ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್ ಪರೀಕ್ಷೆ ಖಂಡಿಸಿ ಕ್ರೈಸ್ಟ್ ಯೂನಿವರ್ಸಿಟಿ ವಿರುದ್ಧ NSUI ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಜುಲೈ 13: ಆನ್ ಲೈನ್ ಪರೀಕ್ಷೆ ನಡೆಸದಂತೆ ಆಕ್ರೋಶ ವ್ಯಕ್ತಪಡಿಸಿ ಕ್ರೈಸ್ಟ್ ಯೂನಿವರ್ಸಿಟಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಎನ್‌ಎಸ್‌ಯುಐ ಸಹ ಬೆಂಬಲ ನೀಡಿದೆ.

Recommended Video

CPL starts midst Corona | ಕೊರೊನ ನಡುವೆಯೇ ಶುರುವಾಗಲಿದೆ CPL | Oneindia Kannada

ಕೊರೊನಾ ವೈರಸ್ ಹಿನ್ನೆಲೆ ಒಂದು ದಿನವೂ ಕ್ಲಾಸ್ ನಡೆದಿಲ್ಲ. ಆನ್‌ಲೈನ್‌ ತರಗತಿ ಮಾಡಲಾಗಿತ್ತು. ಆದರೆ, ಅನ್‌ಲೈನ್ ಪಾಠ ವಿದ್ಯಾರ್ಥಿಗಳಿಗೆ ಅರ್ಥವಾಗಿಲ್ಲ. ಹೀಗಾಗಿ ಪರೀಕ್ಷೆ ನಡೆಸದಂತೆ ಇಂದು ಬೆಂಗಳೂರು ಡೈರಿ ವೃತ್ತದ ಬಳಿಯಿರುವ ಕ್ರೈಸ್ಟ್ ಯೂನಿವರ್ಸಿಟಿ ಎದುರು ಎನ್‌ಎಸ್‌ಯುಐ ಬೆಂಬಲದೊಂದಿಗೆ ವಿದ್ಯಾರ್ಥಿಗಳ ಪ್ರತಿಭಟನೆ ಮಾಡಿದ್ದಾರೆ.

ಪದವಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಪದವಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ

ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಇಂದಿನಿಂದ ಡಿಗ್ರಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ಆರಂಭವಾಗಿದೆ. ಆತುರ ಆತುರವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ನಾಳೆ ರಾತ್ರಿಯಿಂದ ಲಾಕ್ ಡೌನ್ ಸಹ ಜಾರಿಯಾಗಲಿದೆ. ಹೀಗಾಗಿ, ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳ ಒತ್ತಾಯಿಸಿದ್ದಾರೆ.

NSUI protest in front of Christ college demanding the cancellation of online examination

ಆದರೆ, ವಿದ್ಯಾರ್ಥಿಗಳ ಒತ್ತಾಯ ಮಣಿಯದ ಯೂನಿವರ್ಸಿಟಿ ಕುಲಪತಿಗಳು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನಂತರ ಘಟನಾ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್ (intermediate Semester) ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ.

English summary
NSUI staged a protest in front of Christ college demanding the cancellation of online examinations that are being conducted by today onwards. ಆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X