ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬನ್ ಪಾರ್ಕ್‌ ಕಾರ್ಯಕ್ರಮಗಳ ಮಾಹಿತಿಗೆ ವೆಬ್ ಸೈಟ್ ನೋಡಿ

|
Google Oneindia Kannada News

ಬೆಂಗಳೂರು, ನವೆಂಬರ್ 16 : ಉದ್ಯಾನ ನಗರಿ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಪ್ರತಿ ಭಾನುವಾರ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ವಿವಿಧ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ. ಸದ್ಯ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ವೆಬ್ ಸೈಟ್ ಆರಂಭಿಸಲಾಗಿದೆ.

ಕಬ್ಬನ್‌ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಹಬ್ಬ -2015 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯಾನದ ವಾರಾಂತ್ಯದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ www.cubbonpark.info ವೆಬ್‌ಸೈಟ್‌ಗೆ ಚಾಲನೆ ನೀಡಿದರು. [2ನೇ ಶನಿವಾರವೂ ವಾಹನ ಸಂಚಾರ ನಿಷೇಧ]

cubbon park

ತೋಟಗಾರಿಕಾ ಇಲಾಖೆ ಮತ್ತು ಬೆಂಗಳೂರು ಸಂಚಾರಿ ಪೊಲೀಸರು 2015ರ ಮೇ 24ರ ಭಾನುವಾರದಿಂದ ಮೂರು ವಾರಗಳ ಕಾಲ ಪ್ರಾಯೋಗಿಕವಾಗಿ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಿಸಿದ್ದರು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು. ನಂತರ ಪ್ರತಿ ಭಾನುವಾರ ವಾಹನ ಸಂಚಾರ ರದ್ದುಗೊಳಿಸಲಾಗಿದೆ. [ಲಗೋರಿ, ಬುಗುರಿ, ಗೋಲಿ, ಗಿಲ್ಲಿ-ದಾಂಡು, ಚಾಟರ ಬಿಲ್ಲು]

ಪಾರ್ಕ್‌ನಲ್ಲಿ ಭಾನುವಾರ ವಾಹನ ಸಂಚಾರ ರದ್ದುಗೊಳಿಸದ ನಂತರ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಂಚಾರಿ ಪೊಲೀಸರು ಎರಡನೇ ಶನಿವಾರವೂ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ನವೆಂಬರ್ 14ರಂದು ಪ್ರಾಯೋಗಿಕವಾಗಿ 2ನೇ ಶನಿವಾರ ಪಾರ್ಕ್‌ನಲ್ಲಿ ಸಂಚಾರ ಬಂದ್ ಮಾಡಲಾಗಿತ್ತು.

ಉದ್ಯಾನಕ್ಕೆ ಹೆಚ್ಚಿ ಭದ್ರತೆ : ಕಬ್ಬನ್‌ ಉದ್ಯಾನದಲ್ಲಿ ಅತ್ಯಾಚಾರ ನಡೆದ ಬಳಿಕ ತೋಟಗಾರಿಕೆ ಇಲಾಖೆಯು ಉದ್ಯಾನಕ್ಕೆ ಭದ್ರತೆ ಹೆಚ್ಚಿಸಲು ಮುಂದಾಗಿದೆ. ಈ ಕುರಿತು ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾವನೆಯನ್ನು ಸಿದ್ಧಗೊಳಿಸಿದೆ.

ಹಡ್ಸನ್‌ ವೃತ್ತದಲ್ಲಿ ಪೊಲೀಸ್‌ ಹೊರಠಾಣೆ ಸ್ಥಾಪಿಸಬೇಕು. ಉದ್ಯಾನದ ಭದ್ರತೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನೇಮಕ ಮಾಡಬೇಕು. ವಾಹನ ಪ್ರವೇಶದ ಸಮಯ ಬದಲಾಯಿಸಬೇಕು ಮುಂತಾದ ಅಂಶಗಳು ಈ ಪ್ರಸ್ತಾವನೆಯಲ್ಲಿವೆ.

English summary
Presently Cubbon park is closed for traffic on every Sunday and musical events will organized in parks. horticulture department launched website to provide information about musical events at park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X