ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನಿ ಹೋಗೋಣ 'ಸಿರಿ' ವೈಭವ ಕಣ್ತುಂಬಿಕೊಳ್ಳೋಣ

By Vanitha
|
Google Oneindia Kannada News

ಬೆಂಗಳೂರು, ಜುಲೈ, 22 : ರಂಗಭೂಮಿ ಪರಂಪರೆಯಲ್ಲಿ ವಿಭಿನ್ನ ಪ್ರಯೋಗ ಕೈಗೊಳ್ಳುತ್ತಾ ಜಗದ್ವಿಖ್ಯಾತಿ ಪಡೆದ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ ಡಿ) 3 ದಿನಗಳ ಕಾಲ ನಾಟಕ ಪ್ರದರ್ಶನ ಆಯೋಜಿಸಿದೆ.

ಪ್ರತಿವರ್ಷ ಪದವಿ ಮುಗಿದ ಯುವಕ ಯುವತಿಯರಿಗೆ ರಂಗಭೂಮಿ ಕುರಿತಾಗಿ ತರಬೇತಿ ನೀಡುತ್ತಾ ಪ್ರಪಂಚದಾದ್ಯಂತ ತನ್ನ ವಿದ್ಯಾರ್ಥಿಗಳನ್ನು ಹೊಂದಿರುವ ಎನ್‌ಎಸ್‌ಡಿಯು ತನ್ನ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು 'ಸಿರಿ' ಎಂಬ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ.[ಚೆರಿ ತೋಟದಲ್ಲಿ ವಿಹರಿಸಲು ರಂಗಶಂಕರಕ್ಕೆ ಬನ್ನಿ]

NSD students Presenting the play

ಜನಪದ ಕಥಾವಸ್ತು ಹೊಂದಿರುವ 'ಸಿರಿ' ನಾಟಕವನ್ನು ಬಿ. ಜಯಶ್ರೀ ಅವರು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದು, ಡಾ. ನಾ ದಾಮೋದರ ಶೆಟ್ಟಿ ಅವರ ರಚನೆ ಹಾಗೂ ಪ್ರವೀಣ್ ಡಿ. ರಾವ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬರಲಿದೆ.

ಸಿರಿ ನಾಟಕ ಜುಲೈ 23ರ ಬುಧವಾರದಿಂದ, 24, 25 ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಎನ್ ಎಸ್ ಡಿ ಸಿಟಿ ಕ್ಯಾಂಪಸ್, ಗುರುನಾನಕ್ ಭವನ್ , ಜೈನ್ ಆಸ್ಪತ್ರೆಯ ಹತ್ತಿರ, ಮಿಲ್ಲರ್ಸ್ ಟಾಂಕ್ ಬಂಡ್ ರಸ್ತೆ, ವಸಂತ ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಬೆಂಗಳೂರಿನ ಎನ್‌ಎಸ್‌ಡಿ ನಿರ್ದೇಶಕರಾದ ಬಸವಲಿಂಗಯ್ಯ ತಿಳಿಸಿದ್ದಾರೆ.

ನಾಟಕದ ಆನ್ ಲೈನ್‌ ಟಿಕೆಟ್ ಗಳು bookmyshow ನಲ್ಲಿ ಹಾಗೂ ಕಲಾಗ್ರಾಮ, ಮಲ್ಲತಹಳ್ಳಿಯಲ್ಲಿ ದೊರೆಯಲಿದೆ.

ಹೆಚ್ಚಿನ ಮಾಹಿತಿಗಾಗಿ
ಫೋ.ನಂ : 080-23183027
ಇ-ಮೇಲ್ : [email protected]

English summary
NSD (National school of drama,Bengaluru) students presenting 'Siri' play show in Bengaluru on july 23, 24 and 25 at 7pm on Gurunanak Bhavan. Play directed by B.Jayashree. written by Dr. na.Damodara Shetty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X