ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ, 25 ನಿಮಿಷದ ವಿಡಿಯೋ ನೋಡುವ ಶಿಕ್ಷೆ

|
Google Oneindia Kannada News

ಬೆಂಗಳೂರು, ನವೆಂಬರ್18 : ಇನ್ನುಮುಂದೆ ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ದಂಡ ಕಟ್ಟಬೇಕಾಗಿಲ್ಲ ಬದಲಾಗಿ ಸಂಚಾರ ಶಿಸ್ತಿನ ವಿಡಿಯೋವನ್ನು ವೀಕ್ಷಿಸಬೇಕು.

ಟ್ರಾಫಿಕ್ ನಿಯಮ ಉಲ್ಲಂಘಿಸಿ, ರಾಜ್ಯಾದ್ಯಂತ 'ಕ್ಯಾಶ್ ಲೆಸ್' ದಂಡ ಕಟ್ಟಿಟ್ರಾಫಿಕ್ ನಿಯಮ ಉಲ್ಲಂಘಿಸಿ, ರಾಜ್ಯಾದ್ಯಂತ 'ಕ್ಯಾಶ್ ಲೆಸ್' ದಂಡ ಕಟ್ಟಿ

ಇಂತದ್ದೊಂದು ವಿಶಿಷ್ಟ ಯೋಜನೆಯನ್ನು ನಗರದ ಸಂಚಾರ ಪೊಲೀಸರು ಶುಕ್ರವಾರ (ನ.17) ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಯೋಜನೆಯನ್ನು ಜಾರಿಗೆ ತಂದಿದ್ದು 25 ನಿಮಿಷಗಳ ಸಂಚಾರ ಶಿಸ್ತಿನ ವಿಡಿಯೋಗೆ ಮೊರೆ ಹೋಗಿದ್ದಾರೆ.

No Penalty on traffic rules violation!

ಈ ನೂತನ ಯೋಜನೆಯನ್ನು ಈಗಾಗಲೇ ಕೋರಮಂಗಲದ ಫೋರಂ ಮಾಲ್ ಆವರಣದಲ್ಲಿ ಶುಕ್ರವಾರದಿಂದ ಪ್ರಾಯೋಗಿಕವಾಗಿ ಚಾಲನೆಗೆ ತರಲಾಗಿದೆ. ಇದಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ನಗರಾದ್ಯಂತ ಯೋಜನೆಯನ್ನು ವಿಸ್ತರಿಸಲಾಗುತ್ತದೆ.

ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಜಾಗದ ಲಭ್ಯತೆ ಆಧಾರದ ಮೇಲೆ ವಿಡಿಯೋ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ದಂಡ ಸಂಗ್ರಹಕ್ಕಿಂತ ಜನರಲ್ಲಿ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹೇಳಿದರು.

English summary
If you break a traffic rule u may forced to watch a video instead of fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X