ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಫೇಲ್ ಯೋಜನೆ ಬಗ್ಗೆ ಯಾವ ಆಸಕ್ತಿಯೂ ಇಲ್ಲ: ಎಚ್‌ಎಎಲ್

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಸದ್ಯದ ಪರಿಸ್ಥಿತಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್‌ಎಎಲ್) ರಫೇಲ್ ಯುದ್ಧ ವಿಮಾನ ತಯಾರಿಕೆಯ ಯೋಜನೆಯ ಕುರಿತು ಯಾವುದೇ ಆಸಕ್ತಿ ಹೊಂದುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ರಫೇಲ್‌ನಲ್ಲಿ ಹಗರಣವೇ ಆಗಿಲ್ಲ: ಡಸಾಲ್ಟ್ ಸಿಇಒ ಸ್ಪಷ್ಟನೆ ರಫೇಲ್‌ನಲ್ಲಿ ಹಗರಣವೇ ಆಗಿಲ್ಲ: ಡಸಾಲ್ಟ್ ಸಿಇಒ ಸ್ಪಷ್ಟನೆ

ಪ್ರಸ್ತುತ 36 ಯುದ್ಧ ವಿಮಾನಗಳನ್ನು ನೇರವಾಗಿ ಖರೀದಿಸಲಾಗುತ್ತಿದೆಯೇ ಹೊರತು ಅದು ಉತ್ಪಾದಿಸುತ್ತಿರುವಂತೆ ಅಲ್ಲ. ಈ ಕಾರಣದಿಂದ ನಮಗೆ ಅದರ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ. ಅದು ತಯಾರಿಕೆಯಾದರೆ ನಾವು ಆಸಕ್ತಿ ಹೊಂದುತ್ತೇವೆ. ಅದರ ಆಫ್‌ಸೆಟ್ಸ್‌ ತಯಾರಿಕೆ ಅಥವಾ ನೇರ ಖರೀದಿ ವಿಚಾರದಲ್ಲಿ ನಮಗೆ ಆಸಕ್ತಿ ಇಲ್ಲ ಎಂದು ಎಚ್‌ಎಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಹೇಳಿದ್ದಾರೆ.

ರಫೇಲ್ ಡೀಲ್ ಬಗ್ಗೆ ಅಸಮ್ಮತಿ ಇರಲಿಲ್ಲ : ಏರ್ ಮಾರ್ಷಲ್ ಭಡೌರಿಯಾರಫೇಲ್ ಡೀಲ್ ಬಗ್ಗೆ ಅಸಮ್ಮತಿ ಇರಲಿಲ್ಲ : ಏರ್ ಮಾರ್ಷಲ್ ಭಡೌರಿಯಾ

ಸುಖೋಯ್ ಹೊಸ ಮಾದರಿಯ (ಸುಖೋಯ್-30) ಯುದ್ಧ ವಿಮಾನಗಳ ತಯಾರಿಕೆಗೆ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದು ಭವಿಷ್ಯದಲ್ಲಿ ಅದು ದೊರಕುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

not interested in Rafale project anymore HAL chairman R Madhavan

ಸತ್ಯಮೇವ ಜಯತೆ, ಸತ್ಯ ಯಾವತ್ತೂ ಗೆಲ್ಲತ್ತೆ : ಅರುಣ್ ಜೇಟ್ಲಿಸತ್ಯಮೇವ ಜಯತೆ, ಸತ್ಯ ಯಾವತ್ತೂ ಗೆಲ್ಲತ್ತೆ : ಅರುಣ್ ಜೇಟ್ಲಿ

ಎಚ್ಎಎಲ್‌ ಕುರಿತಾದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಮಾಧವನ್, 'ಎಚ್‌ಎಎಲ್‌ನಲ್ಲಿ ಸಾಮರ್ಥ್ಯದ ಕೊರತೆ ಇಲ್ಲ. ಯಾರು ಬೇಕಾದರೂ ಹೀಗೆ ಹೇಳಿಕೆ ನೀಡಬಹುದು' ಎಂದಿದ್ದಾರೆ.

English summary
HAL Chirman and MD R Madhavan said that, company is will not be interested in the Rafale project anymore in the current phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X