ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕರ್ನಾಟಕ ನೆರೆ ಪರಿಹಾರಕ್ಕೆ ಆಗ್ರಹಿಸಿ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 3: ಉತ್ತರ ಕರ್ನಾಟಕ ನೆರೆ ಪರಿಹಾರಕ್ಕೆ ಆಗ್ರಹಿಸಿ ಬೆಂಗಳೂರಲ್ಲಿ ಇಂದು(ಅಕ್ಟೋಬರ್3) ಬೃಹತ್ ಪ್ರತಿಭಟನೆ ನಡೆಯಲಿದೆ.

ನೆರೆ ಪರಿಹಾರ ನೀಡದ ಮೋದಿ ವಿರುದ್ಧ ಬಿಜೆಪಿ ಶಾಸಕ ವಾಗ್ದಾಳಿನೆರೆ ಪರಿಹಾರ ನೀಡದ ಮೋದಿ ವಿರುದ್ಧ ಬಿಜೆಪಿ ಶಾಸಕ ವಾಗ್ದಾಳಿ

ಪ್ರತಿಭಟನೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ, ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು 37 ಉತ್ತರ ಕರ್ನಾಟಕ ಸಂಘ ಸಂಸ್ಥೆಗಳು ಪರಿಹಾರ ಕೊಡದ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಬೀದಿಗಿಳಿಯಲಿದೆ.

 ರಾಮಮಂದಿರ ಗ್ರೌಂಡ್‌ನಿಂದ ಮೆರವಣಿಗೆ

ರಾಮಮಂದಿರ ಗ್ರೌಂಡ್‌ನಿಂದ ಮೆರವಣಿಗೆ

ರಾಮ ಮಂದಿರ ಗ್ರೌಂಡ್‍ನಲ್ಲಿ ಇಂದು ಶಂಕರ್ ಬಿದರಿ ಬೃಹತ್ ಮೆರವಣಿಗೆ ಚಾಲನೆ ಕೊಡಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ರಾಮ ಮಂದಿರದಿಂದ ಫ್ರೀಡಂ ಪಾರ್ಕ್ ನವರೆಗೆ ಮೆರವಣಿಗೆ ನಡೆಸಲಿದ್ದಾರೆ. ನಂತರ ಸಿಎಂ ಯಡಿಯೂರಪ್ಪ ಅವರಿಗೆ ಹಾಗೂ ರಾಜ್ಯಪಾಲರಿಗೆ ಪ್ರವಾಹ ಪರಿಹಾರ ನೀಡಿ ಎಂದು ಮನವಿ ಪತ್ರವನ್ನು ನೀಡಲಿದ್ದಾರೆ.

 ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ

ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ

ರಾಜಧಾನಿಯ ಬಹುತೇಕ ಕಡೆ ಟ್ರಾಫಿಕ್ ಜಾಮ್ ಆಗಲಿದೆ. ರಾಜಾಜಿನಗರ ರಾಮಮಂದಿರದಲ್ಲಿ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಆರಂಭವಾಗಿ ಭಾಷಂ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಮುಂದೆ ಸಾಗಲಿದೆ. ತದನಂತರ ರ‍್ಯಾಲಿ ಸುಜಾತ ಥಿಯೇಟರ್ ಮೂಲಕ ಸಾಗಿ, ಒಕುಳಿಪುರಂ, ಶೇಷಾದ್ರಿಪುರಂ, ಕೆಜಿರೋಡ್ ಮೂಲಕ ಸ್ವಾತಂತ್ರ್ಯ ಉದ್ಯಾನ ತಲುಪಲಿದೆ. ಹೀಗಾಗಿ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸಾಗುವ ಕಾರಣಕ್ಕೆ ವಾಹನ ಸಂಚಾರಕ್ಕೆ ಅಡ್ಡಿಯಾಗಲಿದ್ದು, ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಬಹುದು ಎನ್ನಲಾಗಿದೆ.

ಟೌನ್ ಹಾಲ್ ಬಳಿ ನೆರೆ ಪರಿಹಾರಕ್ಕಾಗಿ ನಡೆದ ಶಾಂತಿಯುತ ಪ್ರತಿಭಟನೆಟೌನ್ ಹಾಲ್ ಬಳಿ ನೆರೆ ಪರಿಹಾರಕ್ಕಾಗಿ ನಡೆದ ಶಾಂತಿಯುತ ಪ್ರತಿಭಟನೆ

 ಬಿಜೆಪಿ ಸಂಸದರಿದ್ದ ದೋಣಿ ಮುಳುಗಡೆ

ಬಿಜೆಪಿ ಸಂಸದರಿದ್ದ ದೋಣಿ ಮುಳುಗಡೆ

ಪಾಟಲಿಪುತ್ರದ ಬಿಜೆಪಿ ಸಂಸದ ರಾಮ್ ಕೃಪಾಳ್ ಯಾದವ್ ಅವರು ಬಿಹಾರ ರಾಜಧಾನಿ ಪಾಟ್ನಾ ಬಳಿಯ ಮಸೌರ್ಹಿ ಎಂಬಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರಿದ್ದ ದೋಣಿ ಮುಳುಗಿತ್ತು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಹಾರದಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದ ಸ್ಥಿತಿಗತಿಯನ್ನು ಪರಿಶೀಲಿಸಲು ತೆರಳಿದ್ದ ಬಜೆಪಿ ಸಂಸದರೊಬ್ಬರ ದೋಣಿಯೇ ಮುಳುಗಿದ ಘಟನೆ ಬುಧವಾರ ನಡೆದಿದೆ.

 ಎರಡು ದಿನದಲ್ಲಿ ನೆರೆ ಪರಿಹಾರ ಬರುತ್ತೆ ಎಂದಿದ್ದ ಸಿಎಂ

ಎರಡು ದಿನದಲ್ಲಿ ನೆರೆ ಪರಿಹಾರ ಬರುತ್ತೆ ಎಂದಿದ್ದ ಸಿಎಂ

ಕೇಂದ್ರವು ಇನ್ನೆರೆಡು ದಿನಗಳಲ್ಲಿ ನೆರೆ ಪರಿಹಾರ ನೀಡುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಆ ಎರಡು ದಿನ ಕಳೆದರೂ ಪರಿಹಾರದ ಮಾತೇ ಇಲ್ಲ. ಹೀಗಾಗಿ ಉತ್ತರ ಕರ್ನಾಟಕದ ಜನರು ಬೆಂಗಳೂರಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ನೆರೆ ಪರಿಹಾರ ನೀಡುವ ಕುರಿತು ಮನವಿ ಸಲ್ಲಿಸಲಿದ್ದಾರೆ.

English summary
North Karnataka People Hold Protest Against Central Government For Flood Relief Fund for Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X