• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನ.25: ಇತಿಹಾಸದಲ್ಲಿ ಈ ದಿನದ ವಿಶೇಷವೇನು?

By Mahesh
|

ಬೆಂಗಳೂರು, ನ.25: ಗಣ್ಯರ ಹುಟ್ಟುಹಬ್ಬ,ಸಂಸ್ಮರಣಾ ದಿನ, ವಾರ್ಷಿಕೋತ್ಸವ, ಸರ್ಕಾರಿ ಘೋಷಣೆ, ವಿಜಯೋತ್ಸವ ದಿನ ಅಥವಾ ಅತ್ಯಂತ ಘೋರ ದುರಂತ ದಾಖಲಾದ ದಿನ ಹೀಗೆ ಪ್ರತಿ ದಿನಕ್ಕೂ ಅದರದ್ದೇ ಮಹತ್ವವಿರುತ್ತದೆ.

ವಿಶ್ವದ ಇತಿಹಾಸದಲ್ಲಿ ನ.25 ರಂದು ನಡೆದಿರುವ ಪ್ರಮುಖ ಘಟನಾವಳಿಗಳತ್ತ ಒಂದು ಸಿಂಹಾವಲೋಕನ ಇಲ್ಲಿದೆ. ಇತಿಹಾಸ ಪುಟಗಳನ್ನು ತಿರುವಿದಾಗ ಕಂಡ ಪ್ರಮುಖ ಅಂಶಗಳನ್ನು ನಿಮ್ಮತ್ತ ನೀಡುವ ಪ್ರಯತ್ನ ಒನ್ ಇಂಡಿಯಾ ತಂಡ ಮಾಡುತ್ತಿದೆ.

ಕ್ರಿ.ಪೂ 2348 : ವಿದ್ವಾಂಸರ ಪ್ರಕಾರ ಈ ದಿನದಂದು ಬಹುದೊಡ್ಡ ಪ್ರವಾಹ ಸಂಭವಿಸಿದೆ.

1844: ಮರ್ಸಿಡೀಸ್ ಬೆಂಜ್ ಕಾರು ಉತ್ಪಾದಕ ಸಂಸ್ಥೆ ಸ್ಥಾಪಕ, ಇಂಜಿನಿಯರ್ ಕಾರ್ಲ್ ಬೆಂಜ್ ಅವರು ಜನಿಸಿದ ದಿನ.

1863: ಮಿಷಿನರಿ ರಿಡ್ಜ್ ಕದನ ಅಮೆರಿಕದ ನಾಗರಿಕ ಯುದ್ಧ

1914: ಹಿರೊಹಿಟೋ ಜಪಾನಿನಲ್ಲಿ ಅಧಿಪತ್ಯ ಆರಂಭಿಸಿದರು.

1923: ಇಂಗ್ಲೆಂಡಿನಿಂದ ಅಮೆರಿಕಕ್ಕೆ ಟ್ರಾನ್ಸ್ ಲಾಂಟಿಕ್ ಪ್ರಸಾರ ಆರಂಭಗೊಂಡಿತು.

1930: ಜಪಾನಿನ ಶಿಜೌಕಾದಲ್ಲಿ ಭಾರಿ ಭೂಕಂಪ 187 ಜನ ಸಾವು.

1948: ನ್ಯಾಷನಲ್ ಕೆಡಟ ಕಾರ್ಪ್ಸ್(ಎನ್ ಸಿಸಿ) ಆರಂಭಗೊಂಡಿತು.

1951: ವಿಶ್ವಸಂಸ್ಥೆ ಪಡೆ ಹಾಗೂ ಉತ್ತರ ಕೊರಿಯಾ ನಡುವೆ ಶಾಂತಿ ಮಾತುಕತೆ.

1956: ತಮಿಳುನಾಡಿನ ಅರಿಯಳೂರು ರೈಲ್ವೆ ದುರಂತದಲ್ಲಿ 150 ಜನ ಸಾವು, ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಸ್ಥಾನಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ರಾಜೀನಾಮೆ.

1963: ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಶವವನ್ನು ಅರ್ಲಿಂಗ್ಟನ್ ನ್ಯಾಷನಲ್ ಚಿತಾಗಾರದಲ್ಲಿ ಸಂಸ್ಕಾರ ಮಾಡಲಾಯಿತು.

1964: ಬ್ರಿಟಿಷ್ ಕರೆನ್ಸಿ ಪೌಂಡ್ ಅಪಮೌಲ್ಯ ತಡೆಕಟ್ಟಲು 11 ರಾಷ್ಟ್ರಗಳಿಂದ 3 ಬಿಲಿಯನ್ ಯುಎಸ್ ಡಾಲರ್ ನೆರವು.

1984: ಫಿಲಿಫೈನ್ಸ್ ನಲ್ಲಿ ಚಂಡಮಾರುತ ನೀನಾ ಹಾವಳಿ 1,030 ಜನ ಸಾವು.

1992: ಗಾಂಧಿವಾದಿ, ಸಮಾಜಸೇವಕ ಬಾಬಾ ಆಮ್ಟೆ ಅವರಿಗೆ ಗಾಂಧಿ ಶಾಂತಿ ಪುರಸ್ಕಾರ ಲಭಿಸಿತು.

2000: ದಂತಚೋರ ವೀರಪ್ಪನ್ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಜಂಟಿಯಾಗಿ ಎಸ್ ಟಿಎಫ್ ಕಾರ್ಯಾಚರಣೆ ನಡೆಸಲು ನಿರ್ಧರಿಸಿದರು.

2008:ಶ್ರೀಲಂಕಾದಲ್ಲಿ ಚಂಡಮಾರುತ ನಿಶಾ ದಾಳಿ.

2014: ಕಥಕ್ ನೃತ್ಯಗಾರ್ತಿ ಸಿತಾರಾ ದೇವಿ ಅವರು ನಿಧನರಾದರು.

Read in English: Nov 25: This day in history
English summary
Today is Tuesday, November 25, 2014. What happened on this day in history? Oneindia takes a look at the past. Karl Benz, the renowned car engineer and the pioneering founder of automobile maker Mercedes Benz was born.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more