ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಥಳೀಯರು ಟೋಲ್ ಕಟ್ಟಬೇಕಿಲ್ಲ: ಹೈಕೋರ್ಟ್

|
Google Oneindia Kannada News

ಬೆಂಗಳೂರು, ಜು. 08 : ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರ ನಡುವಿನ ದೇವನಹಳ್ಳಿ ಟೋಲ್ ಪ್ಲಾಜಾದ 20 ಕಿಮೀ ಸುತ್ತಮುತ್ತಲ ವ್ಯಾಪ್ತಿಯ ಸ್ಥಳೀಯರಿಂದ ಟೋಲ್ ವಸೂಲಿ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಸ್ಥಳೀಯರಿಗೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಸಂಸ್ಥೆ ಪಾಸ್ ನೀಡುತ್ತಿತ್ತು. ಆದರೆ ಜನರಿಗೆ ಮಾಹಿತಿಯೇ ಇಲ್ಲದೆ ಅನಗತ್ಯವಾಗಿ ಟೋಲ್ ಕಟ್ಟುತ್ತಿದ್ದರು. ಇದನ್ನು ಪ್ರಶ್ನಿಸಿ ನವೀನ್ ಕುಮಾರ್ ಎಂಬುವರು ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೇ ಪಾಸ್ ಬಗ್ಗೆ ಎಲ್ಲರಿಗೂ ತಿಳಿವಳಿಕೆ ನೀಡಬೇಕು ಎಂದು ತಿಳಿಸಿದೆ.[ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಟೋಲ್ ದರ ಹೆಚ್ಚಳ]

toll

ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂಬ ಗಲಾಟೆಯೂ ಹಿಂದೆ ನಡೆಸಿತ್ತಿ. ಈ ಬಗ್ಗೆ ಉತ್ತರ ನೀಡಿರುವ ನ್ಯಾಯಪೀಠ ದರ ಏರಿಕೆ ಸಂಬಂಧ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದೆ.[ಕೆಂಪೇಗೌಡ ವಿ. ನಿಲ್ದಾಣದಲ್ಲಿ ಚೆಕ್ ಇನ್ ಸಮಸ್ಯೆ ಇನ್ನಿಲ್ಲ!]

ಸ್ಥಳೀಯರ ವಾಹನ, ಟ್ರ್ಯಾಕ್ಟರ್ ಗಳಿಗೆ ನಾವು ಯಾವುದೇ ಶುಲ್ಕ ಪಡೆಯುತ್ತಿಲ್ಲ. ಮೂರು ಚಕ್ರದ ವಾಹನಗಳಿಗೂ ವಿನಾಯಿತಿ ನೀಡಿದ್ದೇವೆ ಎಂದು ಜವಾಬ್ದಾರಿ ಹೊತ್ತುಕೊಂಡ ನವಯುಗ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿತ್ತು. ಹೈ ಕೋರ್ಟ್ ಆದೇಶ ಸ್ಥಳೀಯರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

English summary
Bengaluru: No toll fee for Devanahali locals around 20 km, The Karnataka High court said a verdict based on a public interest litigation, on Tuesday, July 7, 2015
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X