ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೀಟು ಹಂಚಿಕೆ ಪಟ್ಟು ಸಡಿಲಿಸಿದ ಜೆಡಿಎಸ್, ಮೈತ್ರಿ ಗೆಲುವು ಮುಖ್ಯ ಎಂದ ಸಿಎಂ

|
Google Oneindia Kannada News

Recommended Video

lok sabha elections 2019: ಸೀಟು ಹಂಚಿಕೆ ಪಟ್ಟು ಸಡಿಲಿಸಿದ ಜೆಡಿಎಸ್, ಮೈತ್ರಿ ಗೆಲುವು ಮುಖ್ಯ ಎಂದ ಸಿಎಂ

ಬೆಂಗಳೂರು, ಮಾರ್ಚ್ 9:ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮೈತ್ರಿ ಕಸರತ್ತು ಮುಂದುವರೆದಿದೆ ಆದರೆ ಜೆಡಿಎಸ್ ತನ್ನ 12 ಸೀಟುಗಳ ಪಟ್ಟನ್ನು ಸಡಿಲಿಸುವ ಸೂಚನೆಯನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೀಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೈತ್ರಿ ಪಕ್ಷ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವುದು ನಮ್ಮ ಉದ್ದೇಶ ಯಾರಿಗೆ ಎಷ್ಟು ಸೀಟು ಸಿಗುತ್ತದೆ, ನಮಗೆ ಎಷ್ಟು ಸೀಟು ಸಿಗಬೇಕೆನ್ನುವುದು ಮುಖ್ಯವಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Numbers Not An Issue On Seat Share HDK Signals Climbdown

ಈ ಮೂಲಕ ಜೆಡಿಎಸ್ 12 ಸೀಟುಗಳ ಬದಲಾಗಿ ಇನ್ನೂ ಕಡಿಮೆ ಸಂಖ್ಯೆಯ ಸೀಟಿಗೆ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನವದೆಹಲಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ.

ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಮೊದಲ ಸುತ್ತಿನ ಮಾತುಕತೆ ನಡೆಸಿದ್ದು ಕನಿಷ್ಠ 10 ಸೀಟು ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ ಆದರೆ ಕಾಂಗ್ರೆಸ್ ಮಾತ್ರ ಅದಕ್ಕಿಂತ ಹೆಚ್ಚು ಸೀಟುಗಳನ್ನು ಜೆಡಿಎಸ್‌ಗೆ ನೀಡಲು ಆಸಕ್ತಿ ತೋರುತ್ತಿಲ್ಲ.

ಅದಕ್ಕಿಂತ ಹೆಚ್ಚು ಸೀಟು ಬೇಕಿದ್ದರೆ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿ ಆಮೇಲೆ ಯೋಚಿಸೋಣ ಎಂದು ಹೇಳುತ್ತಿದ್ದಾರೆ.

English summary
Chief Minister H D Kumaraswamy today confirmed that the focus of the alliance with the Congress is to "win the maximum number of seats" and his party was willing to work to this end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X