿದೆ. ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಪುಣೆ ಹಾಗೂ ಅಹಮದಾಬಾದ್‌ನಲ್ಲಿ ಸೇವೆ ಆರಂಭಿಸಲಾಗುವುದೆಂದು ಓಲಾ ಕ್ಯಾಬ್ ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. [ಕ್ಯಾಬ್ ಬಳಕೆದಾರರಿಗೆ ಒಂದು ಸಮೀಕ್ಷೆ]

English summary
A mobile application-based cab company Ola said it will start woman driving service in Bengaluru for women passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X