ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸ್ಕೌಂಟ್ ಸೇಲ್, ಉತ್ಸವ ಬೇಡ; ಅಂಗಡಿಗಳಿಗೆ ಬಿಬಿಎಂಪಿ ಸೂಚನೆ

|
Google Oneindia Kannada News

ಬೆಂಗಳೂರು, ಜೂನ್ 15; ಬೆಂಗಳೂರು ನಗರದಲ್ಲಿ ಲಾಕ್‌ಡೌನ್ ನಿಯಮಗಳಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಲಾಗಿದೆ. ಆದರೆ ಎಲ್ಲಾ ಅಂಗಡಿಗಳನ್ನು ತೆರೆಯಲು ಇನ್ನೂ ಸಹ ಅನುಮತಿಯನ್ನು ನೀಡಿಲ್ಲ. ಜೂನ್ 21ರ ಬಳಿಕ ನಗರದಲ್ಲಿ ಅನ್‌ಲಾಕ್ ಜಾರಿಗೊಳ್ಳುವ ಸಾಧ್ಯತೆ ಇದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಅಂಗಡಿಗಳಿಗೆ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಅನ್‌ಲಾಕ್ ಬಳಿಕ ಹೆಚ್ಚಿನ ಜನದಟ್ಟಣೆ ಸೇರದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದೆ.

ಕೋವಿಡ್ ರ‍್ಯಾಂಡಮ್ ಪರೀಕ್ಷೆ ನಿರಾಕರಣೆ: ಬಿಬಿಎಂಪಿ ಅಧಿಕಾರಿಗಳಿಂದ ಯುವಕನಿಗೆ ಥಳಿತಕೋವಿಡ್ ರ‍್ಯಾಂಡಮ್ ಪರೀಕ್ಷೆ ನಿರಾಕರಣೆ: ಬಿಬಿಎಂಪಿ ಅಧಿಕಾರಿಗಳಿಂದ ಯುವಕನಿಗೆ ಥಳಿತ

ವಿವಿಧ ಆಫರ್ ನೀಡುವ ಮೂಲಕ, ಉತ್ಸವಗಳನ್ನು ಆಯೋಜನೆ ಮಾಡುವ ಮೂಲಕ ಹೆಚ್ಚು ಜನರು ಸೇರುವಂತೆ ಮಾಡಬಾರದು ಎಂದು ಅಂಗಡಿಗಳಿಗೆ ಸೂಚನೆ ಕೊಡಲಾಗಿದೆ. ಈ ಮೂಲಕ ಜನಸಂದಣಿ ಸೇರುವುದಕ್ಕೆ ಕಡಿವಾಣ ಹಾಕಲಾಗಿದೆ.

 ರಾಜಧಾನಿ ಬೆಂಗಳೂರು ಅನ್ ಲಾಕ್ -1: ಕಾದಿದೆಯಾ ಮತ್ತದೇ ಬಹುದೊಡ್ಡ ಆಪತ್ತು? ರಾಜಧಾನಿ ಬೆಂಗಳೂರು ಅನ್ ಲಾಕ್ -1: ಕಾದಿದೆಯಾ ಮತ್ತದೇ ಬಹುದೊಡ್ಡ ಆಪತ್ತು?

Not Announce Discounted Sale Offers BBMP Directs Stalls

ಟೋಕನ್ ಸಿಸ್ಟಮ್ ಅಳವಡಿಕೆ ಮಾಡಿಕೊಳ್ಳಿ. ಗ್ರಾಹಕರು ನೇರವಾಗಿ ವಸ್ತುಗಳನ್ನು ಮುಟ್ಟುವ ಬದಲು ಅಂಗಡಿ ಪ್ರತಿನಿಧಿ ಅದನ್ನು ಜನರಿಗೆ ತೋರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂಗಡಿಯಲ್ಲಿ ಜನದಟ್ಟಣೆ ಸೇರಬಾರದು ಎಂದು ತಿಳಿಸಲಾಗಿದೆ.

ಖಾಸಗಿ ಆಸ್ಪತ್ರೆಗಳ ರೋಗಿ ಮತ್ತು ಚಿಕಿತ್ಸೆ ವೆಚ್ಚ ಮಾಹಿತಿ ಕಲೆ ಹಾಕಲು ಬರ್ತಿದೆ ಬಿಬಿಎಂಪಿ! ಖಾಸಗಿ ಆಸ್ಪತ್ರೆಗಳ ರೋಗಿ ಮತ್ತು ಚಿಕಿತ್ಸೆ ವೆಚ್ಚ ಮಾಹಿತಿ ಕಲೆ ಹಾಕಲು ಬರ್ತಿದೆ ಬಿಬಿಎಂಪಿ!

ಜೂನ್ 14ರ ಸೋಮವಾರದಿಂದಲೇ ನಗರದಲ್ಲಿ ಮುಂಜಾನೆಯ ವಾಕಿಂಗ್‌ಗಾಗಿ ಪಾರ್ಕ್‌ಗಳನ್ನು ತೆರೆಯಲಾಗಿದೆ. ಜಿಮ್‌ಗಳನ್ನು ತೆರೆಯಲು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಮಕ್ಕಳು ಗುಂಪಾಗಿ ಆಡವಾಡುವುದನ್ನು ತಡೆಯುವಂತೆ ಮನವಿ ಮಾಡಲಾಗಿದೆ.

ಮಕ್ಕಳು ಗುಂಪಾಗಿ ಆಟವಾಡದಂತೆ ಎಚ್ಚರ ವಹಿಸಬೇಕು ಎಂದು ಅಪಾರ್ಟ್‌ಮೆಂಟ್‌ ಸಂಘಗಳಿಗೆ ನಿರ್ದೇಶನ ನೀಡಲಾಗಿದೆ. ಹುಟ್ಟು ಹಬ್ಬ ಸೇರಿದಂತೆ ಹೆಚ್ಚು ಜನ ಸೇರುವ ಕಾರ್ಯಕ್ರಮ ಆಯೋಜನೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಯಾವುದೇ ತರಗತಿಗಳು ಇಲ್ಲದಿದ್ದರೆ ಹಾಸ್ಟೆಲ್, ಪಿಜಿಗಳನ್ನು ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ವಾಸ್ತವ್ಯ ಹೂಡುವುದು ಅನಿವಾರ್ಯವಾದರೆ ಕೋವಿಡ್ ಹರಡುವಿಕೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಬೆಂಗಳೂರು ನಗರದಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಸೋಮವಾರದ ವರದಿಯಂತೆ ನಗರದಲ್ಲಿ 1470 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 85044.

ಮುಂಜಾನೆ ಪಾರ್ಕ್‌ಗಳಲ್ಲಿ ವಾಕಿಂಗ್‌ಗೆ ಅನುಮತಿ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 2 ಗಂಟೆಯ ತನಕ ಅವಕಾಶ ನೀಡಲಾಗಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ.

Recommended Video

ಜೂನ್ 21ರಿಂದ unlock ಪ್ರಕ್ರಿಯೆ ಶುರು ! | Oneindia Kannada

ಕೈಗಾರಿಕೆಗಳು, ಗಾರ್ಮೆಂಟ್ಸ್, ಸರ್ಕಾರಿ ಕಚೇರಿಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಣೆ ಮಾಡಲು ಅವಕಾಶ ಕೊಡಲಾಗಿದೆ. ನಗರದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಹಾಗೂ ನಮ್ಮ ಮೆಟ್ರೋ ಸಂಚಾರ ಇನ್ನೂ ಆರಂಭವಾಗಿಲ್ಲ.

English summary
Bruhat Bengaluru Mahanagara Palike (BBMP) directed retailers not to announce discounted sale offers that might attract crowds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X