ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನುಮುಂದೆ ಆನ್‌ಲೈನ್‌ನಲ್ಲೇ ಅಗ್ನಿಶಾಮಕ ಎನ್‌ಒಸಿ ಪಡೆಯಿರಿ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅಗ್ನಿಶಾಮಕ ದಳ ನಿರಾಪೇಕ್ಷಣ(ಎನ್‌ಒಸಿ) ಪ್ರಮಾಣಪತ್ರವನ್ನು ಇನ್ನುಮುಂದೆ ಆನ್‌ಲೈನ್‌ ಮೂಲಕ ಕುಳಿತಲ್ಲೇ ಪಡೆಯಬಹುದು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಹುಮಹಡಿ ಕಟ್ಟಡ, ವಾಣಿಜ್ಯ ಮಳಿಗೆ ಇತ್ಯಾದಿಗಳಿಗೆ ಎನ್‌ಒಸಿ ಪಡೆಯುವರ ಅನುಕೂಲಕ್ಕಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಫೈಯರ್ ಅಪ್ರೂವಲ್ ಸಿಸ್ಟಂ ಎಂಬ ತಂತ್ರಜ್ಞಾನ ಪರಿಚಯಿಸುತ್ತಿದೆ.

ಅಗ್ನಿಶಾಮಕ ಇಲಾಖೆಯ ವಿವಿಧ ಸೌಲಭ್ಯಗಳ ಲೋಕಾರ್ಪಣೆ, ಹಾಸ್ಟೆಲ್ ಉದ್ಘಾಟನೆಅಗ್ನಿಶಾಮಕ ಇಲಾಖೆಯ ವಿವಿಧ ಸೌಲಭ್ಯಗಳ ಲೋಕಾರ್ಪಣೆ, ಹಾಸ್ಟೆಲ್ ಉದ್ಘಾಟನೆ

ಇದ್ದಲ್ಲಿಯೇ ಅಗ್ನಿಶಾಮಕ ದಳದ ಅಧಿಕೃತ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಷನ್ ಮೂಲಕ ಉದ್ದೇಶಿತ ಬಹುಮಹಡಿ ಕಟ್ಟಡ ಅಥವಾ ವಾಣಿಜ್ಯ ಮಳಿಗೆ, ಸ್ವ-ವಿವರ, ನೀಲಿನಕ್ಷೆ ಮತ್ತಿತರ ಮಾಹಿತಿಯನ್ನು ಅಪ್‌ ಲೋಡ್ ಮಾಡಿದರೆ ಸಾಕು. ಸಂಬಂಧಪಟ್ಟ ಅಗ್ನಿ ಶಾಮಕ ಅಧಿಕಾರಿಗಳು ಕಟ್ಟಡದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ವರದಿಯನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುತ್ತಾರೆ.

Now fire Approval System goes online soon

ಕಟ್ಟಡ ನಿರ್ಮಾಣಕ್ಕೂ ಮೊದಲು, ನಿರ್ಮಾಣದ ವೇಳೆ ಹಾಗೂ ಪೂರ್ಣಗೊಂಡ ಮೇಲೆ ಹಂತಹಂತವಾಗಿ ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಉಪಯೋಗಕ್ಕೆ ಯೋಗ್ಯವೆದು ಪ್ರಮಾಣಪತ್ರ ನೀಡಬೇಕು. ಕೆಲವು ಸ್ಥಳಕ್ಕೆ ಖುದ್ದಾಗಿ ಹೋಗದೆ ಕುಳಿತಲ್ಲೇ ಎನ್‌ಒಸಿ ವಿತರಿಸತ್ತಾರೆ. ಅದನ್ನು ತಪ್ಪಿಸಲು ಇಲಾಖೆ ಕ್ರಮ ತೆಗೆದುಕೊಂಡಿದೆ. ಅಧಿಕಾರಿಗಳು ಸ್ಮಾರ್ಟ್ ಟ್ಯಾಬ್‌ ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಆನ್‌ಲೈನ್ ನಲ್ಲಿ ಅಪ್‌ಲೋಡ್ ಮಾಡಿದಾಗ ಜಿಪಿಎಸ್ ಮೂಲಕ ದೃಢವಾಗಲಿದೆ.

English summary
Department of fire and safety implementing online fire approval system to ease the issuing of no objection certifiate and all. Earlier it was months to take for the NOC for new commercial buildings, multi store building and etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X