ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.18: ಇತಿಹಾಸದಲ್ಲಿ ಈ ದಿನದ ವಿಶೇಷವೇನು?

By Mahesh
|
Google Oneindia Kannada News

ಬೆಂಗಳೂರು, ನ.18: ಗಣ್ಯರ ಹುಟ್ಟುಹಬ್ಬ,ಸಂಸ್ಮರಣಾ ದಿನ, ವಾರ್ಷಿಕೋತ್ಸವ, ಸರ್ಕಾರಿ ಘೋಷಣೆ, ವಿಜಯೋತ್ಸವ ದಿನ ಅಥವಾ ಅತ್ಯಂತ ಘೋರ ದುರಂತ ದಾಖಲಾದ ದಿನ ಹೀಗೆ ಪ್ರತಿ ದಿನಕ್ಕೂ ಅದರದ್ದೇ ಮಹತ್ವವಿರುತ್ತದೆ. ವಿಶ್ವದ ಇತಿಹಾಸದಲ್ಲಿ ನ.18ರಂದು ನಡೆದಿರುವ ಪ್ರಮುಖ ಘಟನಾವಳಿಗಳತ್ತ ಒಂದು ಸಿಂಹಾವಲೋಕನ ಇಲ್ಲಿದೆ. ಇತಿಹಾಸ ಪುಟಗಳನ್ನು ತಿರುವಿದಾಗ ಕಂಡ ಪ್ರಮುಖ ಅಂಶಗಳನ್ನು ನಿಮ್ಮತ್ತ ನೀಡುವ ಪ್ರಯತ್ನ ಒನ್ ಇಂಡಿಯಾ ತಂಡ ಮಾಡುತ್ತಿದೆ.

1477: ವಿಲಿಯಂ ಕ್ಲಾಕ್ಸ್ಟನ್ ತಮ್ಮ ಪ್ರಥಮ ಪುಸ್ತಕವನ್ನು ಇಂಗ್ಲೆಂಡಿನಲ್ಲಿ ಮುದ್ರಣ ಮಾಡಿ ಪ್ರಕಟಿಸಿದರು.

William Claxton
1626: ಸಂತ ಪೀಟರನ ಕೆಥೆಡ್ರಿಲ್ ರೋಮಿನಲ್ಲಿ ಅಧಿಕೃತವಾಗಿ ಸಾರ್ವಜನಿಕರಿಗೆ ಅರ್ಪಣೆಯಾಯಿತು.

1727:
ಮಹಾರಾಜ ಜೈ ಸಿಂಗ್ II ಅವರು ಜೈಪುರ ನಗರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು.

1865:
ಮಾರ್ಕ್ ಟ್ವೇನ್ನನ ಪ್ರಥಮ ಕಥೆ The Celebrated Jumping Frog of Calaveras County ನ್ಯೂಯಾರ್ಕಿನ ಸಾಟರ್ಡೇ ಪ್ರೆಸ್ ನಿಂದ ಪ್ರಕಟಗೊಂಡಿತು.

1901:
ಮಧ್ಯ ಅಮೆರಿಕದಲ್ಲಿ ಕಾಲುವೆ ನಿರ್ಮಾಣ ಮಾಡಲು ಯುನೈಟೆಡ್ ಸ್ಟೇಟ್ಸ್ ಗೆ ಅನುಮತಿ ಸಿಕ್ಕಿತು. ಬ್ರಿಟನ್ ಜೊತೆ ಬಗ್ಗೆ ಎರಡನೇ Hay-Pauncefote ಒಪ್ಪಂದಕ್ಕೆ ಸಹಿ ಹಾಕಲಾಯಿತು.
* ಭಾರತದ ಚಿತ್ರಕರ್ಮಿ ನಟ, ವಿ ಶಾಂತಾರಾಮ್ ಅವರ ಜನನ.

1906:
ರೋಮಿನ ಸಂತ ಪೀಟರನ ಬೆಸಿಲಿಕಾ ಮೇಲೆ ದಾಳಿ ನಡೆಸಲು ಬಂಡಾಯಗಾರರ ಸಂಚು.
Education
1911: ಭಾರತದಲ್ಲಿ ಉಚಿತ ಪ್ರಾಥಮಿಕ ಶಾಲಾ ಶಿಕ್ಷಣ ವ್ಯವಸ್ಥೆ ಜಾರಿಗೊಂಡಿತು.

1928:
ಮಿಕ್ಕಿ ಮೌಸ್ ಸ್ಟೀಮ್ ಬೋಟ್ ವಿಲ್ಲಿಯಲ್ಲಿ ಪಾದಾರ್ಪಣೆ ಮಾಡಿತು. ಇದು ಡಿಸ್ನಿಯ ಮೂರನೇ ಸರಣಿ ಚಿತ್ರವಾಗಿತ್ತು.

1939:
ಪಿಕ್ಕಾಡಿಲ್ಲಿ ಸರ್ಕಸ್ ನಲ್ಲಿ ಮೂರು ಬಾಂಬ್ ಸ್ಫೋಟ ಮಾಡಿದ ಐರೀಷ್ ರಿಪಬ್ಲಿಕನ್ ಸೈನ್ಯ.

1943:
ಬರ್ಲಿನ್ ಮೇಲೆ ರಾಯಲ್ ಏರ್ ಫೋರ್ಸ್ ನಿಂದ ದಾಳಿ.

1955:
ನವದೆಹಲಿಗೆ ಸೋವಿಯೆಟ್ ರಷ್ಯಾದ ನಾಯಕರಾದ ನಿಕೊಲಾಯಿ ಬಲ್ಗಾನಿನ್ ಹಾಗೂ ನಿಕಿತಾ ಖುರ್ಶೆಚೆವ್ ಆಗಮನ.

1973:
ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಅಧಿಕೃತವಾಗಿ ಘೋಷಿಸಲಾಯಿತು.
Tiger
1983:ಯುರೇನಿಯಂನನ್ನು ಕಚ್ಚಾವಸ್ತುವಾಗಿ ಬಳಸಿ ಅಣ್ವಸ್ತ್ರ ತಯಾರಿಸಲು ಸಿದ್ಧ ಎಂದು ಅರ್ಜೆಂಟೀನಾ ಘೋಷಿಸಿತು.

1984:
ಬರಪೀಡಿತ, ಕ್ಷಾಮದಿಂದ ಬಳಲುತ್ತಿದ್ದ ಇಥಿಯೋಪಿಯಾಗೆ ಅಮೆರಿಕದ ಗೋಧಿ ತಲುಪಿಸಲು ಸೋವಿಯೆಟ್ ಯೂನಿಯನ್ ನೆರವಾಯಿತು.

1993:
ಕಪ್ಪು ಜನಾಂಗಕ್ಕೆ ಮತದಾನದ ಹಕ್ಕು ಸೇರಿದಂತೆ ಅನೇಕ ನಿರ್ಣಯಗಳನ್ನು ದಕ್ಷಿಣ ಆಫ್ರಿಕಾದ ಹೊಸ ಸಂವಿಧಾನದಲ್ಲಿ ಅಳವಡಿಸಲಾಯಿತು. ಅಲ್ಪಸಂಖ್ಯಾತ ಬಿಳಿಯರ ಅಧಿಪತ್ಯಕ್ಕೆ ಅಂತ್ಯ ಹಾಡಲಾಯಿತು.

2002:
ಇರಾಕಿಗೆ ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ತಜ್ಞ ಹಾನ್ಸ್ ಬ್ಲಿಕ್ಸ್ ಆಗಮನ, ಪರಿಶೀಲನೆ.

2003:
ಸಲಿಂಗಗಳ ಮದುವೆ ಅಸಂವಿಧಾನತ್ಮಾಕ ಕ್ರಮ ಎಂದು ಮೆಚಾಚುಸೆಟ್ಸ್ ನ ಸುಪ್ರೀಂ ಜ್ಯುಡಿಷಿಯಲ್ ಕೋರ್ಟ್ ಆದೇಶ, ಮೇ 17, 2004ರಲ್ಲಿ ಸಲಿಂಗಗಳ ಮದುವೆಗೆ ಕಾನೂನು ಮಾನ್ಯತೆ ಲಭಿಸಿತು.
English summary
Today is Tuesday, November 18, 2014. What happened on this day in history? Tiger was officially declared India's national animal and many more events happened.Oneindia takes a look at the past.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X