ಆರ್.ಆರ್.ನಗರದಲ್ಲಿ ಗೆದ್ದದ್ದು ಮುನಿರತ್ನ ಅಲ್ಲ 'ಮನಿ'ರತ್ನ: ಜೆಡಿಎಸ್ ಲೇವಡಿ
ಬೆಂಗಳೂರು, ನ 10: ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯ ಒಟ್ಟು ಏಳು ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರೀ ಲೀಡ್ ನಲ್ಲಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಜೆಡಿಎಸ್ ಇಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದು, ಠೇವಣಿ ಉಳಿಸಿಕೊಳ್ಳುವುದೇ ಕಷ್ಟ ಎನ್ನುವ ಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿದೆ. ಇದುವರೆಗೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿಗೆ ಕೇವಲ 1,572 (ಇವಿಎಂ) ಮತಗಳಷ್ಟೇ ಲಭ್ಯವಾಗಿದೆ.
ಆರ್.ಆರ್.ನಗರ: 3 ಸುತ್ತಿನಲ್ಲಿ ಜೆಡಿಎಸ್ಸಿಗೆ ಭಾರೀ ಹಿನ್ನಡೆ
ಬಿಜೆಪಿ ಅಭ್ಯರ್ಥಿ ಮುನಿರತ್ನ ಏಳನೇ ಸುತ್ತಿನ ಮುಕ್ತಾಯಕ್ಕೆ 39,087 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗಿಂತ 19,315 ಮತಗಳ ಭರ್ಜರಿ ಲೀಡ್ ಅನ್ನು ಪಡೆದಿದ್ದಾರೆ.
ಬಹುತೇಕ ಗೆಲುವಿನ ಹಂತದಲ್ಲಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಬಗ್ಗೆ ಜೆಡಿಎಸ್ ಮುಖಂಡ ಟಿ.ಎ.ಶರವಣ ಲೇವಡಿ ಮಾಡಿದ್ದು, "ರಾಜರಾಜೇಶ್ವರಿ ನಗರದಲ್ಲಿ ಗೆದ್ದದ್ದು ಮುನಿರತ್ನ ಅಲ್ಲ 'ಮನಿ'ರತ್ನ" ಎಂದು ಹೇಳಿದರು.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಕ್ಷಣಕ್ಷಣದ ಮಾಹಿತಿ
"ನಾವು ಅಭ್ಯರ್ಥಿಯನ್ನು ಅಂತಿಮಗೊಳಿಸುವುದನ್ನು ತಡ ಮಾಡಿದೆವು. ಇಲ್ಲಿ ಗೆಲುವು ನಮಗೆ ಕಷ್ಟ ಎಂದು ಮುಂಚೆನೇ ನಮ್ಮ ನಾಯಕ ಕುಮಾರಸ್ವಾಮಿ ಹೇಳಿದ್ದರು. ಇಲ್ಲಿ ನಡೆದದ್ದು ದುಡ್ಡಿನ ಚುನಾವಣೆ"ಎಂದು ಶರವಣ ಹೇಳಿದರು.
ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ
"ನಾನೂ ಕೂಡಾ ಪ್ರತೀ ವಾರ್ಡಿನಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಮುನಿರತ್ನ ಗೆದ್ದರೆ, ಸಚಿವರನ್ನಾಗಿ ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿದ್ದರು. ಅದು ಇಲ್ಲಿ ವರ್ಕೌಟ್ ಆಗಿದೆ"ಎಂದು ಶರವಣ ಅಭಿಪ್ರಾಯ ವ್ಯಕ್ತ ಪಡಿಸಿದರು.