ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಐಷಾರಾಮಕ್ಕೆ ಕತ್ತರಿ

By Kiran B Hegde
|
Google Oneindia Kannada News

ಬೆಂಗಳೂರು, ನ. 21: ಪ್ರಸಕ್ತ ವರ್ಷ ಬೆಳಗಾವಿಯಲ್ಲಿ ಆಯೋಜಿಸಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಶಾಸಕರಿಗೆ ಐಷಾರಾಮಿ ಸೌಲಭ್ಯ ಸಿಗುವುದು ಅನುಮಾನ.

ಹಿಂದಿನ ಅಧಿವೇಶನಗಳಲ್ಲಿ ಶಾಸಕರಿಗಾಗಿ ಉನ್ನತ ದರ್ಜೆಯ ಹೋಟೆಲ್‌ನಲ್ಲಿ ಕೋಣೆ ಕಾಯ್ದಿರಿಸಲಾಗಿತ್ತು. ಓಡಾಟಕ್ಕಾಗಿ ವಿಶೇಷ ಕಾರು ಹಾಗೂ ಭೂರಿ ಬೋಜನ ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚವಾಗಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಐಷಾರಾಮಿ ಸೌಲಭ್ಯಗಳನ್ನು ಮೊಟಕುಗೊಳಿಸಲು ಸರ್ಕಾರ ಮುಂದಾಗಿದೆ. [ಸಾಲು ಸಾಲು ಪ್ರತಿಭಟನೆಗೆ ಸಜ್ಜು]

suvarna-soudha

ಏನೇನು ಸಿಗಲ್ಲ?: ಬೆಳಗಾವಿಯಿಂದ ಸುವರ್ಣ ಸೌಧಕ್ಕೆ ತೆರಳಲು ಪ್ರತ್ಯೇಕ ಕಾರು ಬದಲು, ಸಾಮೂಹಿಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನ ಸಾಮಾನ್ಯ ಊಟ ನೀಡಲಾಗುವುದು. ಆದರೆ, ರಾತ್ರಿ ಊಟದ ವ್ಯವಸ್ಥೆ ಶಾಸಕರದ್ದೇ ಜವಾಬ್ದಾರಿ. ಬೆಂಬಲಿಗರಂತೂ ಸರ್ಕಾರಕ್ಕೆ ಸಂಬಂಧವಿಲ್ಲ. ಶಾಸಕರಿಗೆ ವಿಶೇಷ ಭತ್ಯೆ ನೀಡುವುದಿಲ್ಲ. ಅಧಿಕಾರಿಗಳು ಹಾಗೂ ಪತ್ರಕರ್ತರಿಗೂ ಇದೇ ವ್ಯವಸ್ಥೆ. [10 ದಿನಕ್ಕೆ 14 ಕೋಟಿ ಖರ್ಚು]

ಈ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

English summary
No luxurious felicity for MLAs in this winter assembly session of Belagavi. State government thinking to cut down expenditures of allowance of MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X