ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್ ವೇನಲ್ಲಿ ವಾಹನ ಚಲಾಯಿಸಿದ್ರೆ ದಂಡ ಮಾತ್ರವಲ್ಲ ಡಿಎಲ್ ಕೂಡ ರದ್ದು

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಒನ್‌ ವೇನಲ್ಲಿ ವಾಹನ ಚಲಾಯಿಸಿದರೆ ದಂಡ ಕಟ್ಟುವುದು ಮಾತ್ರವಲ್ಲ ಡಿಎಲ್ ಕೂಡ ರದ್ದಾಗಲಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಗೆ ಬಿಸಿ ಮುಟ್ಟಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದು, ಈ ನಿಮಯ ಜಾರಿಗೆ ತಂದಿದ್ದಾರೆ.

ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ 42,500 ರೂಪಾಯಿ ದಂಡಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ 42,500 ರೂಪಾಯಿ ದಂಡ

ಒನ್ ವೇನಲ್ಲಿ ಇನ್ಮುಂದೆ ವಾಹನ ಸವಾರರು ಹೋದರೆ ಡ್ರಂಕನ್ ಡ್ರೈವ್ ನಷ್ಟೇ ದಂಡದ ಜೊತೆ ಲೈಸೆನ್ಸ್ ಕೂಡ ರದ್ದು ಮಾಡಲು ಟ್ರಾಫಿಕ್ ಇಲಾಖೆ ನಿರ್ಧಾರ ಕೈಗೊಂಡಿದೆ. ಒನ್‍ವೇಗಳಲ್ಲಿ ವಾಹನ ಓಡಿಸುವುದರಿಂದ ಹೆಚ್ಚಾಗಿ ಅಪಘಾತವಾಗುತ್ತದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

Not Only Fine For Driving One Way But Also The DL Canceled

188 ಸೆಕ್ಷನ್ ಪ್ರಕರಣಗಳಲ್ಲಿ ವಾಹನ ಹಾಗೂ ಚಾಲನಾ ಪರವಾನಗಿ ವಶಕ್ಕೆ ಪಡೆದಾಗ ನ್ಯಾಯಾಲಯದ ದಂಡ ಪಾವತಿಸಿ ಬಳಿಕ ವಾಹನಗಳನ್ನು ಬಿಡುಗಡೆ ಮಾಡಬೇಕಾಗುತ್ತೆ.

ಮೊದಲು ಒನ್ ವೇ ರಸ್ತೆಗಳಲ್ಲಿ ವಾಹನ ಚಲಾಯಿಸಿದರೆ 500 ದಂಡ ವಿಧಿಸಲಾಗುತ್ತಿತ್ತು. ದಂಡ ಅಧಿಕವಾದರೂ ಒನ್ ವೇಗಳಲ್ಲಿ ವಾಹನಗಳ ಸಂಚಾರ ಬಿಟ್ಟಿಲ್ಲ. ಹೀಗಾಗಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಈ ನಿರ್ಧಾರ ಕೈಗೊಂಡಿದ್ದಾರೆ.

ವಾಹನ ಸವಾರರು ನಿಯಮ ಪಾಲಿಸುವಂತೆ ಸೂಚಿಸಿದರೂ ಕಾನೂನು ಉಲ್ಲಂಘನೆ ಮಾಡುವುದು ಮಾತ್ರ ಬಿಟ್ಟಿಲ್ಲ. ಎಡ ಮತ್ತು ಬಲ ಪಥ ಸೂಚನಾ ಮಾರ್ಗ ಬದಲಾಯಿಸಿ ವಾಹನ ಓಡಿಸುವವರ ವಿರುದ್ಧ ಅತಿವೇಗ ಮತ್ತು ಸೆಕ್ಷನ್ 188 ಅಜಾಗೂರಕತೆ ಆರೋಪದಡಿ ಪ್ರಕರಣ ದಾಖಲು ಮಾಡುತ್ತಾರೆ.

English summary
Bengaluru Traffic Police Ready To Not Only Fine For Driving One Way But Also The DL Canceled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X