• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಪಕ್ಷವೇ ನನ್ನ ಜಾತಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್!

|

ಬೆಂಗಳೂರು, ಅ. 09: ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯಾರೂ ವೀಕ್ಷಕರಿಲ್ಲ. ನನ್ನನ್ನೂ ಸೇರಿದಂತೆ ಎಲ್ಲರೂ ಕಾರ್ಯಕರ್ತರಂತೆ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಉಪಚುನಾವಣೆಯಲ್ಲಿ ಯಾರೂ ವೀಕ್ಷಕರಿಲ್ಲ. ಎಲ್ಲರೂ ಕಾರ್ಯಕರ್ತರೆ. ನಾನು ಕಾರ್ಯಕರ್ತನೆ. ಎಲ್ಲರೂ ಹೋಗಿ ಕೆಲಸ ಮಾಡುವವರೇ. ಯಾರೂ ವೀಕ್ಷಣೆ ಮಾಡುವವರಿಲ್ಲ ಎಂದರು. ಕೋವಿಡ್ ಇರುವುದರಿಂದ ನಾಳೆ ಸಾಧಾರಣವಾಗಿ ರೈತರ ಸಮಾವೇಶವನ್ನು ಮಂಡ್ಯದಲ್ಲಿ ನಡೆಸುತ್ತಿದ್ದೇವೆ. ಜತೆಗೆ ಸಹಿ ಸಂಗ್ರಹ ಆಂದೋಲನ ಆರಂಭಿಸುತ್ತಿದ್ದೇವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಅವರು ಬರುತ್ತಿದ್ದಾರೆ. ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

   ಕಡೆಗೂ ಫಾರ್ಮ್ ಕಂಡುಕೊಂಡ Dinesh Karthik | Oneindia Kannada

   ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಯಾವ ಸಮುದಾಯ? ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ಕಾಂಗ್ರೆಸ್ ಪಕ್ಷವೇ ನನ್ನ ಜಾತಿ. ಅವರು ದೊಡ್ಡವರು, ಏನು ಬೇಕಾದರೂ ಮಾತನಾಡಲಿ. ಶಾಲೆ ಆರಂಭ ವಿಚಾರದಲ್ಲಿ ಸರ್ಕಾರ ಶಾಲೆಗಳು, ಪೋಷಕರ ಜತೆ ಮಾತನಾಡಿ ತೀರ್ಮಾನ ಕೈಗೊಳ್ಳಲಿ. ಸರ್ಕಾರದ ವಿಚಾರದಲ್ಲಿ ನಾನು ಹಸ್ತಕ್ಷೇಪ ಏಕೆ ಮಾಡಲಿ ಎಂದರು.

   English summary
   KPCC president DK Shivakumar said that everyone including me will work as party workers. No observers in the by-election in rr nagara and sira by election he added, Know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X