ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮಾಂಸದೂಟದ ಭಾಗ್ಯವಿಲ್ಲ!

|
Google Oneindia Kannada News

ಬೆಂಗಳೂರು, ಜನವರಿ 02 : ಪರಪ್ಪನ ಅಗ್ರಹಾರ ಕೇಂದ್ರ ಕಾರಾಹಗೃಹದಲ್ಲಿ ಮೂರು ವಾರಗಳಿಂದ ಕೈದಿಗಳ ಮಾಂಸದೂಟಕ್ಕೆ ತಡೆ ಬಿದ್ದಿದೆ. ವಾರಕ್ಕೊಮ್ಮೆ ಸಿಗುತ್ತಿದ್ದ ಮಾಂಸದೂಟ ಕೈ ತಪ್ಪಿದ್ದಕ್ಕೆ ಕೈದಿಗಳು ಆಕ್ರೋಶಗೊಂಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿ ಶುಕ್ರವಾರ ಮಾಂಸದೂಟ ನೀಡಲಾಗುತ್ತಿತ್ತು. ಆದರೆ, ಕಳೆದ ಮೂರು ವಾರಗಳಿಂದ ಮಾಂಸದೂಟವಿಲ್ಲದೇ ಕೈದಿಗಳು ತರಕಾರಿ ಊಟವನ್ನೇ ಮಾಡಬೇಕಾಗಿದೆ. ಮುಂದಿನ ವಾರ ಮಾಂಸದೂಟ ಕೊಡಲೇಬೇಕು ಎಂದು ಕೈದಿಗಳು ಬೇಡಿಕೆ ಇಟ್ಟಿದ್ದಾರೆ.

ಚಿತ್ರದುರ್ಗ : ವಿಷಪೂರಿತ ಆಹಾರ ಸೇವನೆ, ಒಂದೇ ಕುಟುಂಬದ ನಾಲ್ವರ ಸಾವುಚಿತ್ರದುರ್ಗ : ವಿಷಪೂರಿತ ಆಹಾರ ಸೇವನೆ, ಒಂದೇ ಕುಟುಂಬದ ನಾಲ್ವರ ಸಾವು

ಚಾಮರಾಜಪೇಟೆಯ ರಾಜ್ ಮಟನ್ ಸ್ಟಾಲ್ ಮಾಲೀಕ ಸುರೇಶ್ ಬಾಬು ಅವರು ಜೈಲಿಗೆ ಮಾಂಸ ಪೂರೈಕೆ ಮಾಡುತ್ತಿದ್ದರು. ಜೈಲಿನ ಅಧಿಕಾರಿಗಳು ಈಗ ಮಾಂಸ ಪೂರೈಕೆ ಗುತ್ತಿಗೆಯನ್ನು ಹೊಸಬರಿಗೆ ನೀಡಲು ತೀರ್ಮಾನಿಸಿದ್ದಾರೆ. ಆದರೆ, ಅದು ಇನ್ನೂ ಅಂತಿಮವಾಗಿಲ್ಲ. ಆದ್ದರಿಂದ, ಮಾಂಸದೂಟವಿಲ್ಲ.

107ನೇ ವಯಸ್ಸಿನಲ್ಲಿ ಯೂಟ್ಯೂಬ್ ಸ್ಟಾರ್ ಆಗಿದ್ದ ಆಂಧ್ರದ ಅಜ್ಜಿ ಇನ್ನಿಲ್ಲ107ನೇ ವಯಸ್ಸಿನಲ್ಲಿ ಯೂಟ್ಯೂಬ್ ಸ್ಟಾರ್ ಆಗಿದ್ದ ಆಂಧ್ರದ ಅಜ್ಜಿ ಇನ್ನಿಲ್ಲ

No non-veg food in Parappana Agrahara jail

ಆಗಿದ್ದೇನು? : ಡಿಸೆಂಬರ್ 7ರಂದು ಜೈಲಿಗೆ ಮಾಂಸ ತಂದಿದ್ದ ವಾಹನದಲ್ಲಿ ಆರು ಮೊಬೈಲ್‌ಗಳು ಪತ್ತೆಯಾಗಿತ್ತು. ಈ ಸಂಬಂಧ ಸುರೇಶ್ ಬಾಬು ಸೇರಿ ಮೂವರನ್ನು ಬಂಧಿಸಲಾಗಿತ್ತು. ಬಳಿಕ ಮಾಂಸ ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಹೊಸ ಟೆಂಡರ್ ಇನ್ನೂ ಕರೆದಿಲ್ಲ.

ಅನ್ನದಾನ ಮಾಡ್ತಾರೆ, ಮಗ್ಗಿ ಪುಸ್ತಕವನ್ನೂ ಕೊಡ್ತಾರೆ ಈ ವೈದ್ಯಅನ್ನದಾನ ಮಾಡ್ತಾರೆ, ಮಗ್ಗಿ ಪುಸ್ತಕವನ್ನೂ ಕೊಡ್ತಾರೆ ಈ ವೈದ್ಯ

ಜೈಲಿನಲ್ಲಿ ಪ್ರತಿ ಶುಕ್ರವಾರ ಮಾಂಸದೂಟ ನೀಡಲಾಗುತ್ತದೆ. ಕುರಿ ಮಾಂಸವಾದರೆ ಒಬ್ಬ ಕೈದಿಗೆ 110 ಗ್ರಾಂ, ಕೋಳಿ ಮಾಂಸವಾದರೆ 200 ಗ್ರಾಂ ನೀಡಲಾಗುತ್ತದೆ. 3500 ಕೈದಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಾರಕ್ಕೊಮ್ಮೆ ಸಿಗುವ ಮಾಂಸದೂಟಕ್ಕಾಗಿ ಕೈದಿಗಳು ಕಾದು ಕುಳಿತಿರುತ್ತಾರೆ.

ವಾಹನದಲ್ಲಿ ಮೊಬೈಲ್ ಸಿಕ್ಕಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸುರೇಶ್ ಬಾಬು, 'ಕಾರಾಗೃಹಕ್ಕೆ ಮಾಂಸ ಪೂರೈಕೆ ಮಾಡುವುದರಿಂದ ವಾರ್ಷಿಕ 70 ರಿಂದ 80 ಲಕ್ಷ ಆದಾಯ ಬರುತ್ತಿದೆ. ಮೊಬೈಲ್ ಪೂರೈಕೆ ಮಾಡಿ ಹಣ ಮಾಡುವ ಉದ್ದೇಶ ನನಗಿಲ್ಲ' ಎಂದು ಹೇಳಿದ್ದಾರೆ.

English summary
From past three weeks no non-veg food in Parappana Agrahara jail, Bengaluru. Non-veg food supply stopped after mobile and sim card found in food supply vehicle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X