ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಅನಿವಾಸಿ ಬರಹಗಾರರ ಪುಸ್ತಕ ಪ್ರಸವ

By Prasad
|
Google Oneindia Kannada News

ಬೆಂಗಳೂರು, ಫೆಬ್ರವರಿ 03 : ದೂರದ ಅಮೆರಿಕದಲ್ಲಿ ಕನ್ನಡ ಸಾಹಿತ್ಯದ ಫಸಲು ಸಮೃದ್ಧಿಯಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಇದೇ ಶನಿವಾರ, ಫೆಬ್ರವರಿ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮ ಸಾಕ್ಷಿಯಾಗಲಿದೆ.

ಒಂದಲ್ಲ ಎರಡಲ್ಲ ಮೂರು ವೈವಿಧ್ಯಮಯ ವಿಷಯಗಳನ್ನುಳ್ಳ ಹೊತ್ತಗೆಗಳು ಪುಸ್ತಕ ಪ್ರೇಮಿಗಳ ಕೈಸೇರಲಿವೆ. ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಮನೋರಮಾ ಸಭಾಂಗಣದಲ್ಲಿ ಅಮೆರಿಕನ್ನಡಿಗರು ಮತ್ತು ಬೆಂಗಳೂರಿನ ಕನ್ನಡಿಗರ ಮಿನಿ ಸಮ್ಮಿಳನವಾಗುವುದು ನಿಶ್ಚಿತ.

ಅಮೆರಿಕದ ನ್ಯೂಜೆರ್ಸಿಯಲ್ಲಿರುವ, ಎರಡು ವರ್ಷಗಳಿಗೊಮ್ಮೆ ವಸಂತಸಾಹಿತ್ಯೋತ್ಸವ ನಡೆಸುತ್ತ ಬಂದಿರುವ ಕನ್ನಡ ಸಾಹಿತ್ಯ ರಂಗ ಮತ್ತು ಬೆಂಗಳೂರಿನ ವಿಜಯನಗರದಲ್ಲಿರುವ ಅಭಿನವ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಸಂಜೆ 6 ಗಂಟೆಗೆ ಮನೋರಮಾ ಸಭಾಂಗಣದಲ್ಲಿ ಜರುಗಲಿದೆ.

NRI Kannada writers book release event in Bangaluru

ಬಿಡುಗಡೆಯಾಗುತ್ತಿರುವ ಪುಸ್ತಕಗಳ ವಿವರ

ಪುಸ್ತಕ : ಅನುವಾದ ಸಂವಾದ (ಬೇರೆ ಬೇರೆ ಭಾಷೆಗಳಿಂದ ಅನುವಾದಿತ ಬರಹಗಳು)
ಸಂಪಾದನೆ : ಶ್ರೀಕಾಂತ ಬಾಬು, ನ್ಯೂಜೆರ್ಸಿ
ಬಿಡುಗಡೆ : ಗಿರಡ್ಡಿ ಗೋವಿಂದರಾಜ, ಹಿರಿಯ ವಿಮರ್ಶಕ, ಧಾರವಾಡ

ಪುಸ್ತಕ : ಸಾಹಿತ್ಯ ಸ್ಪಂದನ (ವಿಮರ್ಶಾ ಲೇಖನಗಳು)
ಲೇಖಕ : ಆಹಿತಾನಲ (ನಾಗ ಐತಾಳ), ಆರ್ಕೇಡಿಯಾ, ಲಾಸ್ ಏಂಜಲಿಸ್
ಬಿಡುಗಡೆ : ಜೋಗಿ, ಪತ್ರಕರ್ತ, ಬೆಂಗಳೂರು

ಪುಸ್ತಕ : ಕಥೆಯಂ ಕೇಳೆಲೋ ಕಂದ (ಕಥಾ ಸಂಕಲನ)
ಲೇಖಕ : ಮೈ.ಶ್ರೀ. ನಟರಾಜ, ಮೇರಿಲ್ಯಾಂಡ್, ವಾಷಿಂಗ್ಟನ್ ಡಿಸಿ
ಬಿಡುಗಡೆ : ಮಹೇಶ್ ಹರವೆ, ಉಪನ್ಯಾಸಕ, ಮೈಸೂರು

ನ್ಯೂಜೆರ್ಸಿಯ ಕನ್ನಡ ಸಾಹಿತ್ಯ ರಂಗದಲ್ಲಿ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿರುವ ಲೇಖಕಿ ನಳಿನಿ ಮೈಯ, ಕವಯಿತ್ರಿ ಜ್ಯೋತಿ ಮಹಾದೇವ್ ಅವರು ನಾಗ ಐತಾಳ ಮತ್ತು ಮೈ.ಶ್ರೀ. ನಟರಾಜ ಅವರೊಂದಿಗೆ ಪುಸ್ತಕ ಪ್ರಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಸ್ನೇಹಿತರನ್ನು ಭೇಟಿ ಮಾಡಿ, ಪುಸ್ತಕ ಕೊಂಡು, ಒಂದಿಷ್ಟು ಹರಟೆ ಹೊಡೆದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಇದಕ್ಕಿಂತ ಸಮಯ ಬೇಕೆ?

English summary
NRI Kannada writers book release event in Bangaluru, 6th Feb 2016. Authors - Srikantha Babu, Naga Aithal and Dr. M S Nataraja. Venue - Indian Institute of World Culture, Basavanagudi. Publisher - Abhinava Prakashana. Book release by Giraddi Govindaraj, Jogi and Mahesh Harave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X