ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಪ್ರಯಾಣಿಕರಿಗೊಂದು ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 01 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿಯೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಬಹುದಾಗಿದೆ. ಕೋವಿಡ್ ಕಾರಣ ನಿಲ್ದಾಣದಲ್ಲಿ ರಿಚಾರ್ಜ್ ಸೌಲಭ್ಯ ಸ್ಥಗಿತಗೊಳಿಸಲಾಗಿತ್ತು.

ನಮ್ಮ ಮೆಟ್ರೋ ನಿಲ್ದಾಣದಲ್ಲಿಯೇ ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡುವ ಸೇವೆಯನ್ನು ಬಿಎಂಆರ್‌ಸಿಎಲ್ ಪುನಃ ಆರಂಭಿಸಿದೆ. ಆದರೆ, ಪ್ರಯಾಣಿಕರು ಹಣ ಕೊಡುವಂತಿಲ್ಲ, ಡಿಜಿಟಲ್ ಪೇಮೆಂಟ್ ಬಳಕೆ ಮಾಡಬೇಕು.

ನಮ್ಮ ಮೆಟ್ರೋ; ಸ್ಮಾರ್ಟ್‌ ಕಾರ್ಡ್ ರಿಚಾರ್ಜ್‌ ಇನ್ನು ಸರಳ, ಸುಲಭ ನಮ್ಮ ಮೆಟ್ರೋ; ಸ್ಮಾರ್ಟ್‌ ಕಾರ್ಡ್ ರಿಚಾರ್ಜ್‌ ಇನ್ನು ಸರಳ, ಸುಲಭ

ಕೋವಿಡ್ ಹಿನ್ನಲೆಯಲ್ಲಿ ಜನರ ಸಂಪರ್ಕ ಕಡಿಮೆಗೊಳಿಸಲು ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡುವ ಸೇವೆ ಸ್ಥಗಿತಗೊಳಿಸಲಾಗಿತ್ತು. ಜನರು ಬಿಎಂಆರ್‌ಸಿಎಲ್ ವೆಬ್ ಸೈಟ್‌ಗೆ ಭೇಟಿ ನೀಡಿ ಕಾರ್ಡ್ ರಿಚಾರ್ಜ್ ಮಾಡಬೇಕಿತ್ತು.

ಡಿಸೆಂಬರ್‌ನಲ್ಲಿ ಯಲಚೇನಹಳ್ಳಿ ಅಂಜನಾಪುರ ನಡುವೆ ನಮ್ಮ ಮೆಟ್ರೋ ಸಂಚಾರ ಡಿಸೆಂಬರ್‌ನಲ್ಲಿ ಯಲಚೇನಹಳ್ಳಿ ಅಂಜನಾಪುರ ನಡುವೆ ನಮ್ಮ ಮೆಟ್ರೋ ಸಂಚಾರ

Now People Can Recharge Namma Metro Smart Card In Metro Station

ಡೆಬಿಟ್, ಕ್ರೆಡಿಟ್, ಪೇಟಿಎಂ, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಜನರು ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬಹುದು. ಹಿಂದೆ ಇದ್ದಂತೆ ಈಗಲೂ ಮೆಟ್ರೋ ನಿಲ್ದಾಣದಲ್ಲಿ ಒನ್ ಟೈಂ ಟ್ರಾವೆಲ್ ಟೋಕನ್ ನೀಡುವುದಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಬಿಎಂಆರ್‌ಸಿಎಲ್ ನೇಮಕಾತಿ ರದ್ದು; ಪರೀಕ್ಷಾ ಶುಲ್ಕ ವಾಪಸ್ ಬಿಎಂಆರ್‌ಸಿಎಲ್ ನೇಮಕಾತಿ ರದ್ದು; ಪರೀಕ್ಷಾ ಶುಲ್ಕ ವಾಪಸ್

ಲಾಕ್ ಡೌನ್ ಮುಗಿದ ಬಳಿಕ ಮೆಟ್ರೋ ಸಂಚಾರ ಆರಂಭವಾಗಿದೆ. ಆದರೆ, ಮೆಟ್ರೋ ನಿಲ್ದಾಣದಲ್ಲಿ ಟೋಕನ್ ನೀಡುವುದಿಲ್ಲ. ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸಲು ಜನರು ಕಡ್ಡಾಯವಾಗಿ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಬೇಕಿದೆ.

English summary
BMRCL allowed to recharge Namma metro smart card in the metro station. People can recharge smart card by using digital payment system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X