ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮೇಲೆ ಐಟಿ- ಬಿಟಿ ಕಂಪೆನಿಗಳಲ್ಲೂ ಮಹಿಳೆಯರಿಗೆ ರಾತ್ರಿ ಪಾಳಿಯಿಲ್ಲ!

ಇನ್ಮೇಲೆ ಐಟಿ ಬಿಟಿ ಕಂಪೆನಿಯಲ್ಲಿ ಕೆಲಸ ಮಾಡುವ ಮಹಿಳೆಯರು ರಾತ್ರಿಪಾಳಿ ಮಾಡುವಂತಿಲ್ಲ ಎಂದು ರಾಜ್ಯ ಜಂಟಿ ಸದನ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

|
Google Oneindia Kannada News

ಬೆಂಗಳೂರು, ಮಾರ್ಚ್ 28: ಮಹಿಳಾ ಭದ್ರತೆಯನ್ನು ಗುರಿಯನ್ನಾಗಿಸಿಕೊಂಡಿರುವ ರಾಜ್ಯಸರ್ಕಾರ ಐಟಿ-ಬಿಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗಾಗಿ ಸಿಹಿಸುದ್ದಿಯೊಂದನ್ನು ನೀಡುತ್ತಿದೆ. ಅದೇನಂದ್ರೆ, ಇನ್ಮೇಲೆ ಈ ಕಂಪೆನಿಗಳಲ್ಲಿ ಮಹಿಳೆಯರು ರಾತ್ರಿಪಾಳಿಯಲ್ಲಿ ಕೆಲಸ ಮಾಡುವಂತಿಲ್ಲ!

ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ನೇತೃತ್ವದಲ್ಲಿ ಮಾರ್ಚ್ 27, ಸೋಮವಾರದಂದು ನಡೆದ ಜಂಟಿ ಸದನ ಸಮಿತಿ ಸಭೆಯು ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕಂಪೆನಿಗಳು ರಾತ್ರಿ ಪಾಳಿಗೆ ಪುರುಷರನ್ನೇ ನೇಮಿಸಿಕೊಳ್ಳಬೇಕೆಂದು ಕಂಪೆನಿಗಳಿಗೆ ಶಿಫಾರಸ್ಸು ಮಾಡಿದೆ. ಐಟಿ ಮತ್ತು ಬಿಟಿ ಕಂಪೆನಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿದ್ದ 21 ಸದಸ್ಯರ ಸಮಿತಿಯೊಂದು ನೀಡಿದ ವರದಿಯನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ.[ನೈಟ್ ಶಿಫ್ಟಿಗೆ ಬೆಚ್ಚಿ ಬೀಳುವ ಬೆಂಗಳೂರು ಮಹಿಳೆ]

ರಾತ್ರಿಪಾಳಿಯಿಂದ ಸಮಸ್ಯೆಯೇ ಹೆಚ್ಚು

ರಾತ್ರಿಪಾಳಿಯಿಂದ ಸಮಸ್ಯೆಯೇ ಹೆಚ್ಚು

2016 ರ ನವೆಂಬರ್ ತಿಂಗಳಿನಲ್ಲಿ ಇನ್ಫೋಸಿಸ್ ಮತ್ತು ಬೈಯೋಕಾನ್ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಮಾತನಾಡಿಸಿದಾಗ, ಅವರಿಗೆ ರಾತ್ರಿಪಾಳಿಯಿಂದಾಗುತ್ತಿರುವ ಸಮಸ್ಯೆಗಳೇನು ಎಂಬುದು ಸರ್ಕಾರಕ್ಕೆ ತಿಳಿದಿದೆ. ಭದ್ರತೆ ಎಂಬುದು ಒಂದು ಕಾರಣವಾದರೆ ಕುಟುಂಬದ ಕಡೆ ಹೆಚ್ಚು ಗಮನ ನೀಡುವುದಕ್ಕೆ ಸಾಧ್ಯವಾಗದಿರುವುದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿರುವುದು ಇನ್ನುಳಿದ ಕಾರಣಗಳಾಗಿವೆ.[ಮಹಿಳಾ ಉದ್ಯೋಗಿಗಳಿಗೆ 'ನೈಟ್ ಶಿಫ್ಟ್' ಗೆ ಅನುಮತಿ]

ಕ್ರಮ ಕೈಗೊಂಡರೂ ಅಪಾಯ ತಪ್ಪಿದ್ದಲ್ಲ!

ಕ್ರಮ ಕೈಗೊಂಡರೂ ಅಪಾಯ ತಪ್ಪಿದ್ದಲ್ಲ!

ಪ್ರತಿಷ್ಠಿತ ಕಂಪೆನಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಭದ್ರತೆಗಾಗಿ ಸಾಕಷ್ಟು ಕ್ರಮ ಕೈಗೊಳ್ಳುತ್ತವೆ ಎಂಬುದು ನಿಜವಾದರೂ, ಇಂದು ಕ್ಯಾಬ್ ಚಾಲಕರಿಂದಲೇ ನಡೆಯುವ ಅತ್ಯಾಚಾರದಂಥ ಘಟನೆಗಳು ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದಕ್ಕೆ ಪ್ರತಿಯೊಬ್ಬ ಮಹಿಳೆಯರಲ್ಲೂ ಭಯ ಮೂಡಿಸುವುದು ಸುಳ್ಳಲ್ಲ.[ಜುಲೈನಿಂದ ಮಹಿಳೆಯರಿಗೆ ನೈಟ್‌ ಶಿಫ್ಟ್‌ ಇಲ್ಲ : ಸರ್ಕಾರ]

ವೃತ್ತಿ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ

ವೃತ್ತಿ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ

ಈ ಬಗ್ಗೆ ಮಾತನಾಡಿದ ನ್ಯಾಶನಲ್ ಅಸೋಸಿಯೇಶನ್ ಫಾರ್ ಸಾಫ್ಟ್ ವೇರ್ ಅಂಡ್ ಸರ್ವಿಸಸ್ ಕಂಪೆನೀಸ್ (nasscom) ನ ಹಿರಿಯ ಉಪಾಧ್ಯಕ್ಷೆ ಸಂಗೀತಾ ಗುಪ್ತಾ, ಈ ನಿರ್ಧಾರದಿಂದ ಮಹಿಳೆಯರಿಗೆ ಉದ್ಯೋಗಾವಕಾಶ ಕಡಿಮೆಯಾಗಬಹುದು ಎಂಬ ಆತಂಕ ವ್ಯಕ್ತಪಡಿದಿದ್ದಾರೆ.[ನೈಟ್ ಶಿಫ್ಟಿಗೆ ಬೆಚ್ಚಿ ಬೀಳುವ ಬೆಂಗಳೂರು ಮಹಿಳೆ]

ಸರ್ಕಾರ ಭದ್ರತೆ ನೀಡಬೇಕು

ಸರ್ಕಾರ ಭದ್ರತೆ ನೀಡಬೇಕು

ಹಾಗೆಯೇ ಮುಂದುವರಿದು, ರಾತ್ರಿ ಪಾಳಿ ಅನ್ನೋದು ಪ್ರಾಜೆಕ್ಟ್ ಮೇಲೆ ಅವಲಂಬಿತವಾಗಿರುತ್ತೆ, ವಿದೇಶಿ ಮೂಲದ ಕಂಪೆನಿಗಳಾದರೆ ಅವುಗಳಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡೋದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ರಾತ್ರಿ ಪಾಳಿಯೇ ಬೇಡ ಎನ್ನುವ ಬದಲು ಮಹಿಳೆಯರಿಗೆ ಸೂಕ್ತ ಭದ್ರತೆ ನೀಡುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮಹಿಳೆಯರ ವೃತ್ತಿ ಬದುಕಿನ ಮೇಲೆ ಸರ್ಕಾರದ ಈ ನಿರ್ಧಾರ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನುತ್ತಾರೆ ಸಂಗೀತಾ ಗುಪ್ತಾ.

ಮಹಿಳೆಯರು ನಿರಾಳ

ಮಹಿಳೆಯರು ನಿರಾಳ

ಕಳೆದ ವರ್ಷವೇ ಸರ್ಕಾರ ಮಹಿಳೆಯರು ರಾತ್ರಿಪಾಳಿಯಲ್ಲಿ ಕೆಲಸ ಮಾಡುವಂತಿಲ್ಲ ಎಂದು ಹೇಳಿದ್ದರೂ, ಐಟಿ ಮತ್ತು ಬಿಟಿ ಕಂಪೆನಿಗಳಿಗೆ ಮಾತ್ರ ರಾತ್ರಿಪಾಳಿಗೆ ಅವಕಾಶ ನೀಡಿತ್ತು. ಆದರೆ ಈ ನಿಯಮವನ್ನು ಐಟಿ- ಬಿಟಿ ಕಂಪೆನಿಗಳಿಗೂ ಅನ್ವಯಿಸುವುದರಿಂದ ಇಲ್ಲಿ ಕೆಲಸ ಮಾಡುವ ಮಹಿಳೆಯರು ನಿರಾಳವಾಗಿದ್ದು ನಿಜವಾದರೂ, ಕಂಪೆನಿಯ ಮಾಲೀಕರು ಮಾತ್ರ ಈ ನಿರ್ಧಾರವನ್ನು ವಿರೋಧಿಸುವುದು ಖಂಡಿತ.[ಮಹಿಳೆಯರಿಗೆ ನೈಟ್ ಶಿಫ್ಟ್ ಕೆಲ್ಸ, ಮೋದಿ ಸಂಪುಟ ಓಕೆ]

English summary
No nightshifts for women working in Information Technology and Biotechnology sectors, joint house legislature pannel of Karnataka recommonded IT and BT Companies of Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X