ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೇಟಿಂಗ್ ಆಪ್ ಬಳಸಿ ಜೀವನ ಸಂಗಾತಿ ಆಯ್ಕೆ ಬೆಂಗಳೂರಿಗರು ಮುಂದೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಬೆಂಗಳೂರಿನ ಶೇ. 69ರಷ್ಟು ಜನರು ಜೀವನ ಸಂಗಾತಿಯ ಆಯ್ಕೆಗೆ ಡೇಟಿಂಗ್ ಆ್ಯಪ್ ಗಳನ್ನು ಅವಲಂಬಿಸಿದ್ದಾರೆ- ನೋರ್ಟನ್ ಲೈಪ್ ಸ್ಟಾಕ್ ಇಂಡಿಯಾ ಡಿಜಿಟಲ್ ವೆಲ್ ನೆಸ್ ವರದಿಯಿಂದ ಬಹಿರಂಗವಾಗಿದೆ.

ಬೆಂಗಳೂರಿನ ಶೇ. 68ರಷ್ಟು ಜನರು ಆನ್ ಲೈನ್ ಮೂಲಕ ಭೇಟಿಯಾದ ಜನರು ವಿಶ್ವಾಸಾರ್ಹರು ಎಂದು ನಂಬುತ್ತಾರೆ. ನಗರದ ಶೇ. 69ರಷ್ಟು ಜನರು ಗಂಭೀರ ಸಂಬಂಧಗಳಿಗೂ ಡೇಟಿಂಗ್ ಆ್ಯಪ್ ಗಳನ್ನು ಅವಲಂಬಿಸಿದ್ದಾರಂತೆ.

ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್ ಗಳನ್ನು ಬಳಸುವುದರಲ್ಲಿ ಕೋಲ್ಕತಾ ಪ್ರಥಮ ಸ್ಥಾನದಲ್ಲಿದೆ. ಈ ನಗರದ ಶೇ. 83ರಷ್ಟು ಜನರು ಡೇಟಿಂಗ್ ಆ್ಯಪ್ ಗಳನ್ನು ಬಳಸುತ್ತಿದ್ದಾರೆ. ನಂತರ ಬೆಂಗಳೂರು ಹಾಗೂ ಭುವನೇಶ್ವರದ ಶೇ. 80ರಷ್ಟು ಜನರು ಸಂಬಂಧಗಳನ್ನು ಅರಸಲು ಈ ಆ್ಯಪ್ ಗಳ ಮೊರೆ ಹೋಗಿದ್ದಾರಂತೆ.

ಗ್ರಾಹಕರ ಸೈಬರ್ ಭದ್ರತೆ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ನೋರ್ಟನ್ ಲೈಫ್ ಲಾಕ್ (ನ್ಯಾಸ್ ಡ್ಯಾಕ್) ಕಂಪನಿ ಬಿಡುಗಡೆಗೊಳಿಸಿರುವ ಇಂಡಿಯಾ ಡಿಜಿಟಲ್ ವೆಲ್ ನೆಸ್ ವರದಿಯಲ್ಲಿ ಇದು ಬಹಿರಂಗಗೊಂಡಿದೆ.

ಈ ಸರ್ವೆಯಲ್ಲಿ ತಿಳಿದುಬಂದ ವಿಷಯವೆಂದರೆ, ಶೇ. 40ರಷ್ಟು ಜನರು ಡೇಟಿಂಗ್ ಆ್ಯಪ್ ನಲ್ಲಿ ಪರಿಚಿತನಾಗುವ ವ್ಯಕ್ತಿಯನ್ನು ವೈಯಕ್ತಿಕವಾಗಿ ಭೇಟಿ ಮಾಡದೆಯೇ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಆಸಕ್ತಿಕರ ವಿಷಯವೆಂದರೆ, ಶೇ. 66ರಷ್ಟು ಮಹಿಳೆಯರು ಮತ್ತು ಜೆನ್ ಎಕ್ಸ್ ಪ್ರತಿಸ್ಪಂದಕರು ಶೇ. 63ರಷ್ಟು ಜನರು ಆನ್ ಲೈನ್ ಮೂಲಕ ಭೇಟಿ ಮಾಡುವ ಜನರು ವಿಶ್ವಾಸಾರ್ಹವಾಗಿದ್ದಾರೆ ಎಂದು ನಂಬಿದ್ದಾರೆ.

ಗಂಭೀರ ಸಂಬಂಧಗಳಿಗಾಗಿಯೇ ಆನ್ ಲೈನ್ ಡೇಟಿಂಗ್ ಆ್ಯಪ್

ಗಂಭೀರ ಸಂಬಂಧಗಳಿಗಾಗಿಯೇ ಆನ್ ಲೈನ್ ಡೇಟಿಂಗ್ ಆ್ಯಪ್

ಭಾರತೀಯ ಪುರುಷ ಮತ್ತು ಮಹಿಳೆಯರು ಆನ್ ಲೈನ್ ಡೇಟಿಂಗ್ ಪದ್ಧತಿಯತ್ತ ಮುಕ್ತ ಮನಸ್ಸು ಹೊಂದಿದ್ದಾರೆ. ಪ್ರತಿ ಹತ್ತು ಜನರಲ್ಲಿ ನಾಲ್ವರು ಗಂಭೀರ ಸಂಬಂಧಗಳಿಗಾಗಿಯೇ ಆನ್ ಲೈನ್ ಡೇಟಿಂಗ್ ಆ್ಯಪ್ ಗಳನ್ನು ಅವಲಂಬಿಸಿದ್ದಾರೆ. ಮೆಟ್ರೋ ನಗರಗಳಲ್ಲಿ ಶೇ. 55ರಷ್ಟು ಜನರು ಗಂಬೀರ ಸಂಬಂಧಕ್ಕಾಗಿ ಅರಸುತ್ತಿದ್ದರೆ, ಎರಡನೇ ಹಂತರದ ನಗರಗಳಲ್ಲಿ ಶೇ. 68 ಹಾಗೂ ಶೇ. 21ರಷ್ಟು ಜನರು ಸಾಮಾನ್ಯ ಡೇಟಿಂಗ್ ಮತ್ತು ದೈಹಿಕ ಆಪ್ತತೆಗಾಗಿ ಆ್ಯಪ್ ಅನ್ನು ಅವಲಂಬಿಸಿದ್ದಾರೆ.

ಮುಂದುವರಿದು, ಶೇ. 35ರಷ್ಟು ಜೆನ್ ಝೆಡ್ ಜನರು ಡೇಟಿಂಗ್ ಆ್ಯಪ್ ಅನ್ನು ಸಮಯಸಾಧನೆಗೆ ಮತ್ತು ಶೇ. 63ರಷ್ಟು ಜೆನ್ ಝೆಡ್ ಜನರು ಗಂಭೀರ ಸಂಬಂಧಗಳಿಗೆ, ಶೇ.72ರಷ್ಟು ಜನರು ಕೇವಲ ಸ್ನೇಹ ಅಥವಾ ಸಾಂಗತ್ಯಕ್ಕಾಗಿ ಡೇಟಿಂಗ್ ಆ್ಯಪ್ ಬಳಸುತ್ತಿದ್ದಾರಂತೆ.

ಆದರೆ, ಶೇ. 49ರಷ್ಟು ಜನರು ತಮ್ಮ ಜೀವನಶೈಲಿಗೆ ಹೊಂದಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಡೇಟಿಂಗ್ ಆ್ಯಪ್ ಬಳಸುವುದಿಲ್ಲವಂತೆ. ಶೇ. 27ರಷ್ಟು ಜನರು ಇದರ ಬಗ್ಗೆ ನಕಾರಾತ್ಮಕ ಮಾಹಿತಿಯನ್ನು ನಂಬಿ ದೂರವುಳಿದಿದ್ದಾರಂತೆ.

ಆನ್ ಲೈನ್ ಡೇಟಿಂಗ್ ಬಗ್ಗೆ ಮುಕ್ತ ಮನಸ್ಸು

ಆನ್ ಲೈನ್ ಡೇಟಿಂಗ್ ಬಗ್ಗೆ ಮುಕ್ತ ಮನಸ್ಸು

ನೋರ್ಟನ್ ಲೈಫ್ ಲಾಕ್, ಇಂಡಿಯಾದ ನಿರ್ದೇಶದಕ ರಿತೇಶ್ ಚೋಪ್ರಾ, "ಸ್ಮಾರ್ಟ್ ಫೋನ್ ಗಳು ಮತ್ತು ದತ್ತಾಂಶಗಳ ಲಭ್ಯತೆಯ ಹೆಚ್ಚಳ ನಮಗೆ ನಮ್ಮ ನಿಜ ಜೀವನದ ಹಲವು ಕೆಲಸಗಳನ್ನು ಆನ್ ಲೈನ್ ಮಾಡಲು ಸಾಧ್ಯವಾಗಿದೆ. ಭಾರತೀಯ ಪುರುಷರು ಮತ್ತು ಮಹಿಳೆಯರು ಆನ್ ಲೈನ್ ಡೇಟಿಂಗ್ ಬಗ್ಗೆ ಮುಕ್ತ ಮನಸ್ಸು ಹೊಂದುತ್ತಿದ್ದಾರೆ'' ಎಂದರು.

"ಆದರೆ, ಗ್ರಾಹಕರು ತಮ್ಮ ಡಿಜಿಟಲ್ ಪಯಣದ ಕುರಿತು ಎಚ್ಚರಿಕೆಯಿಂದಿರುವುದು ಅತಿ ಅಗತ್ಯ. ನಕಲಿ ಗುರುತುಗಳನ್ನು ಸೃಷ್ಟಿಸಿದ ಸೈಬರ್ ಕ್ರಿಮಿನಲ್ ಗಳು ಜನರನ್ನು ಸುಲಭವಾಗಿ ವಂಚಿಸಲು, ಆನ್ ಲೈನ್ ವೇದಿಕೆಯಲ್ಲಿ ಹಂಚಿಕೊಂಡಿರುವ ವೈಯಕ್ತಿಕ ಮಾಹಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಕುರಿತು ನಾವು ಗ್ರಾಹಕರಿಗೆ ಅರಿವು ಮೂಡಿಸುತ್ತಿದ್ದೇವೆ'' ಎಂದರು.

ಜೊತೆಯಾಗಿ ಸಾಗುವ ಮನರಂಜನೆ ಮತ್ತು ಆತಂಕ

ಜೊತೆಯಾಗಿ ಸಾಗುವ ಮನರಂಜನೆ ಮತ್ತು ಆತಂಕ

ಸ್ಮಾರ್ಟ್ ಫೋನ್ ಗಳ ಮೊಬೈಲ್ ದತ್ತಾಂಶದ ಲಭ್ಯತೆ ಮತ್ತು ಕೈಗೆಟುಕುವಿಕೆಯಿಂದಾಗಿ, ಎರಡನೇ ಹಂತದ ನಗರಗಳಲ್ಲಿ ಅವು ಮನರಂಜನೆಯ ಪ್ರಾಥಮಿಕ ಮೂಲಗಳಾಗಿವೆ. ಈ ನಗರಗಳಲ್ಲಿ ಸುಮಾರು ಶೇ 91 ರಷ್ಟು ಜನರು ಸ್ಮಾಟ್ರ್ಫೋನ್ಗಳನ್ನು ಟಿವಿ, ಕ್ಯಾಮೆರಾ (ಶೇ,87), ಅಲಾರಾಂ ಗಡಿಯಾರ (ಶೇ.80) ಮತ್ತು ಸಂಗೀತ ಸಾಧನ (ಶೇ. 72) ವನ್ನಾಗಿ ಬಳಸುತ್ತಿದ್ದಾರೆ. ಸ್ಮಾರ್ಟ್ ಫೋನ್ ಗಳಿಂದ ವಂಚಿತರಾಗುವ ಪುರಷರಿಗಿಂತ ಮಹಿಳೆಯರು ಹೆಚ್ಚು ಆತಂಕವನ್ನು ಪ್ರದರ್ಶಿಸಿದ್ದಾರೆ, ಶೇ,73 ಮಹಿಳಾ ಪ್ರತಿಸ್ಪಂದಕರು ಮತ್ತು ಶೇ. 64 ಪುರುಷ ಪ್ರತಿಸ್ಪಂದಕರು ಹೊರಹೋಗುವಾಗ ತಮ್ಮ ಫೋನ್ ಅನ್ನು ಮರೆತರೆ ಆತಂಕಕ್ಕೆ ಒಳಗಾಗುವುದಾಗಿ ಹೇಳಿಕೊಂಡರೆ, ಶೇ.72% ಮಹಿಳಾ ಪ್ರತಿಸ್ಪಂದಕರು ಮತ್ತು ಶೇ. 60ರಷ್ಟು ಪುರುಷರು ತಮಗೆ ಸ್ಮಾರ್ಟ್ ಫೋನ್ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆ

ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆ

ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯ ವಿಷಯಕ್ಕೆ ಬಂದರೆ, ಯುವಜನತೆ (ಶೇ.94) ಮತ್ತು ಜೆನ್ ಎಕ್ಸ್ (ಶೇ. 90) ಗಿಂತ ಜೆನ್ ಝೆಡ್ (ಶೇ.95) ಜನರು ತಮ್ಮ ಫೋನ್ ನಲ್ಲಿ ಗೌಪ್ಯ ಮಾಹಿತಿಯನ್ನು ಪಡೆಯುವ ಅನುಮತಿ ನೀಡುವಲ್ಲಿ ಹೆಚ್ಚು ಮುಂದಿದ್ದಾರೆ. ಮಹಿಳಾಪ್ರತಿಸ್ಪಂದಕರು (ಶೇ.84) ಪುರುಷರ ಪ್ರತಿಸ್ಪಂದಕರಿಗಿಂತ (ಶೇ.74) ಸೈಬರ್ ಭದ್ರತಾ ಬೆದರಿಕೆಗಳ ಬಗ್ಗೆ ಹೆಚ್ಚು ಮಾಹಿತಿ ಹೊಂದಿದ್ದು, ಅವರ ಸ್ಮಾಟ್ರ್ಫೋನ್ನಲ್ಲಿ ಭದ್ರತಾ ಸಾಫ್ಟ್ವೇರ್ ಅಳವಡಿಸಿಕೊಂಡಿದ್ದಾರಂತೆ. ಸುಮಾರು ಶೇ.94ರಷ್ಟು ಮಹಿಳಾ ಪ್ರತಿಸ್ಪಂದಕರು ಫೋನ್ ನಲ್ಲಿ ಗೌಪ್ಯತೆಯ ಅನುಮತಿಗಳನ್ನು ಸೆಟ್ ಮಾಡಿಕೊಳ್ಳುವ ವಿಧಾನವನ್ನು ಅರಿತಿದ್ದಾರೆ. ಆದರೆ, ಶೇ. 50ರಷ್ಟು ಮಹಿಳಾ ಪ್ರತಿಸ್ಪಂದಕರು ತಮ್ಮ ಎಲ್ಲಾ ಪಾಸ್ವರ್ಡ್ ಗಳನ್ನು ಸೇವ್ ಮಾಡಿಕೊಳ್ಳಲು ತಮ್ಮ ಬ್ರೌಸರ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಇದರಲ್ಲಿ ಮೆಟ್ರೋ ನಗರಗಳಲ್ಲಿ ಶೇ.47, ಒಂದನೇ ಹಂತದ ನಗರಗಳಲ್ಲಿ ಶೇ.39 ಹಾಗೂ ಎರಡನೇ ಹಂತದ ನಗರಗಳಲ್ಲಿ ಶೇ. 34ರಷ್ಟು ಜನರಿದ್ದಾರೆ.

English summary
According to NortonLifeLock Inc.’s “Digital Wellness” report, a survey of over 1,500 city-based Indian adults revealed the increased popularity of online dating apps among Bengalureans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X