ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪ್ರಮುಖ ರಸ್ತೆಗಳ ವೇಗ ಮಿತಿ ಬಗ್ಗೆಯೂ ಮಾಹಿತಿ ನೀಡಲಿದೆ ಗೂಗಲ್ ಮ್ಯಾಪ್‌

|
Google Oneindia Kannada News

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವ ಅವಧಿಯನ್ನು ಕಡಿಮೆ ಮಾಡುವ ಉದ್ದೇಶದೊಂದಿದೆ ಗೂಗಲ್ ಸಂಸ್ಥೆ ಇತ್ತೀಚೆಗಷ್ಟೆ ಬೆಂಗಳೂರು ಪೊಲೀಸರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈಗ ಗೂಗಲ್‌ ಮ್ಯಾಪ್ಸ್ ವೇಗ ಮಿತಿ ಎಚ್ಚರಿಕೆ ನಿಡುವ ಸೌಲಭ್ಯವನ್ನು ಪರಿಚಯಿಸಿದೆ.

ಗೂಗಲ್ ಮ್ಯಾಪ್ಸ್ ಈಗ ಭಾರತದ ಬಳಕೆದಾರರಿಗೆ ಟ್ರಾಫಿಕ್ ಅಧಿಕಾರಿಗಳು ಹಂಚಿಕೊಂಡಿರುವ ವೇಗ ಮಿತಿಗಳ ಮಾಹಿತಿಯನ್ನು ತೋರಿಸುತ್ತದೆ. ನಗರಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಕಾಯುವಿಕೆ ಸಮಯವನ್ನು ಕಡಿಮೆ ಮಾಡಲು ಇರುವ ಟ್ರಾಫಿಕ್ ಮಾದರಿಗಳು ಮತ್ತು ಯಂತ್ರದ ಕಲಿಕೆಯ ಶಕ್ತಿಯನ್ನು ಗೂಗಲ್ ಬಳಸಿಕೊಳ್ಳುತ್ತಿದೆ.

ಬೆಂಗಳೂರು; ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಣು, ಮನೆಗೆ ನೋಟಿಸ್ಬೆಂಗಳೂರು; ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಣು, ಮನೆಗೆ ನೋಟಿಸ್

ಸರ್ಕಲ್‌ಗಳು, ಸಿಗ್ನಲ್‌ಗಳಲ್ಲಿ ಕಾಯುವ ಸಮಯ, ರಸ್ತೆ ದಟ್ಟಣೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಸದ್ಯಕ್ಕೆ ಈ ಸೌಲಭ್ಯವು, ಬೆಂಗಳೂರ ಮತ್ತು ಚಂಡೀಗಢದಲ್ಲಿ ಮಾತ್ರ ಲಭ್ಯವಿದೆ. ಈ ಸೌಲಭ್ಯವನ್ನು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ವಿಸ್ತರಿಸಲು ಗೂಗಲ್ ನಿರ್ಧರಿಸಿದೆ.

ಗೂಗಲ್ ಮ್ಯಾಪ್ ಈಗಾಗಲೇ ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವಿಕೆ ಸಮಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲ್ಲಾ ಸಿಗ್ನಲ್‌ಗಳಲ್ಲಿ ವಾಹನ ದಟ್ಟಣೆಯನ್ನು ಸುಮಾರು 20 ಪ್ರತಿಶತ ಕಡಿಮೆ ಮಾಡಿದೆ.

 ವೇಗ ಮಿತಿ ಬಗ್ಗೆ ಗೂಗಲ್ ಮ್ಯಾಪ್ ಮಾಹಿತಿ

ವೇಗ ಮಿತಿ ಬಗ್ಗೆ ಗೂಗಲ್ ಮ್ಯಾಪ್ ಮಾಹಿತಿ

ಆಂಡ್ರಾಯ್ಡ್ ಬಳಕೆದಾರರು ಗೂಗಲ್‌ ನಕ್ಷೆಗಳನ್ನು ಬಳಸಿ ಪ್ರಯಾಣ ಮಾಡುವಾಗ, ಅವರ ಮೊಬೈಲ್ ಪರದೆಯ ಮೇಲೆ ಸ್ಪೀಡೋಮೀಟರ್ ಸೇರಿಸಲು ಸಹ ಅನುಮತಿ ನೀಡುತ್ತದೆ. ಇದು ಪೂರ್ವನಿಯೋಜಿತವಾಗಿ ಸಕ್ರಿಯವಾಗಿರುವುದಿಲ್ಲ ಬದಲಿಗೆ ಬಳಕೆದಾರರು ಸೆಟ್ಟಿಂಗ್‌ಗಳಿಗೆ ಕೊಟ್ಟಿರುವ ಅವಕಾಶಗಳನ್ನು ಬಳಸಿ ಸಕ್ರಿಯಗೊಳಿಸಬೇಕಾಗುತ್ತದೆ.

ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ನಂತರ, ವೈಶಿಷ್ಟ್ಯವು ಲಭ್ಯವಿರುವ ಪ್ರದೇಶಗಳಲ್ಲಿ ವೇಗದ ಮಿತಿಯನ್ನು ದಾಟಿದಾಗ ಸ್ಪೀಡೋಮೀಟರ್ ನಿಮ್ಮನ್ನು ಎಚ್ಚರಿಸುತ್ತದೆ. ಗೂಗಲ್‌ ನಕ್ಷೆಗಳ ವೇಗ ಮಿತಿ ವೈಶಿಷ್ಟ್ಯವನ್ನು ಹೇಗೆ ಪಡೆಯುವುದು ಎಂದು ತಿಳಿಯಲು, ನೀವು ಈ ಹಂತಗಳನ್ನು ಅನುಸರಿಸಬಹುದು.

 ಗೂಗಲ್ ವೇಗ ಮಿತಿ ಸೆಟ್ ಮಾಡುವ ವಿಧಾನ

ಗೂಗಲ್ ವೇಗ ಮಿತಿ ಸೆಟ್ ಮಾಡುವ ವಿಧಾನ

ನಿಮ್ಮ ಆಂಡ್ರಾಯಿಡ್ ಸ್ಮಾರ್ಟ್‌ ಫೋನ್‌ನಲ್ಲಿ ಗೂಗಲ್‌ ಮ್ಯಾಪ್ ಅಪ್ಲಿಕೇಷನ್ ಓಪನ್ ಮಾಡಬೇಕು, ಪರದೆಯ ಬಲಗಡೆ ಮೂಲೆಯಲ್ಲಿರುವ ನಿಮ್ಮ ಗೂಗಲ್ ಪ್ರೊಫೂಲ್ ಚಿತ್ರದ ಮೇಲೆ ಒತ್ತಿರಿ.

ಮೆನುವಿನಲ್ಲಿ ಸೆಟ್ಟಿಂಗ್‌ ಆಯ್ಕೆ ಮೇಲೆ ಟ್ಯಾಪ್‌ ಮಾಡಿ, ನ್ಯಾವಿಗೇಶನ್‌ ಸೆಟ್ಟಿಂಗ್‌ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. ಕೆಳಗೆ ಸ್ಕ್ರಾಲ್‌ ಮಾಡಿ ಅಲ್ಲಿ ನಿಮಗೆ ಕಾಣಿಸುವ ಸ್ಪೀಡೋಮೀಟರ್ ಪಕ್ಕದಲ್ಲಿರುವ ಟಾಗಲ್ ಅನ್ನು ಸಕ್ರಿಯಗೊಳಿಸಿ.

ಒಮ್ಮೆ ನೀವು ಆಯ್ಕೆಯನ್ನು ಸಕ್ರಿಯಗೊಳಿಸಿದರೆ, ನಿಮ್ಮಗೂಗಲ್ ನಕ್ಷೆಗಳ ಪರದೆಯಲ್ಲಿ ನೀವು ಸ್ಪೀಡೋಮೀಟರ್ ನೋಡಲು ಸಾಧ್ಯವಾಗುತ್ತದೆ.

 ಸಂಚಾರ ಸುಗಮಗೊಳಿಸಲು ಯೋಜನೆ

ಸಂಚಾರ ಸುಗಮಗೊಳಿಸಲು ಯೋಜನೆ

ಸದ್ಯ ಬೆಂಗಳೂರು ಮತ್ತು ಚಂಡೀಗಢದಲ್ಲಿ ಮಾತ್ರ ಈ ಸೌಲಭ್ಯ ಇದ್ದು ಮುಂಬರುವ ತಿಂಗಳುಗಳಲ್ಲಿ ಈ ಯೋಜನೆಯನ್ನು ಕೋಲ್ಕತ್ತಾ ಮತ್ತು ಹೈದರಾಬಾದ್‌ಗೆ ವಿಸ್ತರಿಸಲಿದೆ. ದೆಹಲಿ, ಹೈದರಾಬಾದ್, ಚಂಡೀಗಢ, ಅಹಮದಾಬಾದ್, ಕೋಲ್ಕತ್ತಾ, ಗುರ್ಗಾಂವ್, ಬೆಂಗಳೂರು ಮತ್ತು ಆಗ್ರಾ ನಗರಗಳಾದ್ಯಂತ ರಸ್ತೆ ಮುಚ್ಚುವಿಕೆ ಮತ್ತು ಘಟನೆಗಳ ಮಾಹಿತಿಯನ್ನು ಗೂಗಲ್‌ ನಕ್ಷೆಗಳು ಒದಗಿಸುತ್ತವೆ, ವಾಹನ ಸವಾರರಿಗೆ ಪ್ರಯಾಣ ಮಾರ್ಗಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ದಟ್ಟಣೆ ವಲಯಗಳನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ.

 ಸ್ಟ್ರೀಟ್‌ ವ್ಯೂ ಸೌಲಭ್ಯ ಪರಿಚಯಿಸಿರುವ ಗೂಗಲ್

ಸ್ಟ್ರೀಟ್‌ ವ್ಯೂ ಸೌಲಭ್ಯ ಪರಿಚಯಿಸಿರುವ ಗೂಗಲ್

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ಭಾರತದ 10 ನಗರಗಳಲ್ಲಿ ಪರವಾನಗಿ ಪಡೆದ ಸ್ಥಳೀಯ ಪಾಲುದಾರರ ಹೊಸ ಚಿತ್ರಗಳೊಂದಿಗೆ 150,000 ಕಿಲೋ ಮೀಟರ್ ಗಿಂತಲೂ ಹೆಚ್ಚು ವ್ಯಾಪಿಸಿರುವ ಬೀದಿ ರಸ್ತೆಗಳ (ಸ್ಟ್ರೀಟ್ ವ್ಯೂವ್) ಮಾಹಿತಿಯನ್ನು ಗೂಗಲ್ ಮ್ಯಾಪ್ಸ್‌ನಲ್ಲಿ ಈಗಾಗಲೇ ನೀಡಲಾಗಿದೆ.

ಈ ಸೌಲಭ್ಯವು ಸ್ಥಳೀಯ ಪೊಲೀಸರಿಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ನಗರದಾದ್ಯಂತ ಟ್ರಾಫಿಕ್ ದಟ್ಟಣೆಯನ್ನು ಕಡಿಮೆಮಾಡಬಹುದಾಗಿದೆ. ಸ್ಥಳೀಯ ಟ್ರಾಫಿಕ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಗೂಗಲ್ ಬೆಂಗಳೂರಿನಲ್ಲಿ ಕಾರ್ಯಗತಗೊಳಿಸಿದೆ.

Recommended Video

West Indies ವಿರುದ್ಧದ 2ನೇ ಟಿ20 ಪಂದ್ಯ ತಡವಾಗಿ ಆರಂಭವಾಗಲು ಇದೇ ಕಾರಣ | Sports | OneIndia Kannada

English summary
After Introudicing Streetview Option, Google Maps now shows speed limits information shared by traffic authorities to users in India. As of now, the feature will be available in Bengaluru and Chandigarh but the tech giant is looking forward to partnering with more cities in surfacing speed limits info on Google Maps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X