ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್‌ಸೈಟ್‌ನಲ್ಲಿ ಲಭ್ಯ

|
Google Oneindia Kannada News

ಬೆಂಗಳೂರು, ಆಗಸ್ಟ್ 14 : ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ತೆರವು ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಯಾವ ಪ್ರದೇಶದಲ್ಲಿ ರಾಜ ಕಾಲುವೆ ಒತ್ತುವರಿಯಾಗಿದೆ ಎಂಬ ಬಗ್ಗೆ ಹಲವು ಗೊಂದಲಗಳಿವೆ. ಆದ್ದರಿಂದ, ಬಿಬಿಎಂಪಿ ತನ್ನ ವೆಬ್‌ಸೈಟ್‌ನಲ್ಲಿ ಒತ್ತುವರಿ ಸಂಬಂಧ ಸಿದ್ಧಪಡಿಸಿದ ದಾಖಲೆಗಳನ್ನು ಹಾಕಿದೆ.

ಬೆಂಗಳೂರು ನಗರದಲ್ಲಿ ರಾಜ ಕಾಲುವೆಗಳ ಒತ್ತುವರಿ ಸಂಬಂಧ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ನಕ್ಷೆಗಳನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವೆಬ್‌ಸೈಟ್‌ನಲ್ಲಿ ಹಾಕಿದೆ. ಇದರಲ್ಲಿ ವಾರ್ಡ್‌ವಾರು ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಮಂಗಳವಾರ ವಾರ್ಡ್‌ ವಾರು ಮಾಹಿಯೂ ಜನರಿಗೆ ಲಭ್ಯವಾಗಲಿವೆ.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]

ಬೆಂಗಳೂರು ಪೂರ್ವ, ಉತ್ತರ, ಉತ್ತರ ಹೆಚ್ಚುವರಿ ಎಂಬ ಮೂರು ಭಾಗಗಳಲ್ಲಿ ನಕ್ಷೆಗಳನ್ನು ಹಾಕಲಾಗಿದೆ. ಇದರಲ್ಲಿ ಯಾವ ರಾಜ ಕಾಲುವೆ ಎಲ್ಲಿ, ಎಷ್ಟು ಒತ್ತುವರಿಯಾಗಿದೆ ಎಂಬ ಮಾಹಿತಿ ಸಿಗುತ್ತದೆ. ಯಾವ ಸರ್ವೆ ಸಂಖ್ಯೆಯಿಂದ ಈ ಅತಿಕ್ರಮಣ ನಡೆದಿದೆ ಎಂಬ ವಿವರಗಳೂ http://164.100.133.91/rajkalve ವೆಬ್‌ಸೈಟ್‌ನಲ್ಲಿ ಲಭ್ಯವಿದೆ.[ಒತ್ತುವರಿ ತೆರವಿನಲ್ಲೂ ಪ್ರಭಾವದ ಒಳಸುಳಿ]

ನಗರದ ಎಲ್ಲಾ ರಾಜ ಕಾಲುವೆಗಳಿಗೆ ಸಂಬಂಧಿಸಿದ ನಕ್ಷೆಗಳು ವೆಬ್‌ಸೈಟ್‌ನಲ್ಲಿವೆ. ಒತ್ತುವರಿಯನ್ನು ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಬಿಬಿಎಂಪಿಯೇ ಕಾರ್ಯಾಚರಣೆ ನಡೆಸಿ, ತೆರವುಗೊಳಿಸಿಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.[ರಾಜ ಕಾಲುವೆ ಒತ್ತುವರಿ: 20 ಅಧಿಕಾರಿಗಳ ವಿರುದ್ಧ ಪ್ರಕರಣ]

ವಾರ್ಡ್‌ ಮಾಹಿತಿ ಪ್ರತ್ಯೇಕವಾಗಿ ಸಿಗಲಿದೆ

ವಾರ್ಡ್‌ ಮಾಹಿತಿ ಪ್ರತ್ಯೇಕವಾಗಿ ಸಿಗಲಿದೆ

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ಈ ಕುರಿತು ಮಾತನಾಡಿದ್ದು, 'ಭೂದಾಖಲೆ ಇಲಾಖೆಯಿಂದ ಸಿಕ್ಕ ವಿವರವನ್ನು ಶನಿವಾರ ಯಥಾವತ್ತಾಗಿ ವೆಬ್‌ಸೈಟ್‌ನಲ್ಲಿ ಹಾಕಿದ್ದೇವೆ. ಪ್ರತಿಯೊಂದು ವಾರ್ಡ್‌ಗೆ ಸಂಬಂಧಿಸಿದ ವಿವರವನ್ನು ಪ್ರತ್ಯೇಕಿಸಲಾಗುತ್ತಿದೆ. ಭಾನುವಾರ ಸಂಜೆ ವೇಳೆಗೆ ಈ ಕಾರ್ಯ ಮುಗಿಯಲಿದ್ದು, ಸೋಮವಾರದಿಂದ ವಾರ್ಡ್‌ವಾರು ಮಾಹಿತಿ ಸಹ ಲಭ್ಯವಾಗುವ ನಿರೀಕ್ಷೆ ಇದೆ' ಎಂದು ಹೇಳಿದ್ದಾರೆ.

ಜಿಐಎಸ್‌ ಆಧಾರದಿಂದ ತಯಾರಿಸಿದ ನಕ್ಷೆ

ಜಿಐಎಸ್‌ ಆಧಾರದಿಂದ ತಯಾರಿಸಿದ ನಕ್ಷೆ

ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಆಧಾರದಿಂದ ಸಿದ್ಧಪಡಿಸಲಾದ ನಕ್ಷೆಗಳಿವು. ರಾಜಕಾಲುವೆಗಳ ಡಿಜಿಟಲ್‌ ನಕ್ಷೆಯನ್ನೂ ವೆಬ್‌ಸೈಟ್‌ಗೆ ಹಾಕಲಾಗುತ್ತಿದೆ. ಇದರಿಂದ ಯಾವುದೇ ಸರ್ವೆ ಸಂಖ್ಯೆಗೆ ಸಂಬಂಧಿಸಿದ ಆಸ್ತಿ ಎಲ್ಲಿದೆ?, ಯಾವುದಾದರೂ ಒತ್ತುವರಿ ಆಗಿದೆಯೇ? ಎಂಬುದನ್ನು ಜನರು ನೇರವಾಗಿ ಪರೀಕ್ಷಿಸಬಹುದು.

ಆಸ್ತಿ ಖರೀದಿ ಮಾಡುವಾಗ ಎಚ್ಚರ

ಆಸ್ತಿ ಖರೀದಿ ಮಾಡುವಾಗ ಎಚ್ಚರ

ಈ ನಕ್ಷೆಯಿಂದಾಗಿ ಆಸ್ತಿ ಖರೀದಿಗೂ ಸಹಕಾರಿಯಾಗಲಿದೆ. ಪ್ರತಿ ರಾಜಕಾಲುವೆಯ ಸಮಗ್ರ ದಾಖಲೆಗಳನ್ನು ಜಿಐಎಸ್‌ನಲ್ಲಿ ಹಾಕಲಾಗುತ್ತದೆ. ಖರೀದಿ ಮಾಡಲು ಉದ್ದೇಶಿಸಿರುವ ಆಸ್ತಿ ಮೇಲ್ನೋಟಕ್ಕೆ ರಾಜಕಾಲುವೆ ಸರಹದ್ದಿನಲ್ಲಿ ಬರುತ್ತದೆ ಎಂದೆನಿಸಿದರೆ ಕಂದಾಯ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ವಿವರ ಪಡೆಯಬಹುದು.

ನಕ್ಷೆಯನ್ನು ನೋಡುವುದು ಹೇಗೆ?

ನಕ್ಷೆಯನ್ನು ನೋಡುವುದು ಹೇಗೆ?

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ http://164.100.133.91/rajkalve ಎಂಬ ಲಿಂಕ್‌ ನೀಡಲಾಗಿದೆ. ಆ ಲಿಂಕ್‌ ಪ್ರವೇಶಿಸಿದರೆ ನಕ್ಷೆಗಳಿರುವ ಫೋಲ್ಡರ್‌ಗಳು ತೆರೆದುಕೊಳ್ಳುತ್ತವೆ. ನಮಗೆ ಬೇಕಾದ ಪ್ರದೇಶದ ನಕ್ಷೆಯನ್ನು ತೆರೆದರೆ, ಆ ರಾಜಕಾಲುವೆಯಲ್ಲಿ ಯಾವ ಪ್ರದೇಶ ಒತ್ತುವರಿ ಆಗಿದೆ ಎಂಬುದನ್ನು ಗುರುತಿಸಲಾಗಿದೆ.

ನಕ್ಷೆ ಹಾಕಿದ್ದು ಏಕೆ?

ನಕ್ಷೆ ಹಾಕಿದ್ದು ಏಕೆ?

ಎಲ್ಲಿ ರಾಜಕಾಲುವೆ ಇದೆ, ಎಲ್ಲಿ ಒತ್ತುವರಿ ಆಗಿದೆ ಮುಂತಾದ ಮಾಹಿತಿಗಳು ಜನರಿಗೆ ಶೀಘ್ರವಾಗಿ ಲಭ್ಯವಾಗಲಿ ಎಂಬ ಕಾರಣಕ್ಕೆ ವೆಬ್‌ಸೈಟ್‌ನಲ್ಲಿ ನಕ್ಷೆ ಹಾಕಲಾಗಿದೆ. ಇದರಿಂದ ಜನರಿಗೆ ಆಸ್ತಿ ಖರೀದಿ ಮಾಡಲು ಸಹಾಯಕವಾಗುತ್ತದೆ.

English summary
Bengaluru city has been witnessing a major demolition drive in a bid to clear out encroachments of raja kaluve. Now BBMP has issued raja kaluve encroachments details on website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X