ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ಆಯಿತು, ಈಗ ದರ ಏರಿಕೆಗೆ ಜಲಮಂಡಳಿ ಚಿಂತನೆ

|
Google Oneindia Kannada News

ಬೆಂಗಳೂರು, ನವೆಂಬರ್ 06 : ವಿದ್ಯುತ್ ದರ ಏರಿಕೆ ಆದ ತಕ್ಷಣ ಬೆಂಗಳೂರು ಜಲಮಂಡಳಿ ಸಹ ದರ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. 6 ವರ್ಷಗಳಿಂದ ಜಲಮಂಡಳಿ ದರವನ್ನು ಏರಿಕೆ ಮಾಡಿಲ್ಲ.

ಪ್ರತಿ ತಿಂಗಳು ಜಲಮಂಡಳಿಗೆ 10 ರಿಂದ 15 ಕೋಟಿ ನಷ್ಟವಾಗುತ್ತಿದೆ. ಜಲಮಂಡಳಿ ಸುಮಾರು 46 ಕೋಟಿ ವಿದ್ಯುತ್ ಬಿಲ್ ಪ್ರತಿ ತಿಂಗಳು ಪಾವತಿ ಮಾಡುತ್ತದೆ. ವಿದ್ಯುತ್ ದರ ಏರಿಕೆ ಮಾಡಿದಂತೆ ನೀರಿನ ಬಿಲ್ ಸಹ ಏರಿಕೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಕನಿಷ್ಠ ಒಂದು ವರ್ಷದವರೆಗೆ ವಿದ್ಯುತ್ ದರ ಏರಿಕೆ ಬೇಡ: ಕುಮಾರಸ್ವಾಮಿ ಕನಿಷ್ಠ ಒಂದು ವರ್ಷದವರೆಗೆ ವಿದ್ಯುತ್ ದರ ಏರಿಕೆ ಬೇಡ: ಕುಮಾರಸ್ವಾಮಿ

ಈಗ ವಿದ್ಯುತ್ ಶುಲ್ಕ ಹೆಚ್ಚಳ ಆಗಿರುವುದರಿಂದ ಜಲಮಂಡಳಿಗೆ ಸಹ ಹೆಚ್ಚಿನ ಹೊರೆಯಾಗಲಿದೆ. ಆದ್ದರಿಂದ, ಸರ್ಕಾರಕ್ಕೆ ದರ ಹೆಚ್ಚಳದ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. 2020ರ ಫೆಬ್ರವರಿಯಲ್ಲಿಯೇ ಒಂದು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

ಹೊಸ ಬೋರ್‌ವೆಲ್‌ಗೆ ಅನುಮತಿ ಕಡ್ಡಾಯ, ಏನಿದು ಆದೇಶ?ಹೊಸ ಬೋರ್‌ವೆಲ್‌ಗೆ ಅನುಮತಿ ಕಡ್ಡಾಯ, ಏನಿದು ಆದೇಶ?

 Now BWSSB Seeks Approval To Hike Water Bill

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದ್ದರು. ಪ್ರಸ್ತುತ ಜಲಮಂಡಳಿ 8 ಸಾವಿರ ಲೀಟರ್ ನೀರು ಸಾಗಣೆಗೆ ಕಿ. ಮೀ.ಗೆ 7 ರೂ. ದರ ಪಡೆಯುತ್ತಿದೆ.

ಶರಾವತಿ ಭೂಗರ್ಭ ವಿದ್ಯುತ್ ಯೋಜನೆ; ಸಮೀಕ್ಷೆಗೆ ತಡೆ ಶರಾವತಿ ಭೂಗರ್ಭ ವಿದ್ಯುತ್ ಯೋಜನೆ; ಸಮೀಕ್ಷೆಗೆ ತಡೆ

ಎಷ್ಟು ದರ ಏರಿಕೆ ಮಾಡಲಾಗುತ್ತದೆ? ಎಂದು ಬೆಂಗಳೂರು ಜಲಮಂಡಳಿ ಬಹಿರಂಗಪಡಿಸಿಲ್ಲ. ಫೆಬ್ರವರಿಯಲ್ಲಿ ಸಲ್ಲಿಸಲಾದ ಪ್ರಸ್ತಾವನೆ ಅಂತಯೇ ಏರಿಕೆ ಮಾಡಲು ಅವಕಾಶ ನೀಡಿದರೆ ಸಾಕು ಎಂದು ಮಂಡಳಿ ಹೇಳಿದೆ.

Recommended Video

ರಾಜನೇ ಇಲ್ಲದ ಅರಮನೆ ( CCD) | NBW Issued Against SM Krishna's Daughter Malavika | Oneindia Kannada

ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ. ನೀರಿನ ದರ ಏರಿಕೆಗೂ ಅವಕಾಶ ನೀಡಲಿದೆಯೇ? ಕಾದು ನೋಡಬೇಕು.

English summary
After the power tariff hike now Bangalore Water Supply and Sewage Board (BWSSB) asked government to hike water bill. Board hasn’t raised the water tariff for the past 6 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X