ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಎನ್ಎಸ್‌ಡಿ ವಿದ್ಯಾರ್ಥಿಗಳಿಂದ ನಾಟಕ 'ಸಿರಿ'

By Prasad
|
Google Oneindia Kannada News

ಬೆಂಗಳೂರು, ಆಗಸ್ಟ್ 01 : ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ ಖ್ಯಾತ ರಂಗಕರ್ಮಿ ಡಾ. ಬಿ. ಜಯಶ್ರೀಯವರ ನಿರ್ದೇಶನದಲ್ಲಿ "ಸಿರಿ" ಎಂಬ ಜಾನಪದ ಕಥೆ ಆಧಾರಿತ ನಾಟಕವನ್ನು ಆಗಸ್ಟ್ 4, ಮಂಗಳವಾರ ಮತ್ತು 5, ಬುಧವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸುತ್ತಿದೆ.

ನಾಟಕದ ಮೂಲ ಜಾನಪದವಾಗಿದ್ದು, ರಚನೆ ಡಾ . ನಾ. ದಾಮೋದರ ಶೆಟ್ಟಿ, ಸಂಗೀತ ಸಂಯೋಜನೆ ಪ್ರವೀಣ್ ಡಿ ರಾವ್ ರವರು ಮಾಡಿದ್ದಾರೆ. ಎನ್ ಎಸ್ ಡಿ ಬೆಂಗಳೂರು ಕೇಂದ್ರ ಜುಲೈ ಕಡೆಯ ವಾರದಲ್ಲಿ ನಡೆಸಿದ ಮೂರು ಪ್ರದರ್ಶನಗಳ ನಂತರ ಮತ್ತೆ ಎರಡು ಪ್ರದರ್ಶನಗಳನ್ನು ಆಗಸ್ಟ್ 4 ಮತ್ತು 5ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶಿಸುತ್ತಿದೆ.

NSD Bengaluru students to play Kannada drama in Ravindra Kalakshetra

ಪ್ರದರ್ಶನದ ಸಮಯ ಸಂಜೆ 6.30., ಪ್ರವೇಶ ದರ ರೂ.50/. ಟಿಕೇಟ್ ಗಳು ಎನ್ ಎಸ್ ಡಿ ಬೆಂಗಳೂರು ಕೇಂದ್ರ, ಕಲಾಗ್ರಾಮ, ವಿಶ್ವವಿದ್ಯಾನಿಲಯ ಆವರಣ ಮತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಕಚೇರಿ ಅವಧಿಯಲ್ಲಿ ದೊರೆಯುತ್ತದೆ. ಹಾಗು Online ಟಿಕೆಟ್ ಗಳು Bookmyshow ಮತ್ತು Filmysphereನಲ್ಲಿ ಲಭ್ಯವಿದೆ.

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದಲ್ಲಿ ದಕ್ಷಿಣ ಭಾರತದ ಬೇರೆ ಬೇರೆ ಭಾಷೆಯ 20 ವಿದ್ಯಾರ್ಥಿಗಳು ಅಭಿನಯ ತರಗತಿ ಪಡೆಯುತ್ತಿದ್ದಾರೆ. ಇಲ್ಲಿ ಅಭಿನಯ ಶಿಕ್ಷಣ ಪಡೆಯುತ್ತಿರುವ ಕರ್ನಾಟಕ, ತಮಿಳುನಾಡು, ಪಾಂಡೀಚೇರಿ, ಲಕ್ಷದ್ವೀಪ, ಕೇರಳ, ತೆಲಂಗಾಣದ ವಿದ್ಯಾರ್ಥಿಗಳು; ತಮಿಳುನಾಡಿನ "ಥೆರುಕೂತು" ಪ್ರದರ್ಶಿಸಿದ್ದಾರೆ ಹಾಗು ಕನ್ನಡವನ್ನು ಅಭ್ಯಸಿಸಿ ಯಕ್ಷಗಾನ ಮತ್ತು ಕುವೆಂಪು ರಚಿತ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ನಾಟಕವನ್ನಾಗಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ : 080-23183027, [email protected]/ [email protected] ಸಂಪರ್ಕಿಸಿ

English summary
National schoold of Drama Bengaluru students to play Kannada drama Siri, based on folk story, at Ravindra Kalakshetra on 4th and 5th August, 2015. The drama is directed by threatre person Dr. B. Jayashree. Entry fee Rs. 50.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X