ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕೆಲವೆಡೆ ಗುರುವಾರ ನೀರು ಬರೋಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 30 : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಸಂಜೆ ಮತ್ತು ಗುರುವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ ನೀರು ಪೂರೈಕೆ ಮಾಡುವ ಪೈಪ್ ಒಡೆದಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು ಜಲ ಮಂಡಳಿ ಈ ಕುರಿತು ಮಾಹಿತಿ ನೀಡಿದೆ. ಕಾವೇರಿ 4ಹಂತದ 1ನೇ ಘಟ್ಟದ ನೀರು ಪೂರೈಕೆ ಮಾಡುವ ಪೈಪ್ ಒಡೆದಿರುವುದರಿಂದ ಬೆಂಗಳೂರಿನ ಈಶಾನ್ಯ ಭಾಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬುಧವಾರ ಸಂಜೆ ಮತ್ತು ಅಕ್ಟೋಬರ್ 1ರ ಗುರುವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

bwssb

ಎಲ್ಲೆಲ್ಲಿ ನೀರು ಬರೋಲ್ಲ : ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಮಡಿವಾಳ, ಅಗ್ರಹಾರ ದಾಸರಹಳ್ಳಿ, ಬಸವೇಶ್ವರ ನಗರ, ರಾಜಾಜಿನಗರ ಸುತ್ತಮುತ್ತ, ಮಂಗಮ್ಮನಪಾಳ್ಯ, ಜೆಪಿನಗರ, ಶಂಕರಮಠ, ಶಕ್ತಿಗಣಪತಿ ನಗರ, ರಾಜ್ ಕುಮಾರ್ ವಾರ್ಡ್.

ವೃಷಭಾವತಿ ನಗರ, ನಂದಿನಿ ಲೇಔಟ್, ನಾಗರಭಾವಿ, ಗೋವಿಂದರಾಜ ನಗರ, ಚಂದ್ರಾ ಲೇಔಟ್, ಅನ್ನಪೂರ್ಣ ನಗರ ಮುಂತಾದ ಕಡೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. [ನೀರಿನ ಬೆಲೆ ಎಷ್ಟು ಏರಿಕೆಯಾಗಿದೆ?]

English summary
Water supply will be interrupted in some areas of Bengaluru on October 1 due to maintenance works Bangalore Water Supply And Sewerage Board (BWSSB) said in press release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X