ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರೀಶ್ ಹೇಳುತ್ತಿದ್ದ ಮಾತು ನೆನಪಿಸಿಕೊಂಡು ಧೈರ್ಯ ತಂದುಕೊಂಡೆ

|
Google Oneindia Kannada News

ಬೆಂಗಳೂರು, ಜುಲೈ 29: ರಾಜ್ಯದಲ್ಲಿ ಕೋವಿಡ್‌ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಸೋಂಕಿತರ ಸಂಖ್ಯೆ ಕಡಿಮೆ ಆಗುವ ಬದಲು ದಿನವೂ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈವರೆಗೆ ಕೋವಿಡ್ ಸೋಂಕಿಗೆ ತುತ್ತಾದವರ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕವಾಗಿದೆ. ಆರಂಭದಲ್ಲಿ ದೇಶದ ರಾಜ್ಯಗಳ ಪೈಕಿ 12ನೇ ಸ್ಥಾನದಲ್ಲಿದ್ದ ಕರ್ನಾಟಕವೀಗ 3ನೇ ಸ್ಥಾನಕ್ಕೆ ಜಿಗಿದಿದೆ.

Recommended Video

ಬೆಂಗಳೂರಿನಲ್ಲಿ ನೆಲಸಮವಾಯ್ತು 4 ಅಂತಸ್ತಿನ ಕಟ್ಟಡ | Oneindia Kannada

ಕೋವಿಡ್-19 ಜನಪ್ರತಿನಿಧಿಗಳನ್ನೂ ಎಡೆಬಿಡದೇ ಕಾಡುತ್ತಿದೆ. ಅವರೂ ಹೆಚ್ಚಾಗಿ ಕೊರೊನಾವೈರಸ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರೂ ಕೆಲ ದಿನಗಳ ಹಿಂದೆ ಕೋವಿಡ್‌ಗೆ ತುತ್ತಾಗಿದ್ದರು. ಹೀಗಾಗಿ ಕೋವಿಡ್‌ ಎದುರಿಸುವ ಬಗ್ಗೆ, ಸೋಂಕು ದೃಢಪಟ್ಟ ಬಳಿಕ ತಮಗಾದ ಅನುಭವವನ್ನು ವಿವರಿಸಿದ್ದಾರೆ. ಜೊತೆಗೆ ಕೊರೊನಾವೈರಸ್ ಎದುರಿಸುವ ಬಗ್ಗೆ ಒಂದಿಷ್ಟು ಸಲಹೆಗಳನ್ನು ಅವರು ಕೊಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾಗ ಪುತ್ರ ತಮ್ಮನ್ನು ಆರೈಕೆ ಮಾಡಿದ್ದನ್ನು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ಮಂಡ್ಯ ಸಂಸದೆ ಸುಮಲತಾಗೆ ಕೊರೊನಾ ವೈರಸ್ ಸೋಂಕುಮಂಡ್ಯ ಸಂಸದೆ ಸುಮಲತಾಗೆ ಕೊರೊನಾ ವೈರಸ್ ಸೋಂಕು

ಕೋವಿಡ್ ಭಯ

ಕೋವಿಡ್ ಭಯ

ಕೋವಿಡ್ ಪಾಸಿಟಿವ್ ಎಂದಾಕ್ಷಣ ನಾನೂ ಕೆಲಹೊತ್ತು ಭಯ ಪಟ್ಟಿದ್ದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿಕೊಂಡಿದ್ದಾರೆ. ಕೋವಿಡ್ ಪಾಸಿಟಿವ್ ಎಂದಾಗ ನಾನು ನೆನಪಿಸಿಕೊಂಡಿದ್ದು ಅಂಬರೀಶ್ ಅವರ ಮಾತನ್ನು. ಅವರು ಕಷ್ಟ ಅನ್ನೋದು ಹೇಗೆ ಬಂದರೂ, ಯಾವಾಗ ಬಂದರೂ ಅದನ್ನು ಎದುರಿಸಿ ಹೋರಾಡಬೇಕು ಎನ್ನುತ್ತಿದ್ದರು.

ಇತ್ತೀಚೆಗೆ ನನಗೂ ಒಂದು ಕಷ್ಟ ಬಂದಿತ್ತು. ಅದರ ಹೆಸರು ಕೋವಿಡ್. ಹಿಂದೆಯೂ ನಾನು ನನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಹೋರಾಡಿ ಗೆದ್ದಿದ್ದೇನೆ. ಅವುಗಳಿಗೆ ಹೋಲಿಕೆ ಮಾಡಿದರೆ ಇದೇನೂ ದೊಡ್ಡ ಕಷ್ಟವಲ್ಲ. ಆದರೂ ಮೊದಲು ಕೋವಿಡ್ ಪಾಸಿಟಿವ್ ಎಂದು ವರದಿ ಬಂದಾಗ ಹೆದರಿದ್ದು ನಿಜ. ಅಂಬರೀಶ್ ಅವರು ಹೇಳುತ್ತಿದ್ದ ಮಾತನ್ನು ನೆನಪಿಸಿಕೊಂಡು ಕೋವಿಡ್ ಗೆದ್ದಿದ್ದೇನೆ ಎಂದಿದ್ದಾರೆ.

ಸಂಪೂರ್ಣ ಗುಣಮುಖ

ಸಂಪೂರ್ಣ ಗುಣಮುಖ

ನಾನು ಕೋವಿಡ್ ಸೋಂಕಿಗೆ ತುತ್ತಾಗಿದ್ದೆ, ಇದೀಗ ಅದರಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ. ಆರಂಭದಲ್ಲಿ ಭಯ, ಗೊಂದಲದಿಂದ ಬಳಲಿದ ಬಳಿಕ ಗಟ್ಟಿ ಮನಸ್ಸು ಮಾಡಿಕೊಂಡೆ. ನನ್ನಲ್ಲಿ ನಾನು ಧೈರ್ಯ ತುಂಬಿಕೊಂಡೆ ಎಂದು ಸುಮಲತಾ ಹೇಳಿದ್ದಾರೆ.

ಜ್ವರ ಬಂದ ಬಳಿಕ ನಾನು ಸ್ವ್ಯಾಬ್ ಟೆಸ್ಟ್‌ಗೆ ಒಳಗಾದೆ. ಕೋವಿಟ್ ಪರೀಕ್ಷಾ ವರದಿ ಬರುವುದಕ್ಕೂ ಮೊದಲು ನಾನೇ ಮುಂದಾಗಿ ಸ್ವಯಂ ಐಸೊಲೇಶನ್‌ಗೆ ಒಳಗಾದೆ. ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರಿಗೂ ದೂರವಾಣಿ ಮೂಲಕ ಮಾಹಿತಿ ನೀಡಿದೆ. ಜೊತೆಗೆ ಪ್ರಕಟಣೆ ಮೂಲಕ ಮಧ್ಯಮಗಳಿಗೂ ಮಾಹಿತಿ ಕೊಟ್ಟಿದ್ದೆ. ಸೋಂಕು ತಗುಲಿರುವುದನ್ನು ಮುಚ್ಚಿಡುವುದು ಬಹಳ ತಪ್ಪು ಎಂದಿದ್ದಾರೆ.

ಕೊರೊನಾ ಪಾಸಿಟೀವ್ ಕಾಣಿಸಿಕೊಂಡ ರಾಜ್ಯದ 8 ರಾಜಕಾರಣಿಗಳ ಪಟ್ಟಿಕೊರೊನಾ ಪಾಸಿಟೀವ್ ಕಾಣಿಸಿಕೊಂಡ ರಾಜ್ಯದ 8 ರಾಜಕಾರಣಿಗಳ ಪಟ್ಟಿ

ಮನೆಯಲ್ಲಿ ಚಿಕಿತ್ಸೆ

ಮನೆಯಲ್ಲಿ ಚಿಕಿತ್ಸೆ

ಸೋಂಕು ದೃಢಪಟ್ಟ ಬಳಿಕ ಮನೆಯಲ್ಲಿಯೇ ನನ್ನ ರೂಂನಲ್ಲಿ ಐಸೋಲೇಶನ್‌ಗೆ ಒಳಗಾದೆ. ರೂಂ ಬಿಟ್ಟು ನಾನು ಹೊರಗೆ ಬರಲಿಲ್ಲ. ನನಗೆ ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದರಿಂದ ನಾನು ಮನೆಯಲ್ಲಿಯೇ ಚಿಕಿತ್ಸೆಗೆ ಒಳಗಾಗದೆ. ಉಸಿರಾಟದ ವ್ಯಾಯಾಮ, ಯೋಗ, ಪ್ರಣಾಯಾಮ ಮಾಡುತ್ತಿದ್ದೆ. ಜೊತೆಗೆ ಆರೋಗ್ಯಕರ ಆಹಾರ ನಮ್ಮಲ್ಲಿಯ ಸಾಂಪ್ರದಾಯಿಕ ಔಷಧಗಳನ್ನೂ ತೆಗೆದುಕೊಳ್ಳುತ್ತಿದ್ದೆ.

ಇದೆಲ್ಲದರ ಜೊತೆಗೆ ಕೋಟ್ಯಂತರ ಜನರ ಆಶೀರ್ವಾದ ನನ್ನನ್ನು ಕಾಪಾಡಿತು ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಮರಿಸಿಕೊಂಡಿದ್ದಾರೆ.

"ನನ್ನನ್ನು ಮಗುವಿನಂತೆ ನೋಡಿಕೊಂಡ"

ಇದೆಲ್ಲದರ ಜೊತೆಗೆ ನನ್ನ ಮಗ, ನಾನು ಅವನನ್ನು ಚಿಕ್ಕಂದಿನಲ್ಲಿ ಹೇಗೆ ನೋಡಿಕೊಂಡಿದ್ದೆನೋ ಹಾಗೆಯೇ ನನ್ನನ್ನು ನೋಡಿಕೊಂಡ, ಆರೈಕೆ ಮಾಡಿದ. ಈ ವೇಳೆಯಲ್ಲಿ ನನಗೆ ಧೈರ್ಯ ತುಂಬಿದ. ಪ್ರತಿ ದಿನ, ಪ್ರತಿಕ್ಷಣ ನನಗೆ ಧೈರ್ಯ ತುಂಬುತ್ತಿದ್ದ ಎಂದು ಒಬ್ಬ ತಾಯಿಯಾಗಿ ಪುತ್ರನ ಸೇವೆಯನ್ನು ಸುಮಲತಾ ಅಂಬರೀಶ್ ಅವರು ನೆನೆದಿದ್ದಾರೆ.

ನನಗೆ ಫೋನ್‌ ಮೂಲಕ ಅವನು ಧೈರ್ಯ ತುಂಬುತ್ತಿದ್ದ. ನಾವು ಒಂದೇ ಮನೆಯಲ್ಲಿದ್ದರೂ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಈಗ ನಾನು ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ. ಕೋವಿಡ್‌ ಸೋಲಿಸಿದ್ದೇನೆ ಎಂದಿದ್ದಾರೆ.

ಸಾಮಾಜಿಕ ಕಳಂಕ ಅಲ್ಲ

ಕೊರೊನಾ ವೈರಸ್ ಕೆಲವು ತಿಂಗಳುಗಳಿಂದ ಎಲ್ಲರ ನೆಮ್ಮದಿ ಹಾಳು ಮಾಡಿದೆ. ಕೋವಿಡ್ ಬಂದರೆ ಅದೊಂದು ಸಾಮಾಜಿಕ ಕಳಂಕ ಅಲ್ಲ, ಅದು ಸೋಂಕಿತರು ಮಾಡಿದ ಅಪರಾಧವೂ ಅಲ್ಲ. ಅದು ಬಂದಿದೆ, ಅದನ್ನು ಎದುರಿಸಬೇಕು ಅಷ್ಟೆ. ಕೋವಿಡ್ ಸೋಂಕಿತರನ್ನು ದಯವಿಟ್ಟು ಸ್ವಲ್ಪ ಕರುಣೆಯಿಂದ, ಒಳ್ಳೆಯ ಮನಸ್ಸಿನಿಂದ ನೋಡಿ. ಈ ಸಂಗತಿಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಭಯದಿಂದ ಇದುವರೆಗೂ ಯಾರೂ, ಏನನ್ನೂ ಸಾಧಿಸಿಲ್ಲ. ನಾವು ಧೈರ್ಯ ಮಾಡಿದರೆ ಖಂಡಿತ ಕೊರೊನಾ ವೈರಸ್‌ನಿಂದ ಮುಕ್ತರಾಗುತ್ತೇವೆ. ಎಲ್ಲರೂ ದಯವಿಟ್ಟು ಎಚ್ಚರಿಕೆಯಿಂದ ಇರಿ, ಭಯ-ಆತಂಕ ಪಡಬೇಡಿ. ದೇವರು ಎಲ್ಲರನ್ನೂ ಕಾಪಾಡುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

English summary
I was infected with Covid-19, and am now completely cured of coronavirus. Initially, after a period of fear and confusion, I hardened mind. I have taken courage in myself said Mandya MP Sumalata Ambarish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X