• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಮುಂದಿನ 5 ವರ್ಷ ಹೊಸ ಅಪಾರ್ಟ್‌ಮೆಂಟ್ ಕಟ್ಟುವಂತಿಲ್ಲ

|

ಬೆಂಗಳೂರು, ಜೂನ್ 27: ಬೆಂಗಳೂರಲ್ಲಿ ನೂತನ ಅಪಾರ್ಟ್‌ಮೆಂಟುಗಳ ನಿರ್ಮಾಣಕ್ಕೆ ಸರ್ಕಾರ ಬ್ರೇಕ್ ಹಾಕಿದೆ.

ಮುಂದಿನ ಐದು ವರ್ಷಗಳ ಕಾಲ ಹೊಸ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಬೇಡಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನೀರಿನ ಅಭಾವವಿದೆ, ನಿತ್ಯ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ಯಾಂಕರ್‌ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ.

ಹೀಗಿರುವಾಗ ನೀರಿನ ಮಿತ ಬಳಕೆ ಮಾಡುವುದು ಕೂಡ ಅನಿವಾರ್ಯವಾಗಿದೆ. ಮುಂದಿನ ಐದು ವರ್ಷ ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯವನ್ನು ಕೈಬಿಡಿ, ಬೆಂಗಳೂರಿನ ಜನತೆಗೆ ನೆಮ್ಮದಿಯಿಂದ ಬದುಕಲು ಸಹಾಯ ಮಾಡಿ ಎಂದು ಹೇಳಿದರು.

ಅಪಾರ್ಟ್‌ಮೆಂಟ್ ಕಟ್ಟಬೇಕು ಎಂದು ಅಡಿಪಾಯ ಹಾಕಿದವರು ಮುಂದಿನ ಐದು ವರ್ಷಗಳ ಕಾಲ ಸುಮ್ಮನೆ ಇರಲೇಬೇಕಾಗಿದೆ. ಬೆಂಗಳೂರಿನ ಪರಿಸ್ಥಿತಿಯೂ ಕೂಡ ಹಾಗೆಯೇ ಇದೆ.

ಈಗಾಗಲೇ ಒಂದು ವರ್ಷದಲ್ಲಿ ಸಾವಿರಾರು ಅಪಾರ್ಟ್‌ಮೆಂಟ್‌ಗಳು ಬೆಂಗಳೂರಲ್ಲಿ ತಲೆ ಎತ್ತುತ್ತಿವೆ. ಅವೆಲ್ಲಕ್ಕೂ ನಿತ್ಯ ಎಷ್ಟು ನೀರು ಬೇಕಾಗುತ್ತದೆ.

ಅದೇ ನೀರು ಉಳಿದರೆ ಸಾವಿರಾರು ಮಂದಿಗೆ ಕುಡಿಯುವ ನೀರಿನ ಚಿಂತೆ ಇರುವುದಿಲ್ಲ. ಹಾಗಾಗಿ ಮುಂದಿನ ಐದು ವರ್ಷಗಳ ಕಾಲ ಅಪಾರ್ಟ್‌ಮೆಂಟ್ ನಿರ್ಮಿಸದಿರುವುದೇ ಒಳಿತು ಎಂದು ಪರಮೇಶ್ವರ ಸಲಹೆ ನೀಡಿದ್ದಾರೆ.

English summary
State government put break on Newly construction of Apartment in Bengaluru. So there will be no new apartment for next five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X