ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಹಸಿರು ಮಾರ್ಗದ ಪ್ರಯಾಣಿಕರಿಗೆ ಮಹತ್ವದ ಸೂಚನೆ

|
Google Oneindia Kannada News

ಬೆಂಗಳೂರು, ನವೆಂಬರ್ 10 : ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಂಚಾರ ನಡೆಸುವವರಿಗೆ ಬಿಎಂಆರ್‌ಸಿಎಲ್ ಸೂಚನೆಯೊಂದನ್ನು ನೀಡಿದೆ. ಆರ್. ವಿ. ರಸ್ತೆ-ಯಲಚೇನಹಳ್ಳಿ ನಡುವೆ ಮೂರು ದಿನಗಳ ಕಾಲ ಮೆಟ್ರೋ ಸಂಚಾರ ಇರುವುದಿಲ್ಲ.

ಬೆಂಗಳೂರು ಮೆಟ್ರೋ ರೈಲು ನಿಗಮ ( ಬಿಎಂಆರ್) ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನವೆಂಬರ್ 14ರ ಗುರುವಾರ ಬೆಳಗ್ಗೆ 5 ಗಂಟೆಯಿಂದ ನವೆಂಬರ್ 17ರ ಭಾನುವಾರದ ತನಕ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಮೆಟ್ರೋ ಪ್ರಯಾಣದರ ಕಡಿಮೆಯಾಗುತ್ತಾ? ಸಿಎಂ ಸುದ್ದಿಗೋಷ್ಠಿಯಲ್ಲಿ ಏನಂದ್ರು?ಮೆಟ್ರೋ ಪ್ರಯಾಣದರ ಕಡಿಮೆಯಾಗುತ್ತಾ? ಸಿಎಂ ಸುದ್ದಿಗೋಷ್ಠಿಯಲ್ಲಿ ಏನಂದ್ರು?

ಬೊಮ್ಮಸಂದ್ರ ಸಂಪರ್ಕಿಸುವ ಹೊಸ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿನ ವಿದ್ಯುತ್ ಪೂರೈಕೆ ಲೈನ್ ಕಾಮಗಾರಿ ಹಿನ್ನಲೆಯಲ್ಲಿ ಆರ್. ವಿ. ರಸ್ತೆ-ಯೆಲಚೇನಹಳ್ಳಿ ನಡುವಿನ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ರದ್ದುಗೊಳಿಸಲಾಗುತ್ತಿದೆ.

ಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ ಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ

No Metro Service In Greenline From November 14 To 17

ಆರ್. ವಿ. ರಸ್ತೆ-ಯಲಚೇನಹಳ್ಳಿ ನಡುವಿನ ರೈಲು ಸಂಪರ್ಕಕ್ಕೆ ಮಾತ್ರ ತೊಂದರೆಯಾಗಲಿದೆ. ಆರ್. ವಿ. ರಸ್ತೆ-ನಾಗಸಂದ್ರ ನಡುವಿನ ರೈಲು ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಕೋಟ್ಯಂತರ ರೂಪಾಯಿ ನಷ್ಟದಲ್ಲಿ ನಮ್ಮ ಮೆಟ್ರೋಕೋಟ್ಯಂತರ ರೂಪಾಯಿ ನಷ್ಟದಲ್ಲಿ ನಮ್ಮ ಮೆಟ್ರೋ

ಮೆಟ್ರೋ ಸೇವೆ ಸ್ಥಗಿತಗೊಳ್ಳುವ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಿದೆ. ಆರ್. ವಿ. ರಸ್ತೆ-ಯಲಚೇನಹಳ್ಳಿ ನಡುವೆ ಬಸ್ ಸಂಚಾರ ನಡೆಸಲಿದೆ.

ಬೆಳಗ್ಗೆ 5.30 ರಿಂದ ರಾತ್ರಿ 11.45ರ ತನಕ ಆರ್‌. ವಿ. ರಸ್ತೆ ನಿಲ್ದಾಣದಲ್ಲಿ, 4.45 ರಿಂದ ರಾತ್ರಿ 10.30ರ ತನಕ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಬಸ್ ಸಂಚಾರ ನಡೆಸಲಿದೆ. ನವೆಂಬರ್ 14, 15 ಮತ್ತು 16, 2019ರ ತನಕ ಬಸ್ ಸೇವೆ ಇರುತ್ತದೆ.

ನವೆಂಬರ್ 17ರ ಭಾನುವಾರ ಯಲಚೇನಹಳ್ಳಿಯಲ್ಲಿ ಬೆಳಗ್ಗೆ 6.30ರಿಂದ ಆರ್. ವಿ. ರಸ್ತೆಯಲ್ಲಿ 7.15ರಿಂದ ಬಸ್ ಸೇವೆ ಆರಂಭವಾಗಲಿದೆ. ಬನಶಂಕರಿ, ಜೆ. ಪಿ. ನಗರ ರೈಲು ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ನಿಲುಗಡೆಗೊಳ್ಳಲಿದೆ.

ನವೆಂಬರ್ 18ರಂದು ಬೆಳಗ್ಗೆ 5 ಗಂಟೆಗೆ ನಮ್ಮ ಮೆಟ್ರೋ ಸಂಚಾರ ಎಂದಿನಂತೆ ಆರಂಭವಾಗಲಿದೆ. ನೇರಳೆ ಮಾರ್ಗದಲ್ಲಿನ ಸಂಚಾರಕ್ಕೆ ಯಾವುದೇ ಅಡಚಣೆ ಇಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

English summary
No Namma metro service between R.V.Road metro station to Yelachenahalli from November 14 to 17, 2019 due to electrician work. BMRCL arranged BMTC bus to help metro passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X