ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಸುಲ್ತಾನ್ ವಿವಿ ರಾಜ್ಯದಲ್ಲೆಲ್ಲೂ ಸ್ಥಾಪಿಸುವಂತಿಲ್ಲ

By Srinath
|
Google Oneindia Kannada News

ಬೆಂಗಳೂರು, ಮೇ12: ಟಿಪ್ಪು ಸುಲ್ತಾನ್ ಹೆಸರಿನಲ್ಲಿ ರಾಜ್ಯದ ಯಾವ ಭಾಗದಲ್ಲೂ ವಿಶ್ವವಿದ್ಯಾಲಯ ಸ್ಥಾಪಿಸಬಾರದು ಎಂದು ಹಿರಿಯ ಸಂಶೋಧಕ ಡಾ. ಎಂ ಚಿದಾನಂದ ಮೂರ್ತಿ ಅವರು ಪುನಃ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಟಿಪ್ಪು ಹೆಸರಿನಲ್ಲಿ ಕೋಲಾರದಲ್ಲಿ ವಿವಿ ಸ್ಥಾಪಿಸುವುದಾಗಿ ಕೇಂದ್ರ ಸಚಿವ ರೆಹಮಾನ್ ಖಾನ್ ಹೇಳಿದ್ದಾರೆ. ಜತೆಗೆ ತಲಕಾಡು ಚಿಕ್ಕರಂಗೇ ಗೌಡ ಅವರು ಟಿಪ್ಪು ಉದಾರವಾದಿ ಎಂದು ಕರೆದಿದ್ದು ಆತನಿಂದಲೇ ಹಿಂದು ಧರ್ಮ ಉಳಿದಿದೆ. ಕೂಡಲೇ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪಿಸಿ ಎಂದೂ ಒತ್ತಾಯಿಸಿದ್ದಾರೆ. ಆದರೆ ಇದು ಸಂಜಸವಲ್ಲ. ಹಾಗಾಗಿ ರಾಜ್ಯದಲ್ಲೆಲ್ಲೂ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವಂತಿಲ್ಲ ಎಂದು ಚಿಮೂ ಹೇಳಿದ್ದಾರೆ.

ಗಮನಾರ್ಹವೆಂದರೆ ಶ್ರೀರಂಗಪಟ್ಟಣದಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಟಿಪ್ಪು ವಿವಿ ಸ್ಥಾಪಿಸಬೇಕೆಂಬ ಪ್ರಸ್ತಾವನೆಗೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಅಧ್ಯಕ್ಷ ಪ್ರೊ. ಸುಖ್‌ ದೇವ್ ಥೋರಟ್ ನೇತೃತ್ವದ ತಜ್ಞರ ಸಮಿತಿ ರೆಡ್ ಸಿಗ್ನಲ್ ತೋರಿದೆ. ಸಂವಿಧಾನ ಮತ್ತು ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಸಮಿತಿ ಈಗಾಗಲೇ ಸ್ಪಷ್ಟಪಡಿಸಿದೆ. (ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಸ್ಥಾಪನೆ ಕನಸು ಭಗ್ನ)

no-place-for-tipu-sultan-university-in-karnataka-chidananda-murthy

ಈ ಹಿನ್ನೆಲೆಯಲ್ಲಿ ಟಿಪ್ಪುವಿನ ನೈಜ ಧೋರಣೆಗಳನ್ನು ಮನದಟ್ಟು ಪಡಿಸಲು ಚಿಮೂ ಇಂದು ಸುದ್ದಿಗೋಷ್ಠಿ ನಡೆಸಿದರು. ಟಿಪ್ಪು ಸುಲ್ತಾನ್ ಮತಾಂಧನಾಗಿದ್ದು, ಆತ ಅತ್ಯಂತ ಕ್ರೂರ ಮತ್ತು ನಿರ್ದಯಿ. ಶ್ರೀರಂಗಪಟ್ಟಣದ ಕೋಟೆ ಬಾಗಿಲಿನ ಪ್ರದೇಶದಲ್ಲಿದ್ದ ಆಂಜನೇಯ ದೇವಾಲಯ ಹಾಳು ಮಾಡಿ ಮಸೀದಿ ಕಟ್ಟಿಸಲಾಗಿದೆ. ಅಲ್ಲಿದ್ದ ಆಂಜನೇಯ ಮೂರ್ತಿಯನ್ನು ಅದೇ ಗ್ರಾಮದ ಬೇರೊಂದು ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಇಂತಹ ಹಲವಾರು ಉದಾಹರಣೆಗಳಿವೆ ಎಂದು ಅವರು ವಿವರಿಸಿದರು.

ಶಿಶುನಾಳ ಷರೀಫ್ ಅಥವಾ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ವಿವಿ ಸ್ಥಾಪಿಸಲು ತಮ್ಮ ಆಕ್ಷೇಪವಿಲ್ಲ ಎಂದು ತಿಳಿಸಿದರು. ಕಾಶ್ಮೀರದ ಆದಿ ಶಂಕರಾಚಾರ್ಯರ ತಪೋ ಭೂಮಿ, ಬೆಟ್ಟವನ್ನು ರಾಜ್ಯದ ಪುರಾತತ್ವ ಇಲಾಖೆ ತಕ್ಕಯಿ ಸುಲೇಮಾನ್ ಎಂದು ಬದಲಾಯಿಸಿದೆ. ಟಿಪ್ಪು ಹೆಸರಿನ ವಿವಿ ಸ್ಥಾಪನೆಗೆ ತಮ್ಮ ವಿರೋಧವಿದ್ದು, ಯಾವುದೇ ಭಾಗದಲ್ಲಿ ಟಿಪ್ಪು ಹೆಸರಿನಲ್ಲಿ ವಿವಿ ಸ್ಥಾಪಿಸಿದರೂ ಹೋರಾಟಕ್ಕಿಳಿಯುವುದಾಗಿ ಅವರು ಸ್ಪಷ್ಟಪಡಿಸಿದರು.

ಟಿಪ್ಪು ಸುಲ್ತಾನ್ ರಾಜ್ಯದಲ್ಲಿದ್ದ ಎಲ್ಲ ಹಿಂದೂ ದೇವಾಲಯಗಳನ್ನು ಹಾಳು ಮಾಡಲು ಆದೇಶಿಸಿದ್ದ. ತಮ್ಮ ಬಳಿ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಅಧಿಕಾರಿ ಶಿಫಾರಸ್ಸು ಮಾಡಿದ್ದ ಹಿಂದೂ ದೇವಾಲಯಗಳನ್ನು ಮಾತ್ರ ನಾಶಪಡಿಸಿಲ್ಲ. ತನ್ನ ಕಾಲಾವಧಿಯಲ್ಲಿ ಟಿಪ್ಪು ಒಂದು ಲಕ್ಷ ಹಿಂದೂಗಳು, 70 ಲಕ್ಷ ಕ್ರಿಶ್ಚಿಯನ್ನರನ್ನು ಮತಾಂತರಗೊಳಿಸಿದ್ದ ಎಂದು 1855 ರಲ್ಲಿ ಟಿಪ್ಪುವಿನ ಮಗ ಗುಲ್ಲಾಂ ಮಹಮದ್ ರಚಿಸಿರುವ ಕೃತಿಯಲ್ಲಿ ಮಾಹಿತಿ ಇದೆ.

ಆತನ ಆಡಳಿತದಲ್ಲಿ ಇತರ ಧರ್ಮದವರ ಮುಂದೆ ಕುರಾನ್ ಅಥವಾ ಖಡ್ಗ ಎಂಬ ಎರಡು ಆಯ್ಕೆಗಳಿದ್ದು, ಕುರಾನ್ ಆಯ್ಕೆ ಮಾಡಿಕೊಳ್ಳದವರನ್ನು ಕಾಫಿರ್‌ ಗಳನ್ನು ಕಳುಹಿಸಿ ಕೊಲ್ಲುವುದು ಅವನ ಗುರಿಯಾಗಿತ್ತು. ಕೇರಳದ ಮುಸ್ಲಿಂ ಸೇವಾಧಿಕಾರಿಗೆ ಬರೆದ ಪತ್ರದಲ್ಲಿ ಈ ವಿಚಾರ ಸ್ಪಷ್ಟವಾಗಿದೆ.

ಶೃಂಗೇರಿ ಮಠಕ್ಕೆ, ಮೇಲುಕೋಟೆಗೆ, ನಂಜನಗೂಡು ದೇವಾಲಯಕ್ಕೆ ದತ್ತಿ ಕೊಟ್ಟಿದ್ದಾನೆ ಎಂದರೆ ಅದು ತನ್ನ ಬಳಿ ಇದ್ದ ಹಿಂದೂ ಅಧಿಕಾರಿಗಳನ್ನು ತೃಪ್ತಿಪಡಿಸುವ ತಂತ್ರವಾಗಿತ್ತು ಎಂದು ಚಿಮೂ ಆರೋಪಿಸಿದರು.

ಇಸ್ಲಾಂ ಬಿಟ್ಟು ಎಲ್ಲಾ ಧರ್ಮಗಳನ್ನು ನಾಶಪಡಿಸುವುದು ಅವನ ಉದ್ದೇಶವಾಗಿತ್ತು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ರಾಜ್ಯ ಉಳಿಸಲಿಕ್ಕಾಗಿ ಮಾತ್ರ. ಸ್ವಾತಂತ್ರ್ಯಕ್ಕಾಗಿ ಅಲ್ಲ ಎಂದ ಅವರು, ಗಾಂಧಿ ಹೋರಾಡಿದ್ದು ದೇಶದ ಸ್ವಾತಂತ್ರಕ್ಕಾಗಿ ಎಂದು ಹೋಲಿಕೆ ಮಾಡಿ ಹೇಳಿದರು.

English summary
No where in Karnataka Tipu Sultan University be established says Kannada writer, researcher and historian M Chidanada Murthy. An experts' body headed by Sukhadeo Thorat, former UGC chairman, has already not approved the propasal to set up Srirangapatna minorities university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X