ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಕೊಟ್ಟ ಮಾತು ಉಳಿಸಿಕೊಂಡ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಆಗಸ್ಟ್ 09: ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಶನಿವಾರ 2665 ಹೊಸ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 72,237ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರು ಆಸ್ಪತ್ರೆಗೆ ತೆರಳಲು ಅಂಬ್ಯುಲೆನ್ಸ್‌ಗಳು ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಅಂಬ್ಯುಲೆನ್ಸ್‌ಗೆ ಕರೆ ಮಾಡಿದರೆ ಗಂಟೆಗಟ್ಟಲೇ ಕಾಯಬೇಕಾಗುತ್ತದೆ. ನಗರದ ಕೋವಿಡ್ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಅಂಬ್ಯುಲೆನ್ಸ್ ಲಭ್ಯವಿಲ್ಲ ಎಂಬ ದೂರು ಹೇಳಿ ಬಂದಿತ್ತು.

ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ! ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ!

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ನಗರದಲ್ಲಿ ಅಂಬ್ಯುಲೆನ್ಸ್ ಸೇವೆ ಬಗ್ಗೆ ಚರ್ಚೆ ನಡೆಸಿದ್ದರು. ವಲಯವಾರು ಅಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದ್ದರು.

ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು

ಬೆಂಗಳೂರು ನಗರದ ಜನರಿಗೆ ತೊಂದರೆಯಾಗದಂತೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದರು. ಈಗ ಕೊಟ್ಟ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ನಗರಕ್ಕೆ 665 ಅಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಉಚಿತ ಅಂಬ್ಯುಲೆನ್ಸ್ ಸೇವೆ ನೀಡಿದ ಚಿಕ್ಕಮಗಳೂರಿನ ಪಿಎಸ್ಐಉಚಿತ ಅಂಬ್ಯುಲೆನ್ಸ್ ಸೇವೆ ನೀಡಿದ ಚಿಕ್ಕಮಗಳೂರಿನ ಪಿಎಸ್ಐ

ಅಂಬ್ಯುಲೆನ್ಸ್‌ಗಳ ವಲಯವಾರು ಹಂಚಿಕೆ

ಅಂಬ್ಯುಲೆನ್ಸ್‌ಗಳ ವಲಯವಾರು ಹಂಚಿಕೆ

ಒಟ್ಟು 103 ಬಿಎಲ್‌ಎಸ್ ಅಂಬ್ಯುಲೆನ್ಸ್, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ 378 ಮತ್ತು 184 ಟಿಟಿಗಳು ಸೇರಿ 665 ಅಂಬ್ಯುಲೆನ್ಸ್‌ಗಳು ಕೋವಿಡ್ ಮತ್ತು ಕೋವಿಡ್ ಏತರ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬೆಂಗಳೂರಿನಲ್ಲಿ ಸಿದ್ಧವಾಗಿವೆ.

ಅಂಬ್ಯುಲೆನ್ಸ್‌ಗಳ ವಿವರ

ಅಂಬ್ಯುಲೆನ್ಸ್‌ಗಳ ವಿವರ

ಪೂರ್ವ ವಲಯಕ್ಕೆ 22 ಬಿಎಲ್‌ಎಸ್ ಅಂಬ್ಯುಲೆನ್ಸ್, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ 52, 33 ಟಿಟಿಗಳು ಸೇರಿ ಒಟ್ಟು 127 ಅಂಬ್ಯುಲೆನ್ಸ್‌ಗಳನ್ನು ಹಂಚಿಕೆ ಮಾಡಲಾಗಿದೆ.

ದಕ್ಷಿಣ ವಲಯಕ್ಕೆ 37 ಬಿಎಲ್‌ಎಸ್, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಪರಿರ್ತಿಸಿದ 67, 37 ಟಿಟಿ ಸೇರಿ 141 ಅಂಬ್ಯುಲೆನ್ಸ್ ಹಂಚಿಕೆ ಮಾಡಲಾಗಿದೆ.

ದಾಸರಹಳ್ಳಿ ವಲಯಕ್ಕೆ 9 ಬಿಎಲ್‌ಎಸ್, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಮಾಡಿದ 13, 2 ಟಿಟಿ ಸೇರಿ 24 ಅಂಬ್ಯುಲೆನ್ಸ್ ನೀಡಲಾಗಿದೆ.

ರೋಗಿಗಳಿಗೆ ಅಂಬ್ಯುಲೆನ್ಸ್

ರೋಗಿಗಳಿಗೆ ಅಂಬ್ಯುಲೆನ್ಸ್

ದಕ್ಷಿಣ ವಲಯಕ್ಕೆ ಬಿಎಲ್‌ಎಸ್ ಅಂಬ್ಯುಲೆನ್ಸ್ ಹಂಚಿಕೆ ಮಾಡಿಲ್ಲ. ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಪರಿರ್ತಿಸಿದ 98 ಮತ್ತು 12 ಟಿಟಿಗಳು ಸೇರಿ 110 ಅಂಬ್ಯುಲೆನ್ಸ್ ಮೀಸಲಿಡಲಾಗಿದೆ.

ಆರ್. ಆರ್. ನಗರ ವಲಯಕ್ಕೆ 12 ಬಿಎಲ್‌ಎಸ್ ಅಂಬ್ಯುಲೆನ್ಸ್, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಮಾಡಿದ 25, 3 ಟಿಟಿ ಸೇರಿ 40 ಅಂಬ್ಯುಲೆನ್ಸ್ ಹಂಚಿಕೆ ಮಾಡಲಾಗಿದೆ.

ಯಲಹಂಕ ವಲಯಕ್ಕೆ 9 ಬಿಎಲ್‌ಎಸ್, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಮಾಡಿದ 15, 9 ಟಿಟಿ ಸೇರಿ 33 ಅಂಬ್ಯುಲೆನ್ಸ್ ನೀಡಲಾಗಿದೆ.

ಅಂಬ್ಯುಲೆನ್ಸ್‌ಗಳ ವಿವರ

ಅಂಬ್ಯುಲೆನ್ಸ್‌ಗಳ ವಿವರ

ಬೊಮ್ಮನಹಳ್ಳಿ ವಲಯಕ್ಕೆ ಬಿಎಲ್‌ಎಸ್ ಅಂಬ್ಯುಲೆನ್ಸ್ 6, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಮಾಡಿದ 28, 9 ಟಿಟಿ ಸೇರಿ 43 ಅಂಬ್ಯುಲೆನ್ಸ್ ನೀಡಲಾಗಿದೆ.

ಮಹದೇವಪುರ ವಲಯ ವ್ಯಾಪ್ತಿಗೆ 5 ಬಿಎಲ್‌ಎಸ್ ಅಂಬ್ಯುಲೆನ್ಸ್, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಮಾಡಿದ 32, 15 ಟಿಟಿಗಳನ್ನು ಹಂಚಿಕೆ ಮಾಡಲಾಗಿದೆ.

ಪೊಲೀಸ್ ಇಲಾಖೆಯ 3 ಬಿಎಲ್‌ಎಸ್, ಟಿಟಿಯನ್ನು ಅಂಬ್ಯುಲೆನ್ಸ್ ಆಗಿ ಮಾಡಿದ 8 ಅಂಬ್ಯುಲೆನ್ಸ್‌ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ.

English summary
As promised by Chief Minister B. S. Yediyurappa 665 ambulances have been deployed across Bengaluru city to facilitate movement of Covid and non-Covid patients to Covid care centres and hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X