ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಉದ್ದಿಮೆ ಪರವಾನಗಿ ಆಂದೋಲನ

By Ashwath
|
Google Oneindia Kannada News

ಬೆಂಗಳೂರು,ಜೂ.12: ನಗರದಲ್ಲಿ ಇನ್ನು ಮುಂದೆ ಉದ್ದಿಮೆ ಪರವಾನಗಿ ಪಡೆಯುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯಬಹುದು ಎಂದು ಬೆಂಗಳೂರು ಮೇಯರ್‌ ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ.

ನಗರದಲ್ಲಿ ಐದು ಲಕ್ಷಕ್ಕೂ ಹೆಚ್ಚು ಉದ್ದಿಮೆಗಳಿವೆ ಎಂಬ ಅಂದಾಜಿದೆ. ಇವುಗಳಲ್ಲಿ 43,875 ಉದ್ದಿಮೆಗಳು ಮಾತ್ರ ಪರವಾನಗಿ ಪಡೆದು ವ್ಯವಹಾರ ನಡೆಸುತ್ತಿವೆ. 4 ಲಕ್ಷ ಉದ್ದಿಮೆಗಳು ಪರವಾನಗಿ ಪಡೆಯದೇ ವ್ಯವಹಾರ ನಡೆಸುತ್ತಿವೆ.ಈ ಬಗ್ಗೆ ಉದ್ದಿಮೆಗಳಿಗೆ ಅರಿವು ಮೂಡಿಸಲು ಜೂನ್ 16ರಿಂದ ನಗರದ 28 ಸ್ಥಳಗಳಲ್ಲಿ ಉದ್ದಿಮೆ ಪರವಾನಗಿ ಆಂದೋಲನವನ್ನು ಒಂದು ತಿಂಗಳ ಕಾಲ ನಡೆಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮೇಯರ್‌ ತಿಳಿಸಿದ್ದಾರೆ.

Katte Sathya

ಒಂದುವೇಳೆ ಪರವಾನಗಿಯನ್ನೂ ಪಡೆಯದೆ, ನಿಯಮ ಉಲ್ಲಂಘಿಸಿದ ಉದ್ದಿಮೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಎಚ್ಚರಿಸಿದರು. ಆಂದೋಲನದಲ್ಲಿ ಕರಾರು ಪತ್ರ, ಒಪ್ಪಿಗೆ ಪತ್ರ ಹಾಗೂ ಕಂದಾಯ ಪಾವತಿ ರಸೀದಿಯೊಂದಿಗೆ ನಿಗದಿತ ಶುಲ್ಕ ಪಾವತಿಸಿ ಉದ್ದಿಮೆದಾರರು ಪರವಾನಗಿ ಪಡೆಯಬಹುದು.[ಬಿಬಿಎಂಪಿ ವಿಭಜನೆ ಕುರಿತು ಜೂ.17ಕ್ಕೆ ವಿಶೇಷ ಸಭೆ]

ಉದ್ದಿಮೆಗಳಿಂದ ಪರವಾನಗಿ ಶುಲ್ಕ ವಸೂಲಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಕೈಗಾರಿಕೆಗಳನ್ನೂ ಟ್ರೇಡ್ ಲೈಸೆನ್ಸ್ ವ್ಯಾಪ್ತಿಗೆ ತರುವ ಬಗ್ಗೆ ಚಿಂತಿಸಲಾಗುತ್ತಿದ್ದು, ಈ ಬಗ್ಗೆ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಅವರು ವಿವರಿಸಿದರು.

English summary
Getting fresh trade licence is just a mouse click as the Bruhat Bangalore Mahanagara Palike has introduced online trade licence registration system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X