ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ ಪಾರ್ಕ್‌ನಲ್ಲಿ ವಾಹನ ಬೇಡ; ಸರ್ಕಾರಕ್ಕೆ ಪತ್ರ

|
Google Oneindia Kannada News

ಬೆಂಗಳೂರು, ಆಗಸ್ಟ್ 24 : ಲಾಲ್ ಬಾಗ್ ಮಾದರಿಯಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಸಂಪೂರ್ಣವಾಗಿ ವಾಹನಗಳ ಸಂಚಾರವನ್ನು ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪಾರ್ಕ್‌ನಲ್ಲಿ ವಾಹನ ಸಂಚಾರ ಬಂದ್ ಮಾಡಬೇಕು ಎಂದು ಹಲವಾರು ಸಂಘಟನೆಗಳು ಒತ್ತಾಯಿಸುತ್ತಿವೆ.

Recommended Video

Unlock 4.0 : ಚಿತ್ರಮಂದಿರ , ಮೆಟ್ರೋ , ಶಾಲಾ ಕಾಲೇಜು ಸೆಪ್ಟೆಂಬರ್‌ನಿಂದ ಪುನರಾರಂಭ ಸಾಧ್ಯತೆ | Oneindia Kannada

Heritage Beku ಎಂಬ ಸಂಘಟನೆ ಸರ್ಕಾರ ಮುಖ್ಯ ಕಾರ್ಯದರ್ಶಿ, ತೋಟಗಾರಿಕಾ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದೆ. ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಬೇಕು ಎಂದು ಮನವಿ ಮಾಡಿವೆ.

ಕಬ್ಬನ್ ಪಾರ್ಕ್‌ ಅಭಿವೃದ್ಧಿ; ಎರಡು ಹಂತದ ಯೋಜನೆಗೆ 40 ಕೋಟಿ ಕಬ್ಬನ್ ಪಾರ್ಕ್‌ ಅಭಿವೃದ್ಧಿ; ಎರಡು ಹಂತದ ಯೋಜನೆಗೆ 40 ಕೋಟಿ

ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದಾಗ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಈಗ ಸರ್ಕಾರದ ಆದೇಶದಂತೆ ಪುನಃ ವಾಹನ ಸಂಚಾರ ಆರಂಭಿಸಲಾಗಿದೆ. ಈ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರದ ಸಮಯ ಬದಲು? ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರದ ಸಮಯ ಬದಲು?

No Vehicle Movement At Cubbon Park Letter To Cs

ಹಿಂದೆ ಬೆಂಗಳೂರು ಸಂಚಾರಿ ಪೊಲೀಸರಿಗೂ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಬಂದ್ ಮಾಡುವ ಬಗ್ಗೆ ಮನವಿ ಮಾಡಲಾಗಿತ್ತು. ಪೊಲೀಸರು ಒಪ್ಪಿಗೆ ಸೂಚಿಸಿದ್ದರು. ಆದರೆ ಸಂಚಾರ ದಟ್ಟನೆ ಹೆಚ್ಚಾದ ಕಾರಣ ವಾಹನ ಸಂಚಾರ ಆರಂಭಿಸಲಾಯಿತು.

ಜೂನ್ 30ರಂದು ಕಬ್ಬನ್ ಪಾರ್ಕ್‌ನಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಅವಿರೋಧ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ವಾಹನಗಳ ಸಂಚಾರವಿದೆ ಎಂಬುದು ಸಂಘಟನೆಗಳ ದೂರು.

English summary
In a letter Bengaluru civic activists asked Karnataka chief secretary to roll back the government decision to allow vehicle movement in Cubbon Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X