ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರೇ ಎಚ್ಚರ.. ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ

|
Google Oneindia Kannada News

Recommended Video

ಶೋಕಿ ಮಾಡೋಕೆ ನಿಮ್ಮಪ್ಪನ ಮನೆ ಜಾಗಕ್ಕೆ ಹೋಗಿ | Bellary | R Ashok | Sharath | Rahul | Ravikanth | Sachin

ಬೆಂಗಳೂರು, ಫೆಬ್ರವರಿ.13: ಬೆಂಗಳೂರಿಗರೇ ಎಚ್ಚರ.. ಎಚ್ಚರ.. ಈ ಭಾನುವಾರ ಮೆಟ್ರೋವನ್ನು ನಂಬಿಕೊಂಡು ಏನಾದ್ರೂ ಕೆಲಸವನ್ನು ಇಟ್ಟುಕೊಂಡಿದ್ದರೆ ಈಗಲೇ ಪ್ಲಾನ್ ಚೇಂಜ್ ಮಾಡಿಕೊಳ್ಳಿ. ಏಕೆಂದರೆ ಈ ಭಾನುವಾರ ಹಸಿರು ಮಾರ್ಗದಲ್ಲಿ ಆರ್ ವಿ ರಸ್ತೆಯಿಂದ ಯೆಲಚೇನಹಳ್ಳಿ ನಿಲ್ದಾಣದವರೆಗೂ ಮೆಟ್ರೋ ಸಂಚಾರ ಇರುವುದಿಲ್ಲ.

ಫೆಬ್ರವರಿ.16ರಂದು ರಾಷ್ಟ್ರೀಯ ವಿದ್ಯಾಲಯ ರಸ್ತೆ ಮತ್ತು ಯೆಲಚೇನಹಳ್ಳಿ ನಿಲ್ದಾಣದ ನಡುವಿನ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಬಿಎಂಆರ್ ಸಿಎಲ್ ಎಂ.ಡಿ. ಅಜಯ್ ಸೇಠ್ ಮಾಹಿತಿ ನೀಡಿದ್ದಾರೆ.

 ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಎಲ್ಲಿ ಎಷ್ಟು? ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಎಲ್ಲಿ ಎಷ್ಟು?

ರೀಚ್-4 ವಿಸ್ತರಣೆ ಹಿನ್ನೆಲೆಯಲ್ಲಿ ಯೆಲಚೇನಹಳ್ಳಿ ವಿದ್ಯುತ್ ಉಪಕೇಂದ್ರದಿಂದ ಯೆಲಚೇನಹಳ್ಳಿ ಮೆಟ್ರೋ ನಿಲ್ದಾಣ ಮತ್ತು ಅಂಜನಾಪುರ ನಿಲ್ದಾಣದವರೆಗೂ ವಿದ್ಯುತ್ ಕೇಬಲ್ ಅಳವಡಿಕೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

No Metro Service Between RV Road To Yelachenahalli On This Sunday

ನಾಗಸಂದ್ರ-ಆರ್ ವಿ ರಸ್ತೆವರೆಗೂ ಸಂಚಾರ ಸುಗಮ:

ವಿದ್ಯುತ್ ಕೇಬಲ್ ಅಳವಡಿಕೆ ಹಿನ್ನೆಲೆಯಲ್ಲಿ ಆರ್ ವಿ ರಸ್ತೆ ಮತ್ತು ಯೆಲಚೇನಹಳ್ಳಿ ನಿಲ್ದಾಣದವರೆಗೂ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ ನಾಗಸಂದ್ರದಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆವರೆಗೂ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಬಿಎಂಆರ್ ಸಿಎಲ್ ಎಂ.ಡಿ. ಅಜಯ್ ಸೇಠ್ ತಿಳಿಸಿದ್ದಾರೆ. ಇನ್ನು, ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆಯ ನೇರಳೆ ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

English summary
Banglore Breaking: No Metro Service Between RV Road To Yelachenahalli On This Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X