ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಪರೋಕ್ಷ ಧೂಮಪಾನಿಗಳಿಗೂ ಕ್ಯಾನ್ಸರ್‌ ಅಪಾಯ

|
Google Oneindia Kannada News

ಧೂಮಪಾನ ಮಾಡದೇ ಇರುವವರು ಮತ್ತು ಪರೋಕ್ಷ ಧೂಮಪಾನಿಗಳಿಗೂ ಕ್ಯಾನ್ಸರ್‌ ಎದುರಾಗುವ ಅಷ್ಟೇ ಸಾಧ್ಯತೆ ಇದೆ ಎನ್ನುತ್ತಾರೆ ಡಾ. ಗೀತಾಂಜಲಿ ಮಾದಾ, ಡಿ.ಎಸ್‌ ರಿಸರ್ಚ್‌ ಸೆಂಟರ್‌, ಬೆಂಗಳೂರು

ವರ್ಷಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ವಿಶ್ವದಾದ್ಯಂತ ಅತ್ಯಂತ ಸಾಮಾನ್ಯ ಕ್ಯಾನ್ಸರ್‌ ಎನಿಸಿದೆ. ಭಾರತದಲ್ಲಿ ಬ್ರೆಸ್ಟ್‌ (ಸ್ತನ) ಕ್ಯಾನ್ಸರ್‌ ಮತ್ತು ಸ್ಟಮಕ್ (ಹೊಟ್ಟೆ) ಕ್ಯಾನ್ಸರ್‌ ನಂತರ ಶ್ವಾಸಕೋಶದ ಮೂರನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್‌ ಆಗಿದೆ. ಈ ಮಾರಣಾಂತಿಕ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸುವ ಸಲುವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅಂದಹಾಗೆ ಧೂಮಪಾನ ಶ್ವಾಸಕೋಶ ಕ್ಯಾನ್ಸರ್‌ನ ಮೂಲ. ಆದರೆ ಧೂಮಪಾನಿಗಳಲ್ಲೇ ಇರುವವರಲ್ಲೂ ಲಂಗ್‌ ಕ್ಯಾನ್ಸರ್‌ ಎದುರಾಗುವ ಸಾಧ್ಯತೆಗಳಿವೆ ಎಂದು ಬೆಂಗಳೂರಿನ ಡಿ.ಎಸ್‌ ರಿಸರ್ಚ್‌ ಸೆಂಟರ್‌ನ ಹಿರಿಯ ಆಯೂರ್ವೇದಾಚಾರ್ಯರಾದ ಡಾ. ಗೀತಾಂಜಲಿ ಮಾದಾ ಹೇಳಿದ್ದಾರೆ.

"ಜೀವನ ಶೈಲಿಯಲ್ಲಿನ ಬದಲಾವಣೆ ಮತ್ತು ಧೂಮಪಾನ ವ್ಯಸನದಿಂದಾಗಿ ಇಂದು ಲಂಗ್‌ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುವಂತ್ತಾಗಿದೆ. ಅಂದಹಾಗೆ ಲಂಗ್‌ ಕ್ಯಾನ್ಸರ್‌ ಕೇವಲ ಧೂಮಪಾನಿಗಳಿಗಷ್ಟೇ ಸೀಮಿತವಾದುದ್ದಲ್ಲ. ಧೂಮಪಾನಿಗಳಲ್ಲದೇ ಇರುವವರಿಗೂ ಮತ್ತು ಪರೋಕ್ಷ ಧೂಮಪಾನಿಗಳಿಗೂ ಈ ಮಾರಣಾಂತಿಕ ಕಾಯಿಲೆ ಎದುರಾಗುವ ಸಾಧ್ಯತೆ ಇದೆ. ಸೆಕೆಂಡ್‌ ಹ್ಯಾಂಡ್ ಧೂಮಪಾನ ಕೂಡ ಕ್ಯಾನ್ಸರ್‌ ತಂದೊಡ್ಡುವುದರಿಂದ ಪರೋಕ್ಷ ಧೂಮಪಾನಿಗಳಿಗೂ ಅಷ್ಟೇ ಅಪಾಯವಿದೆ," ಎಂದು ಡಾ. ಗೀತಾಂಜಲಿ ಮಾದಾ ಹೇಳಿದ್ದಾರೆ.

Non Smokers and Passive Smokers are at Equal risk for Lung Cancer

"ಇದು ಕೇವಲ ಧೂಮಪಾನಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ವಾಯು ಮಾಲಿನ್ಯ, ನಾರಿನಂತಹ ಧೂಳಿಗೆ ಒಳಪಡುವುದು, ಡೀಸೆಲ್‌ನಿಂದ ಬಂದಂತಹ ಹೊಗೆ, ಆರ್ಸೆನಿಕ್‌ ಕೆಮಿಕಲ್‌, ರೇಡಿಯೋ ಆಕ್ಟೀವ್ ಗ್ಯಾಸ್‌ ಈ ಎಲ್ಲದರಿಂದಲೂ ಲಂಗ್‌ ಕ್ಯಾನ್ಸರ್‌ ಎದುರಾಗುತ್ತದೆ. ಕೇವಲ ಸಿಗರೇಟು ಸೇವನೆ ಮಾತ್ರವಲ್ಲ, ಗಾಂಜಾ ಸೇವನೆ, ಹುಕ್ಕಾ ಮತ್ತು ಪಾಟ್‌ ಸೇವನೆ ಎಲ್ಲದರಿಂದಲೂ ಲಂಗ್‌ ಕ್ಯಾನ್ಸರ್‌ ಎದುರಾಗುತ್ತದೆ," ಎಂದು ವಿವರಿಸಿದ್ದಾರೆ.

ಅಂದಹಾಗೆ ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ ಆರಂಭಿಕ ಗುಣಲಕ್ಷಣಗಳೇ ಇರುವುದಿಲ್ಲ. ಆದರೂ ಆರಂಭಿಕ ಹಂತದಲ್ಲಿ ರೋಗದ ಪತ್ತೆಯಾದರೆ ಯಶಸ್ವಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಚೆಸ್ಟ್‌ ಎಕ್ಸ್‌-ರೇ, ಎದೆ ಭಾಗದ ಸಿಟಿ ಸ್ಕ್ಯಾನ್‌ ಅಥವಾ ಬಯೋಪ್ಸಿ ಮತ್ತು ಸ್ಪುಟಮ್ ಸಿಟೊಲಾಜಿ ಮೂಲಕ ರೋಗವನ್ನು ಪತ್ತೆ ಮಾಡಬಹುದಾಗಿದೆ.

Non Smokers and Passive Smokers are at Equal risk for Lung Cancer

ಉದಾಹರಣೆಗೆ ಔಷಧ ತೆಗೆದುಕೊಂಡರೂ ಕೆಮ್ಮು ಗುಣವಾಗದೇ ಇರುವುದು. ಕೆಮ್ಮಿದಾಗ ರಕ್ತ ಬಂದಲ್ಲಿ ಅದನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಕೂಡಲೇ ವೈದ್ಯಕೀಯ ನೆರವು ಪಡೆಯಬೇಕು. ಇದಲ್ಲದೆ ಉಸಿರಾಟದ ತೊಂದರೆ, ಉಸಿರಾಡುವಾಗ ಎದೆ ಭಾಗದಲ್ಲಿ ಶಬ್ದವಾಗುವುದು. ಎದೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಧ್ವನಿಯಲ್ಲಿ ಬದಲಾವಣೆ, ಅನಿರೀಕ್ಷಿತವಾಗಿ ದೇಹದ ತೂಕ ಇಳಿಯುವುದು. ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇವೆಲ್ಲವೂ ಲಂಗ್‌ ಕ್ಯಾನ್ಸರ್‌ನ ಗುಣಲಕ್ಷಣಗಳಾಗಿವೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

Recommended Video

Corona ಪರೀಕ್ಷೆ ದರ ಕರ್ನಾಟಕದಲ್ಲಿ ಮಾತ್ರ ಬದಲಾಗಲು ಕಾರಣವೇನು | Oneindia Kannada

"ಆರೋಗ್ಯಕರ ಜೀವನ ಶೈಲಿಯ ಅನುಕರಣೆ, ವ್ಯಾಯಾಮ, ತರಕಾರಿ-ಹಣ್ಣುಗಳ ಸೇವನೆ ಇವೆಲ್ಲದುರಿಂದ ಕ್ಯಾನ್ಸರ್‌ನಿಂದ ದೂರ ಉಳಿಯಲು ಸಾಧ್ಯವಾಗುತ್ತದೆ" ಎಂದು ಡಾ. ಮಾದಾ ಅಭಿಪ್ರಾಯ ಪಟ್ಟಿದ್ದಾರೆ.

English summary
Smoking has been cited as one of the major risk factors, though lung cancer can be developed in non-smokers as well. Non Smokers and Passive Smokers are at Equal risk for Lung Cancer said Dr Geethanjali Mada, D.S. Research Centre, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X