ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಲಾಕ್‌ಡೌನ್? ಅಥವಾ ಸೀಲ್‌ಡೌನ್? ಸಚಿವರ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಜೂ. 25: ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೇ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮೂಲಕ ಸೋಂಕು ಹರಡುವುದನ್ನು ತಡೆಯಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.

Recommended Video

Covid update : almost 17000 cases in the last 24 hours in India | Oneindia Kannada

ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯುವ ಕುರಿತು ಬೆಂಗಳೂರು ಶಾಸಕರು, ಸಂಸದರು ಹಾಗೂ ಸಚಿವರ ಸಭೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಿತು. ನಂತರ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಬೆಂಗಳೂರಿನಲ್ಲಿ ಯಾವುದೇ ಲಾಕ್‌ಡೌನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 1,791 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ, 505 ಜನರು ಗುಣಮುಖರಾಗಿದ್ದು, 78 ಜನರು ಮರಣ ಹೊಂದಿದ್ದಾರೆ.

100 ಆ್ಯಂಬುಲೆನ್ಸ್‌ಗಳು

100 ಆ್ಯಂಬುಲೆನ್ಸ್‌ಗಳು

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು 100 ಆಂಬುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಎರಡು ವಾರ್ಡ್‌ಗಳಿಗೆ ಒಂದರಂತೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಶೀಘ್ರವೇ ಬೆಂಗಳೂರಿನಲ್ಲಿ ಕೊರೊನಾ ವೈರಸ್‌ ಚಿಕಿತ್ಸೆಗೆ 5 ಸಾವಿರ ಬೆಡ್ ವ್ಯವಸ್ಥೆ ಕಲ್ಪಿಸಲು ತೀರ್ಮಾನ ಮಾಡಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತೆ ರಾಜ್ಯದಲ್ಲಿ ಮತ್ತೆ "ಲಾಕ್‌ಡೌನ್' ಜಾರಿ ಕುರಿತು ಸಂಪುಟದಲ್ಲಿ ಚರ್ಚೆ ಆಗಿಲ್ಲ

ಶೇಕಡಾ 61ರಷ್ಟು ಗುಣಮುಖ

ಶೇಕಡಾ 61ರಷ್ಟು ಗುಣಮುಖ

ರಾಜ್ಯದಲ್ಲಿ ಕೊರೊನಾ ವೈರಸ್‌ನಿಂದ ಶೇಕಡಾ 61 ರಷ್ಟು ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 3,716 ಕೋವಿಡ್ ಪಾಸಿಟಿವ್ ರೋಗಿಗಳು ಮಾತ್ರ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಳೆ ಬೆಂಗಳೂರಿನ ಎಲ್ಲ ಪಕ್ಷಗಳ ಶಾಸಕರು, ಸಂಸದರ ಸಭೆ ಮಾಡುತ್ತೇವೆ. ಸರ್ವ ಪಕ್ಷಗಳ ಸಲಹೆ ಪಡೆದು ಮುಂದುವರಿಯುತ್ತೇವೆ ಎಂದಿದ್ದಾರೆ.

ಲಾಕ್‌ಡೌನ್ ಬದಲಿಗೆ ಸೀಲ್‌ಡೌನ್

ಲಾಕ್‌ಡೌನ್ ಬದಲಿಗೆ ಸೀಲ್‌ಡೌನ್

ಕೊರೊನಾ ವೈರಸ್ ಹೆಚ್ಚಿರುವ ವಾರ್ಡ್‌ಗಳಲ್ಲಿ ಸೀಲ್‌ಡೌನ್ ಮುಂದುವರಿಯುತ್ತದೆ. ಲಾಕ್‌ಡೌನ್ ಮಾಡುವಂತೆ ಶ್ರೀಮಂತ ವರ್ಗ ಬೇಡಿಕೆ ಇಟ್ಟಿದೆ. ಆದರೆ ಕೂಲಿ ಕಾರ್ಮಿಕರು ಲಾಕ್‌ಡೌನ್ ಬೇಡ ಎಂದಿದ್ದಾರೆ.

ಮತ್ತಷ್ಟು ಕಠಿಣಕ್ರಮ: ಬೆಂಗಳೂರಿಗರಿಗೆ ಸಿಎಂ ಬಿಎಸ್‌ವೈ ಎಚ್ಚರಿಕೆಮತ್ತಷ್ಟು ಕಠಿಣಕ್ರಮ: ಬೆಂಗಳೂರಿಗರಿಗೆ ಸಿಎಂ ಬಿಎಸ್‌ವೈ ಎಚ್ಚರಿಕೆ

ನಾವು ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡಬೇಕಾಗುತ್ತದೆ. ಶೇಕಡಾ 85 ರಷ್ಟು ಜನರು ಲಾಕ್‌ಡೌನ್ ಬೇಡ ಎಂದಿದ್ದಾರೆ. ಹೀಗಾಗಿ ಬಡವರ ಪರ ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಾಜಕೀಯ ಬಿಟ್ಟು ಸಲಹೆ ಕೊಡಿ

ರಾಜಕೀಯ ಬಿಟ್ಟು ಸಲಹೆ ಕೊಡಿ

ಇದೊಂದು ರೀತಿ ಯುದ್ಧದ ಸಮಯ. ಯುದ್ಧದ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ. ಕಾಂಗ್ರೆಸ್ ನಾಯಕರು ರಾಜಕೀಯ ಬಿಟ್ಟು ಸಲಹೆ ನೀಡಲಿ. ರಾಜ್ಯದಲ್ಲಿ ಅಥವಾ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರುವ ಸ್ಥಿತಿಯಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ಆದರೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

English summary
Revenue Minister R Ashoka clarified that Bengaluru will not be locked down again
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X