ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31 : ಬೆಂಗಳೂರು ನಗರದಲ್ಲಿ ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕಾಮಗಾರಿ ಆರಂಭಕ್ಕೂ ಮೊದಲು ಬಿಲ್ಡಿಂಗ್ ಪ್ಲಾನ್ ನೀಡಬೇಕಾಗಿಲ್ಲ ಎಂದು ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2, 400 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಮನೆ ನಿರ್ಮಾಣ ಮಾಡುವವರು ಪ್ರಿ ಅಪ್ರೂವಲ್ ಬಿಲ್ಡಿಂಗ್ ಪ್ಲಾನ್ ನೀಡುವುದು ಬೇಕಾಗಿಲ್ಲ. ಬಿಬಿಎಂಪಿ ಪ್ಲಾನ್ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.

ಮನೆ ಮುಂದೆಯೇ ಮಾತಂಗಿ ಮದುವೆ, ಓಬಲೇಸುವಿನ ಮನದಾಸೆ ಮನೆ ಮುಂದೆಯೇ ಮಾತಂಗಿ ಮದುವೆ, ಓಬಲೇಸುವಿನ ಮನದಾಸೆ

ಸರ್ಕಾರದ ಆದೇಶದ ಕುರಿತು ಬಿಬಿಎಂಪಿ ಶೀಘ್ರದಲ್ಲಿಯೇ ಅಧಿಸೂಚನೆ ಹೊಡಿಸಲಿದೆ. ಆದರೆ, ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಈ ಕುರಿತು ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ತಾಜ್ ವೆಸ್ಟೆಂಡ್‌ ಹೋಟೆಲ್‌ಗೆ ದಂಡ ಹಾಕಿದ ಬಿಬಿಎಂಪಿ ತಾಜ್ ವೆಸ್ಟೆಂಡ್‌ ಹೋಟೆಲ್‌ಗೆ ದಂಡ ಹಾಕಿದ ಬಿಬಿಎಂಪಿ

No Need To Take Approval For Building Plan

ಪ್ರಸ್ತುತ ಬೆಂಗಳೂರು ನಗರದಲ್ಲಿ ಮನೆ ನಿರ್ಮಾಣ ಮಾಡುವ ಮೊದಲು ಪ್ರಿ-ಪ್ಲಾನ್ ಯೋಜನೆಯನ್ನು ಸಲ್ಲಿಸಿ ಅನುಮತಿ ಪಡೆಯಬೇಕಿತ್ತು. ಈ ಪ್ಲಾನ್‌ ಅನ್ನು ಇಂಜಿನಿಯರ್‌ ಕೈಯಿಂದ ಮಾಡಿಸಿರಬೇಕಿತ್ತು. ಬಿಬಿಎಂಪಿ ವಲಯ ಅಧಿಕಾರಿಗಳಿಗೆ ಪ್ಲಾನ್ ಸಲ್ಲಿಸಬೇಕಿತ್ತು.

'ಮಾಜಿ'ಗಳಾದರೂ ಸರಕಾರೀ ನಿವಾಸ ಖಾಲಿ ಮಾಡದ 200 ಸಂಸದರು: ಏನ್ ಹೇಳೋಣ ಇವರಿಗೆ? 'ಮಾಜಿ'ಗಳಾದರೂ ಸರಕಾರೀ ನಿವಾಸ ಖಾಲಿ ಮಾಡದ 200 ಸಂಸದರು: ಏನ್ ಹೇಳೋಣ ಇವರಿಗೆ?

ಬಿಬಿಎಂಪಿ ಅಧಿಕಾರಿಗಳು ಸೈಟ್‌ಗೆ ಭೇಟಿ ನೀಡಿ ಕಾಮಗಾರಿ ಆರಂಭಿಸಲು ಅನುಮತಿ ನೀಡುತ್ತಿದ್ದರು. ಪ್ಲಾನ್‌ ಅನ್ನು ಬಿಬಿಎಂಪಿ ವೆಬ್‌ಸೈಟ್‌ಗೆ ಸಹ ಅಪ್ ಲೋಡ್ ಮಾಡಬೇಕಿತ್ತು. ಆದರೆ, ಪ್ಲಾನ್‌ಗೆ ಅನುಮತಿ ನೀಡಲು ಅಧಿಕಾರಿಗಳು ಹಣ ಪಡೆಯುತ್ತಾರೆ ಎಂಬ ಆರೋಪವಿತ್ತು.

ಪ್ಲಾನ್ ಪ್ರಕಾರ ಮನೆ ಕಟ್ಟದ ಪ್ರಕರಣದಲ್ಲಿ ಮನೆ ಮಾಲೀಕರಿಗೆ ದಂಡ ವಿಧಿಸಿದ ಉದಾಹರಣೆಗಳು ಇದ್ದವು. ಬಿಬಿಎಂಪಿ 2, 400 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಮನೆ ನಿರ್ಮಾಣ ಮಾಡುವವರು ಪ್ರಿ ಅಪ್ರೂವಲ್ ಬಿಲ್ಡಿಂಗ್ ಪ್ಲಾನ್ ನೀಡುವುದು ಬೇಕಾಗಿಲ್ಲ ಎಂದು ಹೇಳಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಈ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ. ಮನೆ ಕಟ್ಟುವವರಿಗೆ ಸಿಹಿ ಸುದ್ದಿಯನ್ನು ಬಿಬಿಎಂಪಿ ಈ ಮೂಲಕ ನೀಡಿದೆ.

English summary
If your planning to build house in Bengaluru city spread across lesser than 2,400 square feet no need to take pre approval for building plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X