ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮತ್ತೆ ಲಾಕ್‌ಡೌನ್ ಮಾಡುವ ಪ್ರಶ್ನೆ ಇಲ್ಲ': ಟಾಸ್ಕ್ ಪೋರ್ಸ್

|
Google Oneindia Kannada News

ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಮಹಾಸ್ಫೋಟವಾಗಿದೆ. ಹಾಗಾಗಿ, ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಆಗುತ್ತಾ ಎಂಬ ಚರ್ಚೆ ತೀವ್ರವಾಗಿ ನಡೆಯುತ್ತಿದೆ.

Recommended Video

Congree Cycle Rally against Fuel hike : ಸೈಕಲ್ ಏರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು|Oneindia Kannada

ಲಾಕ್‌ಡೌನ್‌ ಮಾಡುವ ಬಗ್ಗೆ ಈವರೆಗೂ ರಾಜ್ಯ ಸರ್ಕಾರ ತೀರ್ಮಾನಿಸಿಲ್ಲ. ಆದರೂ, ತಜ್ಞರ ವರದಿ, ಟಾಸ್ಕ್ ಪೋರ್ಸ್ ಅಭಿಪ್ರಾಯದ ನಂತರ ಸರ್ಕಾರದ ನಿಲುವು ಬದಲಾಗಬಹುದು ಎಂಬ ಕುತೂಹಲ ಕಾಡುತ್ತಿತ್ತು.

ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ಸಫಲ: ಸರ್ಕಾರದ ಬೇಡಿಕೆ ಒಪ್ಪಿಗೆಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ಸಫಲ: ಸರ್ಕಾರದ ಬೇಡಿಕೆ ಒಪ್ಪಿಗೆ

ಆದರೆ, ಟಾಸ್ಕ್ ಪೋರ್ಸ್ ಸಭೆಯಲ್ಲಿ ಲಾಕ್‌ಡೌನ್‌ ಕುರಿತು ಚರ್ಚೆಯೇ ಆಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ವಿಧಾನಸೌದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಟಾಸ್ಕ್ ಪೋರ್ಸ್ ಸಭೆ ನಡೆಯಿತು. ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ ''ಮತ್ತೆ ಲಾಕ್‌ಡೌನ್ ಮಾಡುವ ಪ್ರಶ್ನೆ ಇಲ್ಲ'' ಎಂದಿದ್ದಾರೆ.

No Lockdown in Karnataka Said Basavaraj Bommai

''ಇವತ್ತಿನ ಟಾಸ್ಕ್ ಪೋರ್ಸ್ ಸಭೆಯ ಅಜೆಂಡಾದಲ್ಲಿ ಲಾಕ್‌ಡೌನ್‌ ವಿಚಾರ ಇರಲಿಲ್ಲ. ಹೀಗಾಗಿ ನಾವು ಲಾಕ್‌ಡೌನ್ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿಲ್ಲ. ಕೊವಿಡ್ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ‌ ಮತ್ತಷ್ಟು ಅನುಕೂಲ ಮಾಡಿಕೊಡುವ ಬಗ್ಗೆ ಚರ್ಚೆ ಮಾಡಿದ್ದೇವೆ'' ಎಂದು ಮಾಹಿತಿ ನೀಡಿದ್ದಾರೆ.

''ವೈರಲ್ ಲೋಡಿಂಗ್ ಟೆಸ್ಟ್ ಬಗ್ಗೆ, ಸಮನ್ವಯತೆ ಬಗ್ಗೆ, ಖಾಸಗಿ ಕಾಲೇಜ್, ಖಾಸಗಿ ಆಸ್ಪತ್ರೆಗಳನ್ನ ಬಳಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಟಾಸ್ಕ್‌ಫೋರ್ಸ್ ಅಜೆಂಡಾದಲ್ಲಿ ಲಾಕ್‌ಡೌನ್ ವಿಚಾರ ಇರಲಿಲ್ಲ. ಹೀಗಾಗಿ ಅನೌಪಚಾರಿಕವಾಗಿಯೂ ಕೂಡ ಚರ್ಚೆ ಮಾಡಿಲ್ಲ'' ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದಾರೆ.

English summary
No Lockdown in Karnataka, we did not discuss about lockdown in Task force meeting, Home minister Basavaraj Bommai clarified After Task force meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X