ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದ ಬಿಡಿಎ

By Gururaj
|
Google Oneindia Kannada News

ಬೆಂಗಳೂರು, ಮೇ 25 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತೆರಿಗೆ ಪಾವತಿ ಮಾಡಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದೆ. ಈ ವರ್ಷ ಬ್ಯಾಂಕ್‌ ಮತ್ತು ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ.

ಜನರು ತೆರಿಗೆ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವರ್ಷ ಬ್ಯಾಂಕ್, ಆನ್‌ಲೈನ್ ಮೂಲಕ ತೆರಿಗೆ ಕಟ್ಟಬಹುದು. ಮುಂದಿನ ವರ್ಷ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ.

ಈಗ ಬಿಡಿಎ ತೆರಿಗೆಯನ್ನೂ ಆನ್‌ಲೈನ್‌ನಲ್ಲಿ ಪಾವತಿಸಬಹುದು!ಈಗ ಬಿಡಿಎ ತೆರಿಗೆಯನ್ನೂ ಆನ್‌ಲೈನ್‌ನಲ್ಲಿ ಪಾವತಿಸಬಹುದು!

ಇ-ಖಾತಾ, ನಿವೇಶನ ಮತ್ತು ವಸತಿ ಹಂಚಿಕೆ ವ್ಯವಸ್ಥೆಯನ್ನು ಸಹ ಆನ್‌ಲೈನ್‌ ಮಾಡುವ ಕೆಲಸ ಜಾರಿಯಲ್ಲಿದೆ. ಈ ಹಿಂದೆ ಆಸ್ತಿ ಮೌಲ್ಯವನ್ನು ಲೆಕ್ಕಹಾಕಿ ಚಲನ್ ಕಳಿಸುವ ವ್ಯವಸ್ಥೆ ಇತ್ತು. ಈಗ ಆನ್‌ಲೈನ್ ಮೂಲಕ ಸುಲಭವಾಗಿ ತೆರಿಗೆ ಪಾವತಿ ಮಾಡಬಹುದಾಗಿದೆ.

Now you can pay BDA tax online

ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡುವುದರಿಂದ ಚಲನ್ ಮುದ್ರಿಸಿ ಕಳಿಸುವ ಹಣ ಉಳಿತಾಯವಾಗಲಿದೆ. ಆನ್‌ಲೈನ್‌ ವ್ಯವಸ್ಥೆಯಿಂದಾಗಿ ಮೊಬೈಲ್, ಕಂಪ್ಯೂಟರ್‌ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ.

ತೆರಿಗೆ ಪಾಪತಿ ಮಾಡಲು ವಿಳಾಸ

www.bdabangalore.org

English summary
Now people of Bengaluru can pay Bangalore Development Authority (BDA) tax on online. BDA setup-ed new website to pay tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X