ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರ ಗಮನಕ್ಕೆ

|
Google Oneindia Kannada News

ಬೆಂಗಳೂರು, ಜುಲೈ 03; ವಿವಿಧ ನಿರ್ವಹಣಾ ಕಾಮಗಾರಿಗಳ ಹಿನ್ನಲೆಯಲ್ಲಿ ಬೆಂಗಳೂರು-ಮೈಸೂರು ನಡುವಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದೆ.

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ನಾನ್ ಇಂಟರ್ ಲಾಕಿಂಗ್‌ ಕೆಲಸಗಳನ್ನು ಕೈಗೊಳ್ಳಲಿದೆ. ಬಿಡದಿ ಮತ್ತು ರಾಮನಗರ ನಿಲ್ದಾಣಗಳ ನಡುವೆ ಈ ನಿರ್ವಹಣಾ ಕಾಮಗಾರಿಗಳು ನಡೆಯಲಿವೆ.

ಮಂಗಳೂರಿನಲ್ಲಿ ಭಾರೀ ಮಳೆ: ಬಸ್, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ ಮಂಗಳೂರಿನಲ್ಲಿ ಭಾರೀ ಮಳೆ: ಬಸ್, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ

ಇದರಿಂದಾಗಿ ಜುಲೈ 5, 6 ಮತ್ತು 7ರಂದು ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಲೆವೆಲ್ ಕ್ರಾಸಿಂಗ್ ನಂ 34, 35ರ ಇಂಟರ್ ಲಾಕಿಂಗ್ ಮತ್ತು ಬಿಡದಿ-ರಾಮನಗರ ನಡುವೆ 120 ಮೀಟರ್ ಲೈನ್ ಬ್ಲಾಕ್ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುತ್ತದೆ.

ಬೆಂಗಳೂರು ಸಬ್-ಅರ್ಬನ್ ರೈಲು ಯೋಜನೆಗೆ ಜರ್ಮನ್ ಬ್ಯಾಂಕ್ ಮೂಲಕ 4000 ಕೋಟಿ ರೂ.ಬೆಂಗಳೂರು ಸಬ್-ಅರ್ಬನ್ ರೈಲು ಯೋಜನೆಗೆ ಜರ್ಮನ್ ಬ್ಯಾಂಕ್ ಮೂಲಕ 4000 ಕೋಟಿ ರೂ.

Non Interlocking Work Bengaluru Mysuru Train Cancelled

ರೈಲುಗಳ ಸಂಚಾರ ರದ್ದು

* ರೈಲು ಸಂಖ್ಯೆ 06526 ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ಜುಲೈ 5, 6ರಂದು ರದ್ದು
* ರೈಲು ಸಂಖ್ಯೆ 06559 ಕೆಎಸ್ಆರ್ ಬೆಂಗಳೂರು- ಮೈಸೂರು ಮೆಮು ರೈಲು ಜುಲೈ 6, 7ರಂದು ರದ್ದು

ಬೆಂಗಳೂರಿಗರ ಕನಸು ನನಸು; ಉಪನಗರ ರೈಲು ಯೋಜನೆಗೆ ವೇಗಬೆಂಗಳೂರಿಗರ ಕನಸು ನನಸು; ಉಪನಗರ ರೈಲು ಯೋಜನೆಗೆ ವೇಗ

ರೈಲುಗಳು ಭಾಗಶಃ ರದ್ದು

* ಜುಲೈ 5 ಮತ್ತು 7ರಂದು ರೈಲು ಸಂಖ್ಯೆ 06255 ಕೆಎಸ್ಆರ್ ಬೆಂಗಳೂರು- ಮೈಸೂರು ಮೆಮು ಸಂಚಾರ ಭಾಗಶಃ ರದ್ದಾಗಲಿದೆ. ರೈಲು ಕೆಂಗೇರಿ ತನಕ ಮಾತ್ರ ಸಂಚಾರ ನಡೆಸಲಿದೆ.

Recommended Video

ಟೈಲರ್ ಹತ್ಯೆ ವಿಚಾರಕ್ಕೆ ಸಾಥ್ ಕೊಟ್ರಾ ರಾಹುಲ್ ಗಾಂಧಿ! | OneIndia Kannada

* ಜುಲೈ 5 ಮತ್ತು 7ರಂದು ರೈಲು ಸಂಖ್ಯೆ 06560 ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು-ಕೆಂಗೇರಿ ನಡುವೆ ಭಾಗಶಃ ರದ್ದಾಗಲಿದೆ. ನಿರ್ಗಮನದ ಸಮಯದಲ್ಲಿ ಕೆಂಗೇರಿಯಿಂದ ಹೊರಟು ಬೆಂಗಳೂರು ತಲುಪಲಿದೆ.

English summary
South western railway Bengaluru division will take up non Interlocking work between Bidadi and Ramanagara on July 5, 6 and 7. Due to work Bengaluru-Mysuru several train cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X