ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಸೋಂಕಿತರ ಚಿಕಿತ್ಸೆಗೆ ರಿಯಲ್ ಟೈಂ ದತ್ತಾಂಶ ಇನ್ನು ಅಲಭ್ಯ!

|
Google Oneindia Kannada News

ಬೆಂಗಳೂರು, ಜು. 09: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಆತಂಕಕಾರಿಯಾಗಿ ಹಬ್ಬುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ಕೊಡುವುದು ಕೂಡ ಆಡಳಿತ ಯಂತ್ರಕ್ಕೆ ಸಾಧ್ಯವಾಗುತ್ತಿಲ್ಲ. ಸೋಂಕಿನಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪಿಲ್ಲ. ಬಿಬಿಎಂಪಿ ವಾರ್‌ ರೂಂನಲ್ಲಿ ಎಲ್ಲ ಆಸ್ಪತ್ರೆಗಳ ಸಮಗ್ರ ದತ್ತಾಂಶ ಸಿಗುವಂಹತ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಸರ್ಕಾರ ಭರವಸೆ ಕೊಟ್ಟು ದಿನಗಳೇ ಕಳೆದರೂ ಇನ್ನೂ ಕೂಡ ಆ ವ್ಯವಸ್ಥೆ ಆಗಿಲ್ಲ.

Recommended Video

Facebook , Instagram , tinder ಸೇರಿದಂತೆ ಬಾರತೀಯ ಸೇನೆಯು 89 ಆ್ಯಪ್‌ಗಳನ್ನು ನಿಷೇಧಿಸಿದೆ.| Oneindia Kannada

ಬಿಬಿಎಂಪಿ ಕೋವಿಡ್-19 ವಾರ್‌ರೂಂನಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್ಸ್‌, ಬೆಡ್‌ಗಳು ಹಾಗೂ ಐಸಿಯುಗಳ ಮಾಹಿತಿ ಒಂದೆಡೆ ಸಿಗುವಂತೆ ಮಾಡುವುದಾಗಿ ಸರ್ಕಾರ ಭರವಸೆ ಕೊಟ್ಟಿತ್ತು. ಇದರಿಂದ ಸೋಂಕಿತರಿಗೆ ವಿಳಂಬವಿಲ್ಲದೆ ಚಿಕಿತ್ಸೆ ಸಿಗುತ್ತದೆ ಎನ್ನಲಾಗಿತ್ತು.

ಬೆಂಗಳೂರಲ್ಲಿ ಕೋವಿಡ್ ನಿಯಂತ್ರಣ; ಮೇಲ್ವಿಚಾರಣೆಗೆ ಐಎಎಸ್ ಅಧಿಕಾರಿಗಳ ನೇಮಕಬೆಂಗಳೂರಲ್ಲಿ ಕೋವಿಡ್ ನಿಯಂತ್ರಣ; ಮೇಲ್ವಿಚಾರಣೆಗೆ ಐಎಎಸ್ ಅಧಿಕಾರಿಗಳ ನೇಮಕ

ಬೆಂಗಳೂರು ಕೋವಿಡ್ ಉಸ್ತುವಾರಿಯೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ಸುಪರ್ದಿಯಲ್ಲಿ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣದ ಜವಾಬ್ದಾರಿಯನ್ನು ಡಾ. ಸುಧಾಕರ್ ಹೊತ್ತುಕೊಂಡಿದ್ದಾರೆ. ಆದರೆ ಸೋಂಕಿತರಿಗೆ ತುರ್ತು ಚಿಕಿತ್ಸೆ ಕೊಡಲು ಮಾಡಿಕೊಳ್ಳಬೇಕಾಗಿರುವ ಸಿದ್ಧತೆಗಳು ಮಾತ್ರ ವಿಳಂಬವಾಗುತ್ತಿವೆ.

No real-time database available at BBMP Covid-19 in Bengaluru

ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಮಾಡಿಕೊಂಡಿರುವ ಸಿದ್ಧತೆಯನ್ನು, ಲಭ್ಯವಿರುವ ವೆಂಟಿಲೇಟರ್ಸ್‌, ಬೆಡ್‌ಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಕೂಡ ಸರ್ಕಾರಕ್ಕೆ ಸೂಚಿಸಿತ್ತು. ಆದರೂ ಕೂಡ ಇನ್ನೂ ಆ ವ್ಯವಸ್ಥೆ ಆಗಿಲ್ಲ.

ಬೆಂಗಳೂರಿನ ಫೀವರ್ ಕ್ಲಿನಿಕ್‌ನಲ್ಲಿ ಉಚಿತ ಕೊವಿಡ್ ಪರೀಕ್ಷೆ!ಬೆಂಗಳೂರಿನ ಫೀವರ್ ಕ್ಲಿನಿಕ್‌ನಲ್ಲಿ ಉಚಿತ ಕೊವಿಡ್ ಪರೀಕ್ಷೆ!

ಬಿಬಿಎಂಪಿ ಕೋವಿಡ್-19 ವಾರ್‌ ರೂಂ ಉಸ್ತುವಾರಿ ಹೆಫ್ಸಿಬಾ ರಾಣಿ ಕೊರ್ಲಪತಿ ಅವರು, ವೆಬ್‌ಸೈಟ್ ಸಾರ್ವಜನಿಕರಿಗೆ ನೇರವಾಗಿ ಸಿಗುವಂತಾಗಲು ಇನ್ನೂ ಸ್ವಲ್ಪ ಸಮಯ ಬೇಕು ಎಂದು ಮಾಹಿತಿ ಕೊಟ್ಟಿದ್ದಾರೆ. ವೆಬ್‌ಸೈಟ್ ಅನ್ನು ಭಾಗಶಃ ಸಿದ್ಧಪಡಿಸಿದ್ದೇವೆ. ಬಿಬಿಎಂಪಿ ವಲಯ ಮಟ್ಟದಲ್ಲಿ ಸದ್ಯ ನಾವು ಇದನ್ನು ಬಳಸುತ್ತಿದ್ದೇವೆ. ವೆಬ್‌ಸೈಟ್ ಪೂರ್ಣಪ್ರಮಾಣದಲ್ಲಿ 3-4 ದಿನಗಳ ಹಿಂದೆ ನೇರ ಪ್ರಸಾರಕ್ಕೆ ಸಿದ್ಧವಾಗಿದೆ. ಆದರೆ ಸಾರ್ವಜನಿಕವಾಗಿ ಲಭ್ಯವಾಗಲು ಸ್ವಲ್ಪ ಕಾಲಾವಕಾಶ ಬೇಕು ಎಂದಿದ್ದಾರೆ.

English summary
No real-time database available at BBMP Covid-19 Warroom to treatment for coronavirus infected people in Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X