ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲಿಕಾನ್ ಸಿಟಿ ಬೆಂಗಳೂರು ಪುರುಷರಿಗೂ ಸೇಫ್ ಅಲ್ಲ

By Madhusoodhan
|
Google Oneindia Kannada News

ಬೆಂಗಳೂರು, ಜೂನ್, 30: ಸಿಲಿಕಾನ್ ಸಿಟಿ ಬೆಂಗಳೂರು ಪುರುಷರಿಗೂ ಸೇಫ್ ಅಲ್ಲ. ಮಹಿಳೆ ಮತ್ತು ಮಕ್ಕಳ ಮೇಲೆ ಎರಗಿ ತೃಷೆ ತೀರಿಸಿಕೊಳ್ಳುತ್ತಿದ್ದ ಕಾಮಾಂಧರ ಕಣ್ಣು ಇದೀಗ ಪುರುಷರ ಮೇಲೂ ಬಿದ್ದಿದೆ.

ಬಾಲಕಿ ಮೇಲೆ ಅತ್ಯಾಚಾರ, ಯುವತಿ ಮೇಲೆ ಅತ್ಯಾಚಾರ, ಒಂಟಿ ಮಹಿಳೆ ಮೇಲೆ ಅತ್ಯಾಚಾರದಂಥ ಕೆಟ್ಟ ತಲೆಬರಹಗಳ ಸಾಲಿಗೆ "ಪುರುಷನ ಮೇಲೆ ಅತ್ಯಾಚಾರ" ಎಂಬುದನ್ನು ಸೇರಿಸಿಕೊಳ್ಳಬಹುದು.[ಒಪ್ಪಿಗೆಯ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ]

rape

ಉಪ್ಪಾರ ಪೇಟೆಯ ಸುಲಭ ಶೌಚಾಲಯದಲ್ಲಿ ಪುರುಷನೊಬ್ಬನ ಮೇಲೆ ಇನ್ನೊಬ್ಬ ಪುರುಷ ಲೈಂಗಿಕ ವಿಕೃತಿ ಮೆರೆದ ಪ್ರಕರಣ ಗುರುವಾರ ತಿಳಿದು ಬಂದಿದೆ. ಮರ್ಯಾದೆಗೆ ಅಂಜಿದ ದೌರ್ಜನ್ಯಕ್ಕೆ ಒಳಗಾದ ಪುರುಷ ದೂರು ದಾಖಲು ಮಾಡದೇ ಹೇಳಿಕೆಯನ್ನು ಮಾತ್ರ ನೀಡಿ ತೆರಳಿದ್ದಾರೆ.

ಆದದ್ದೇನು?
ಉತ್ತರ ಕರ್ನಾಟಕದ ಮೂಲದ ವ್ಯಕ್ತಿಯೊಬ್ಬರು ಬಸ್ ಇಳಿದು ಶೌಚಾಲಯಕ್ಕೆ ತೆರಳಿದ್ದ ವೇಳೆ ನುಗ್ಗಿದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಂಗಳ ಮುಖಿಯರ ಜೊತೆ ಲೈಂಗಿಕ ಸಂಪರ್ಕ ನಡೆಸಿದ ವ್ಯಕ್ತಿ ಇಂಥ ಕೃತ್ಯ ಮಾಡಿರಬಹುದು ಎಂದು ಪೊಲೀಸರು ಹೇಳದಿದ್ದಾರೆ. ದೂರು ಸಲ್ಲಿಕೆಯಾಗದ ಕಾರಣ ಪೊಲೀಸರು ಆರೋಪಿಯನ್ನು ಹಿಡಿಯುವಂತೆ ಇಲ್ಲ.[ಎಚ್ಚರ.. ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು]

ಆಫ್ರಿಕಾ ಘಟನೆ:
ಕಳೆದ ಡಿಸೆಂಬರ್ ನಲ್ಲಿ ಮೂವರು ಮಹಿಳೆಯರು ಪುರುಷನನ್ನು ಅಪಹರಿಸಿ, ಅತ್ಯಾಚಾರಗೈದು ಆತನ ವೀರ್ಯವನ್ನು ಸಂಗ್ರಹಿಸಿದ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿತ್ತು. ಘಟನೆ ನಡೆದ ಬಳಿಕ ಆತನನ್ನು ಕಾರಿನಿಂದ ಹೊರ ಹಾಕಿದ್ದ ಯುವತಿಯರು ನಾಪತ್ತೆಯಾಗಿದ್ದರು. ಆದರೆ ಇಲ್ಲಿ ಪ್ರಕರಣ ಭಿನ್ನ.

English summary
In a shocking incident, a man from North Karnataka was allegedly sexually harassed by another man in Kempe Gowda bus stand. The incident has come to light on Thursday, 30th June. Police have suspected that a person linked with transgender might have committed the crime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X