• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ಇಂದಿರಾ ಕ್ಯಾಂಟೀನ್’ಗೆ ಈರುಳ್ಳಿ-ಬೆಳ್ಳುಳ್ಳಿ ಸಂಕಟ

By Sachhidananda Acharya
|

ಬೆಂಗಳೂರು, ಮಾರ್ಚ್ 31: ಸಿದ್ದರಾಮಯ್ಯ ಸರಕಾರದ ಬಹುನಿರೀಕ್ಷಿತ 'ಇಂದಿರಾ ಕ್ಯಾಂಟೀನ್' ಯೋಜನೆ ವಿಳಂಬದ ಹಾದಿ ಹಿಡಿದಿದೆ.

ಆರಂಭದಲ್ಲಿ ಯೋಜನೆಯನ್ನು ಇಸ್ಕಾನ್ ಸಂಸ್ಥೆಯ ಕೈಗಿಡಲು ಸರಕಾರ ಮುಂದಾಗಿತ್ತು. ಆದರೆ ಇಸ್ಕಾನ್ ಈರುಳ್ಳಿ-ಬೆಳ್ಳುಳ್ಳಿಯನ್ನು ಅಡಿಗೆಗೆ ಬಳಸುವುದಿಲ್ಲ. ಹೀಗಾಗಿ ತಿನಿಸುಗಳು ರುಚಿಯಾಗಿರುವುದಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸರಕಾರ ತನ್ನ ನಿರ್ಧಾರವನ್ನು ಮರು ಪರಿಶೀಲನೆಯಲ್ಲಿಟ್ಟಿದೆ.[ನಮ್ಮ ಕ್ಯಾಂಟೀನ್ ಅಲ್ಲ, ಇಂದಿರಾ ಕ್ಯಾಂಟೀನ್: ಸಿದ್ದರಾಮಯ್ಯ]

ಮೂಲಗಳ ಪ್ರಕಾರ ಇಸ್ಕಾನ್ ಈರುಳ್ಳಿ ಬೆಳ್ಳುಳ್ಳಿಯನ್ನು ಅಡುಗೆಗೆಬಳಸದ ಹಿನ್ನಲೆಯಲ್ಲಿ ಊಟ ರುಚಿಯಾಗಿರುವುದಿಲ್ಲ ಎಂದು ಶಾಸಕರು, ಕಾರ್ಪೊರೇಟರ್ ಗಳು ಹಾಗೂ ಪೌರ ಕಾರ್ಮಿಕರು ದೂರಿದ್ದಾರೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ 'ಇಂದಿರಾ ಕ್ಯಾಂಟೀನ್ ಯೋಜನೆಗೆ ಸರಕಾರ 100 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಹೀಗಾಗಿ ಗುಣಮಟ್ಟದ ರುಚಿಯಾದ ಆಹಾರ ನೀಡಲು ಆದ್ಯತೆ ನೀಡಲಾಗುವುದು,' ಎಂದು ಹೇಳಿದ್ದಾರೆ.[ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ನಮ್ಮ ಕ್ಯಾಂಟೀನ್]

ಈಗಾಗಲೇ ಇಸ್ಕಾನ್ ಗೆ ನೀಡಲು ವಿರೋಧ ವ್ಯಕ್ತವಾಗಿರುವುದರಿಂದ ಬೆಂಗಳೂರು ಹೊಟೇಲ್ ಮಾಲಿಕರ ಸಂಘದೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದೂ ಹೇಳಿದ್ದಾರೆ. ಹೀಗಾಗಿ ಸರಕಾರ ಯಾರಿಗೆ ಈ ಕ್ಯಾಂಟೀನ್ ಗಳ ಉಸ್ತುವಾರಿ ನೀಡುತ್ತೋ ಕಾದು ನೋಡಬೇಕಾಗಿದೆ.

ಬೆಂಗಳೂರಿನ 198 ವಾರ್ಡುಗಳಲ್ಲಿ ಕ್ಯಾಂಟೀನ್ ಆರಂಭಿಸುವುದಾಗಿ 2017-18ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರಕಾರ ಘೋಷಿಸಿತ್ತು. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬಡವರು ಹಾಗೂ ವಯೋವೃದ್ಧರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯ ಆಹಾರ ನೀಡಲು ಈ ಕ್ಯಾಂಟೀನ್ ಆರಂಭಿಸುವುದಾಗಿ ಸರಕಾರ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
After compliant raised against Iskcon for not using onion and garlic in their foods, now the state government is speaking with hoteliers associations for the order of proposed ‘India Canteen’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X