ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2ಸ್ಟ್ರೋಕ್ ಆಟೋ ಗುಜರಿಗೆ: ಸಬ್ಸಿಡಿ ಕೋರಿದ್ದು ಎರಡೇ ಅರ್ಜಿ

|
Google Oneindia Kannada News

ಬೆಂಗಳೂರು, ಮಾರ್ಚ್ 2: ಸರ್ಕಾರ ಹೊಸ ಆಟೋ ಖರೀದಿಗೆ ಸಹಾಯಧನ ನೀಡುತ್ತೇವೆ ಎಂದರೂ ಇದನ್ನು ಪಡೆಯಲು 2 ಸ್ಟ್ರೋಕ್ ಆಟೋ ಚಾಲಕರು ಮುಂದಾಗುತ್ತಿಲ್ಲ. ಅವೈಜ್ಞಾನಿಕ ನಿರ್ಧಾರ, ಗೊಂದಲಮಯ ಆದೇಶದ ಪರಿಣಾಮವಾಗಿ ಆಟೋ ಚಾಲಕರು ಈ ನಿರ್ಧಾರಕ್ಕೆ ಬಂದಂತಿದೆ.

2 ಸ್ಟ್ರೋಕ್ ಆಟೋ ಬದಲಾಗಿ ಎಲ್ ಪಿಜಿ ಆಟೋ ಖರೀದಿಗೆ ಸಾರಿಗೆ ಇಲಾಖೆ ನೀಡುತ್ತಿರುವ 30 ಸಾವಿರ ರೂ. ಸಬ್ಸಿಡಿ ಪಡೆಯಲು ಕಳೆದ ನವೆಂಬರ್ ನಿಂದ ಕೇವಲ 2ಅರ್ಜಿಗಳು ಮಾತ್ರ ಬಂದಿವೆ.

Auto

ಬೆಂಗಳೂರಿನಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ 2018ರ ಏಪ್ರಿಲ್ 1ರಿಂದ 2 ಸ್ಟ್ರೋಕ್ ಆಟೋ ನಿಷೇಧಿಸುವ ಸರ್ಕಾರದ ನಿರ್ಧಾರವನ್ನು 2017ರ ಬಜೆಟ್ ನಲ್ಲಿ ಘೋಷಿಸಿತ್ತು.

ಈ ಕುರಿತು ನವೆಂಬರ್, ಡಿಸೆಂಬರ್ ನಲ್ಲಿ ಇಲಾಖೆ ಸ್ಕ್ರಾಪ್ ನೀತಿ ಪ್ರಕಟಿಸಿ ಅರ್ಜಿ ಆಹ್ವಾನಿಸಿತ್ತು. 2 ಸ್ಟ್ರೋಕ್ ಆಟೋವನ್ನು ಇಲಾಖೆ ಗುರುತಿಸಿದ ಗುಜರಿ ಕೇಂದ್ರಕ್ಕೆ ಹಾಕಿ, ಪ್ರಮಾಣ ಪತ್ರ ತಂದ ಮೇಲಷ್ಟೇ ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿತ್ತು.

ಗುಜರಿ ನಿಯಮ ಪರಿಣಾಮ: ಈ ಹಿಂದೆ ಆಟೋ ಖರೀದಿಗೆ ಇಲಾಖೆ ಸಬ್ಸಿಡಿ ನೀಡುತ್ತಿದ್ದಾಗ ಸಾವಿರಾರು ಆಟೋ ಖರೀದಿಗೆ ಕಡ್ಡಾಯವಾಗಿ ಹಳೇ 2ಸ್ಟ್ರೋಕ್ ಆಟೋ ಗುಜರಿಗೆ ಹಾಕುವ ನಿಯಮ ಆಗ ಇರಲಿಲ್ಲ.

ಇದರಿಂದಾಗಿ 2ಸ್ಟ್ರೋಕ್ ಆಟೋ ಗುಜರಿಗೆ ಹಾಕುವ ಬದಲು ಬೆಂಗಳೂರು ನಗರದ ಹೊರಗಡೆ ಮಾರಾಟ ಮಮಾಡಲು ಚಾಲಕರು ಮುಂದಾಗುತ್ತಿದ್ದಾರೆ. ಈ ರೀತಿ ಮಾಡಿದರೆ ಆಟೋವೊಂದಕ್ಕೆ 50-60 ಸಾವಿರ ರೂ ದೊರೆಯಲಿದೆ.

ಆಟೋ ಅಂಕಿ ಅಂಶ: ಬೆಂಗಳೂರಿನಲ್ಲಿ ನೋಂದಣಿಯಾದ ಆಟೋಗಳು, 1,78,745, ನೋಂದಣಿಯಾದ 2 ಸ್ಟ್ರೋಕ್ ಆಟೋಗಳು-73,008, ಕಾರ್ಯಾಚರಣೆಯಲ್ಲಿರುವ ಆಟೋಗಳ ಸಂಖ್ಯೆ 15-20 ಸಾವಿರವಿದೆ.

English summary
As state government abondoned two strike auto rickshaw in Bengaluru. Transport department was taken an initiation to provide subsidy for 4 stroke auto rickshaws. But no takers were found applied for this facility with government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X