• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

OLA ಕಮೀಷನ್ ಕಟ್ಟಲಾಗದೇ ಉಸಿರು ಬಿಡುತ್ತಿರುವ ಕ್ಯಾಬ್ ಚಾಲಕರು

|
Google Oneindia Kannada News

ಬೆಂಗಳೂರು, ಮಾರ್ಚ್‌ 10: "ಅಯ್ಯೋ ಐವತ್ತು ಸಾವಿರ ರೂಪಾಯಿ ಕೊಟ್ಟರೆ ಸಾಕು, ಕ್ಯಾಬ್ ಅವರೇ ಕೊಡುತ್ತಾರೆ. ಕಿ.ಮೀ ಇಂತಿಷ್ಟು ಬಾಡಿಗೆ ಜತೆಗೆ ಜಾಸ್ತಿ ಡ್ಯೂಟಿ ಮಾಡಿದ್ರೆ ಇನ್‌ಸೆನ್ಟೀವ್ ಕೊಡ್ತಾರೆ. ಯಾಕೆ ಕಂಪನಿಗಳಲ್ಲಿ ಗುಲಾಮರಾಗಿ ದುಡಿಯೋಣ. ಸ್ವತಂತ್ರರಾಗಿ ಇರೋಣ. ಇಷ್ಟವಾದ ದಿನ ಕೆಲಸ ಮಾಡೋಣ, ಇಲ್ಲದ ದಿನ ಮನೆಯಲ್ಲಿ ಮಲಗೋಣ." ಹೀಗಂತ ಎಲ್ಲಾ ಕೆಲಸ ಬಿಟ್ಟು ಒಲಾ, ಉಬರ್ ಗೆ ಕ್ಯಾಬ್ ಅಟಾಚ್ ಮಾಡಿ ಸ್ವತಂತ್ರ್ಯ ಉದ್ಯಮಿಗಳಾದರು. ಇವತ್ತು ಅದೇ ಕ್ಯಾಬ್ ಚಾಲಕರು ಕಂ ಮಾಲೀಕರು ಒಲಾ ಸಂಸ್ಥೆಗೆ ಕಮೀಷನ್ ಕಟ್ಟಡಲಾಗದೆ ಎದೆ ಉಸಿರು ಬಿಡುತ್ತಿದ್ದಾರೆ. ಒಲಾ ಸಂಸ್ಥೆಯ ಕಮೀಷನ್ ಕಟ್ಟಲಾಗದೇ ಕಿಡಿ ಕಾರುತ್ತಿದ್ದಾರೆ.

ಬೆಂಗಳೂರು; ಓಲಾ, ಊಬರ್ ಟ್ಯಾಕ್ಸಿಗಳ ದರ ಏರಿಕೆ ಬೆಂಗಳೂರು; ಓಲಾ, ಊಬರ್ ಟ್ಯಾಕ್ಸಿಗಳ ದರ ಏರಿಕೆ

ಒಲಾ ದುಬಾರಿ ಕಮೀಷನ್ :

ಒಲಾ ದುಬಾರಿ ಕಮೀಷನ್ :

ಹೌದು, ಒಂದು ಗೂಗಲ್ ನಕ್ಷೆ ಸೇವೆ ಹಾಗೂ ಡ್ಯೂಟಿ ಕೊಡುವ ಒಲಾ ಸಂಸ್ಥೆ ನೂರು ರೂಪಾಯಿ ದುಡಿಮೆಯಲ್ಲಿ ತನ್ನ ಸೇವಾ ಶುಲ್ಕದ ಹೆಸರಿನಲ್ಲಿ 20 ಪರ್ಸೆಟ್ ವಸೂಲಿ ಮಾಡುತ್ತಿದೆ. ಆರಂಭದಲ್ಲಿ ದಿನಕ್ಕೆ ಇಷ್ಟು ಟ್ರಿಪ್ ಅಂತ ಮಾಡಿದರೆ ಕೊಡುತ್ತಿದ್ದ ಪ್ರೋತ್ಸಾಹ ಮೊತ್ತ ಸಂಪೂರ್ಣ ಕಡಿತಗೊಂಡಿದೆ. ವಾಸ್ತವದಲ್ಲಿ ಪ್ರತಿ ಕಿ.ಮೀ. ಗೆ ಕ್ಯಾಬ್ ಚಾಲಕರಿಗೆ 13.50 ರೂ. ಸಿಗುತ್ತಿದೆ. ಅದರಲ್ಲಿ ಎರಡು ರೂಪಾಯಿ ಹೋದರೆ ಉಳಿಯುತ್ತಿರುವುದು ಕೇವಲ 10 ರೂ.ನಿಂದ 11 ಮಾತ್ರ ಎನ್ನುತ್ತಾರೆ ಒಲಾ ಚಾಲಕರು.

ಕಂತಿಗಾಗಿ ತಿಂಗಳ ದುಡಿಮೆ:

ಕಂತಿಗಾಗಿ ತಿಂಗಳ ದುಡಿಮೆ:

ಇಲ್ಲಿ ಒಲಾ ಚಾಲಕನೊಬ್ಬ ತನಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಒಲಾ ಕಮೀಷನ್ ಮೋಸವನ್ನು ಸಾಮಾಜಿಕ ಜಾಲ ತಾಣದಲ್ಲಿಯೇ ಹರಿದು ಬಿಟ್ಟಿದ್ದಾನೆ. ಕಾರು ಚಾಲನೆಯಿಂದ 61,139 ರೂಪಾಯಿ ಗಳಿಸಲಾಗಿದೆ. ಅದರಲ್ಲಿ 12,227 ರೂ. ಒಲಾ ಶುಲ್ಕ ಮುರಿದುಕೊಳ್ಳಲಾಗಿದೆ. ವಿಷಯ ಏನೆಂದರೆ, ಕಮೀಷನ್ ಮುರಿಯುವ ಮುನ್ನ ಜಿಎಸ್ ಟಿ 4,831, ಬುಕ್ಕಿಂಗ್ ಶುಲ್ಕ 20 ರೂ. ಫಾರ್ಕಿಂಗ್ ಶುಲ್ಕ 172 ರೂ. ಡೈಲೀ ಅಲೋಯನ್ಸ್ 1500 ಹೀಗೆ ನಾನಾ ಹೆಸರಿನಲ್ಲಿ ಒಲಾ ಕ್ಯಾಬ್ ಚಾಲಕರಿ ಕತ್ತರಿ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ದುಡಿಮೆಯ ಶೇ. 30 ರಷ್ಟು ಹಣ ನಾನಾ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದಾರೆ. ಒಂದು ಕಿ.ಮೀ. 9 ರೂಪಾಯಿ ಕೂಡ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ಕಾರ್ ಇಎಮ್ಐ, ಬ್ಯಾಂಕ್ ನವರ ಕಾಟಕ್ಕಾಗಿ ಎಷ್ಟೋ ಚಾಲಕರು ಸಾಲದ ಕಂತಿಗಾಗಿ ದುಡಿಯುವಂತಾಗಿದೆ.

ಸುಳ್ಳು ಡ್ಯೂಟಿ ಬೀಳುತ್ತೆ :

ಸುಳ್ಳು ಡ್ಯೂಟಿ ಬೀಳುತ್ತೆ :

ಇನ್ನು ಕ್ಯಾಬ್ ಗಳಿಗೆ ಯಾವುದೇ ಡ್ಯೂಟಿ ಬಿದ್ದಿರಲ್ಲ. ಕಂಪ್ಯೂಟರ್ ನಲ್ಲಿ ಡ್ಯೂಟಿ ಮಾಡಿದ ಹಾಗೆ ತೋರಿಸಿ ಕಮೀಷನ್ ಸೇರಿಸುತ್ತಾರೆ. ಅಂತಹ ಪ್ರಸಂಗಗಳಲ್ಲಿ ಚಾಲಕರೇ ಹಣ ಕಟ್ಟಿಕೊಡಬೇಕಾದ ಎಷ್ಟೋ ಘಟನೆಗಳು ಇತ್ತೀಚೆಗೆ ಆಗುತ್ತಿವೆ. ಆಪ್‌ ನಲ್ಲಿ ದುರುದ್ದೇಶ ಪೂರ್ವಕವಾಗಿಯೇ ಉದ್ಯೋಗಿಗಳು ಚಾಲಕರ ಹೆಸರಿನಲ್ಲಿ ಸುಳ್ಳು ಡ್ಯೂಟಿ ತೋರಿಸುತ್ತಿದ್ದಾರೆ. ಇತ್ತೀಚೆಗೆ ಮೈಸೂರಿಗೆ ಸುಳ್ಳು ಡ್ಯೂಟಿ ಆಗಿದ ಬಗ್ಗೆ ಒಲಾ ಚಾಲಕನೊಬ್ಬ ಅಡಿಯೋ ವೈರಲ್ ಮಾಡಿದ್ದ. ಇದಾದ ಬಳಿಕ ಆತನಿಗೆ ಯಾವುದೇ ಡ್ಯೂಟಿ ನೀಡಲಿಲ್ಲ. ಈ ರೀತಿಯ ಕಿರುಕುಳ ಕೂಡ ನೀಡಲಾಗುತ್ತಿದೆ ಎಂದು ಒಲಾ ಚಾಲಕನೊಬ್ಬ ತನ್ನ ಸಮಸ್ಯೆ ತೋಡಿಕೊಂಡಿದ್ದಾರೆ.

ಹೊಸ ದರಕ್ಕಾಗಿ ಹೋರಾಟ:

ಹೊಸ ದರಕ್ಕಾಗಿ ಹೋರಾಟ:

ರಾಜ್ಯ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಟ್ಯಾಕ್ಸಿ ಶುಲ್ಕ ಪರಿಷ್ಕರಣೆ ಮಾಡಿದೆ. ಅದೇ ದರವನ್ನು ನಮ್ಮ ಎಲ್ಲಾ ಉಬರ್ ಒಲಾ ಚಾಲಕರಿಗೆ ಕೊಡಬೇಕು. ಒಲಾ, ಉಬರ್ ಸಂಸ್ಥೆಗಳು ಅವರ ಕಮೀಷನ್ ಪಡೆದುಕೊಳ್ಳಲಿ, ಆದರೆ ಸರ್ಕಾರ ನಿಗಧಿ ಪಡಿಸಿದಂತೆ ಕಿ.ಮೀ. 24 ರೂ. ಕೊಡಬೇಕು. ಪರಿಷ್ಕೃತ ದರ ಒಲಾ, ಉಬರ್ ಕ್ಯಾಬ್ ಚಾಲಕರಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಸಾರಿಗೆ ಸಚಿವ ಲಕ್ಷ್ನಣ ಸವದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಒಲಾ, ಉಬರ್ ಸಂಸ್ಥೆಗಳು ಪರಿಷ್ಕೃತ ದರವನ್ನು ಚಾಲಕರಿಗೆ ನೀಡಬೇಕು. ಇಲ್ಲವೇ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು. ಇದಕ್ಕೆ ಒಪ್ಪದಿದ್ದರೆ ಎಲ್ಲಾ ಚಾಲಕರು ಬೀದಿಗೆ ಇಳಿಯುತ್ತೇವೆ ಎಂದು ಭಾರತ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಗ್ರೂಪ್ ರಾಜ್ಯಾಧ್ಯಕ್ಷ ಜಯಣ್ಣ ತಿಳಿಸಿದ್ದಾರೆ.

  ST Somashekhar ಬಿಚ್ಚಿಟ್ಟ ಅಸಲಿ ಸತ್ಯ | Real Fact about Ramesh Jarkiholi | Oneindia Kannada
  ಅನ್ಯಾಯ ಪ್ರಶ್ನೆ ಮಾಡುವಂತಿಲ್ಲ:

  ಅನ್ಯಾಯ ಪ್ರಶ್ನೆ ಮಾಡುವಂತಿಲ್ಲ:

  ಒಲಾ ಸಂಸ್ಥೆ ಚಾಲಕರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಯಾವುದೇ ಚಾಲಕ ಅಪರಸ್ವರ ಎತ್ತಿದರೆ ಆತನಿಗೆ ಮತ್ತೆ ಡ್ಯೂಟಿ ಕೊಡಲ್ಲ. ಒಲಾ, ಉಬರ್ ನಿಂದ ಚಾಲಕರು ನಾನಾ ಕಿರಕುಳ ಅನುಭವಿಸುತ್ತಿದ್ದಾರೆ. ವಿಧಿಯಿಲ್ಲದೇ ಚಾಲಕರು ದುಡಿಯುವಂತಾಗಿದೆ. ಪರಿಷ್ಕೃತ ದರವನ್ನು ಈ ಕಂಪನಿಗಳು ಚಾಲಕರಿಗೆ ನೀಡಲಿ. ಅಲ್ಲಿಯವರೆಗೂ ಹೋರಾಟ ಮುಂದುವರೆಸುತ್ತೇವೆ. ಮೊದಲ ಹಂತದಲ್ಲಿ ಸಾರಿಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದಕ್ಕೆ ಸ್ಪಂದನೆ ಸಿಗದಿದ್ದರೆ ಹೋರಾಟ ಅನಿವಾರ್ಯ ವಾಗಲಿದೆ ಎಂದು ಅವರು ಎಚ್ಚರಿಸಿದರು.

  English summary
  Ola drivers have urged to offer a revised rate for cabs know more;
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X