ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್, ಅಂಚೆ ಕಚೇರಿಯಲ್ಲಿ ಬೆಸ್ಕಾಂ ಬಿಲ್ ಕಟ್ಟಿ

|
Google Oneindia Kannada News

ಬೆಂಗಳೂರು, ಫೆ.6 : ಬೆಸ್ಕಾಂ ವಿದ್ಯುತ್‌ ಬಿಲ್‌ ಪಾವತಿ­ಗಾಗಿ ಇರುವ ಎಟಿಪಿ ಕೌಂಟರ್‌ಗಳನ್ನು ಸ್ಥಗಿತಗೊಳಿಸಿದೆ. ಗ್ರಾಹಕರು ಇನ್ನು ಮುಂದೆ ಆನ್‌ಲೈನ್‌, ಅಂಚೆ ಕಚೇರಿಗಳಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಬಹುದಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹೇಳಿದ್ದಾರೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ವಿದ್ಯುತ್‌ ಬಿಲ್‌ ಪಾವತಿ­ಗಾಗಿ ಇರುವ ಎಟಿಪಿ ಕೌಂಟರ್ ಸೌಲಭ್ಯವನ್ನು ಸ್ಥಗಿತಗೊಳಿಸಿದೆ. ಬೆಸ್ಕಾಂ ಕಚೇರಿಗಳಲ್ಲಿ 130 ಕೌಂಟರ್‌ ಸೇರಿದಂತೆ ಒಟ್ಟು 135 ಎಟಿಪಿ ಕೌಂಟರ್‌ಗಳಿದ್ದವು. ಶೇ 30 ಮಂದಿ ಗ್ರಾಹಕರು ಎಟಿಪಿ ಕೌಂಟರ್‌ಗಳಲ್ಲಿ ಬಿಲ್‌ ಪಾವತಿ ಮಾಡುತ್ತಿದ್ದರು ಎಂದು ತಿಳಿಸಿದರು.

bescom

ಬೆಸ್ಕಾಂ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಕಜ್ ಕುಮಾರ್ ಪಾಂಡೆ ಅವರು, ಫೆಬ್ರುವರಿ 1ರಿಂದಲೇ ಎಟಿಪಿ ಕೌಂಟರ್‌ ಸ್ಥಗಿತಗೊಳಿಸಲಾಗಿದೆ. ಆದರೆ, ಕೇಂದ್ರಗಳಲ್ಲಿ ಕ್ಯಾಶ್‌ ಕೌಂಟರ್‌­ಗಳು ಇರಲಿವೆ ಎಂದು ಸ್ಪಷ್ಟಪಡಿಸಿದರು. [ಪವರ್ ಕಟ್ ಬಗ್ಗೆ ಮಾಹಿತಿ ನೀಡಲು ಬರುತ್ತೆ ಬೆಸ್ಕಾಂ APP]

ಆನ್‌ಲೈನ್‌ ಮೂಲಕ ಪಾವತಿ ಮಾಡಿ : ಬೆಸ್ಕಾಂ ಗ್ರಾಹಕರು ಕಂಪನಿಯ http://bescom.org/en/ ವೆಬ್‌ಸೈಟ್‌ಗೆ ಭೇಟಿ ನೀಡಿ ಬಿಲ್‌ ಪಾವತಿಸಬಹುದು. ಸದ್ಯ ಸುಮಾರು 3 ಲಕ್ಷ ಗ್ರಾಹಕರು ಆನ್‌ಲೈನ್‌ ಮೂಲಕ ಬಿಲ್‌ ಪಾವತಿಸುತ್ತಿದ್ದಾರೆ ಎಂದರು. [ಬೆಸ್ಕಾಂ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಕಡಿಯಿರಿ]

ಅಂಚೆ ಕಚೇರಿಯಲ್ಲಿ ಬಿಲ್ ಕಟ್ಟಿ : ಬೆಸ್ಕಾಂ ಗ್ರಾಹಕರು ಅಂಚೆ ಕಚೇರಿಗಳಲ್ಲಿಯೂ ಬಿಲ್ ಪಾವತಿ ಮಾಡಬಹುದಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 500 ಅಂಚೆ ಕಚೇರಿಗಳಿದ್ದು, ಇಲ್ಲಿ ಬಿಲ್‌ ಪಾವತಿ ಸೇವೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಮನೆ ಬಾಗಿಲಲ್ಲೇ ಬಿಲ್ ಕಟ್ಟಿ : ಬೆಸ್ಕಾಂ ಪ್ರಾಯೋಗಿಕವಾಗಿ ಗ್ರಾಹಕರು ಸ್ಥಳದಲ್ಲಿಯೇ ವಿದ್ಯುತ್‌ ಬಿಲ್‌ ಪಾವತಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಸಿಬ್ಬಂದಿ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ನಗದು, ಚೆಕ್‌, ಡಿಡಿ, ಕ್ರೆಡಿಟ್ ಅಥವಾ ಡೆಬಿಟ್‌ ಕಾರ್ಡ್‌ಗಳ ಮೂಲಕ ಬಿಲ್ ಸಂಗ್ರಹಿಸಲಿದ್ದಾರೆ.

English summary
Bangalore Electricity supply company Ltd (BESCOM) Managing Director Pankaj Kumar Pandey said now people can pay bills in post office and Online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X